ಬೆಂಗಳೂರು: ಸರ್ಕಾರದ 50:50 ರೂಲ್ಸ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಫುಲ್, ವಿಮಾನದಲ್ಲಿ ಫುಲ್ ಸೀಟ್ ಬರಬಹುದು. ಇಲ್ಲಿ 50:50 ರೂಲ್ಸ್ ಅಂತೆ. ನಾನು ನಿನ್ನೆ ತಾನೆ ಹೈದರಾಬಾದ್ನಿಂದ ಫ್ಲೈಟ್ನಲ್ಲಿ ಬಂದೆ. ವಿಮಾನದಲ್ಲಿ ಇರೋ ಸೀಟ್ ಫುಲ್ ಮಾಡಿಕೊಂಡು ಬಂದ್ರು. ಇಲ್ಲಿ ಅಂತರ ಇರಬೇಕಂತೆ. ಬೇರೆ ದೇಶಗಳಲ್ಲಿ ಫ್ರೀ ಬಿಟ್ಟಿಲ್ಲವಾ? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಲಸಿಕೆ (Vaccine) ಹಾಕಿ ಜನರಿಗೆ ಸಹಾಯ ಮಾಡಲಿ. ಕಿರುಕುಳ ಕೊಡುವುದನ್ನ ಸರ್ಕಾರ ನಿಲ್ಲಿಸಲಿ ಅಂತ ವಾಗ್ದಾಳಿ ನಡೆಸಿದ್ದಾರೆ.
ನೀರು, ವಿದ್ಯುತ್, ಹಾಲಿನ ದರ ಹೆಚ್ಚಳ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಜನರಿಗೆ ಮೊದಲು ಆದಾಯ ಸಿಗುವ ಕೆಲಸ ಮಾಡಲಿ. ಆದಾಯ ಬರುವ ಕೆಲಸ ಮಾಡಿ ಆಮೇಲೆ ದರ ಏರಿಸಲಿ ಎಂದು ಅಭಿಪ್ರಾಯಪಟ್ಟರು. ಕೊರೊನಾ ಕಡಿಮೆ ಕೇಸ್ ಇದ್ದಾಗ ಕರ್ಫ್ಯೂ ಮಾಡಿದ್ರು. ಕೇಸ್ ಹೆಚ್ಚಾದಾಗ ಕರ್ಫ್ಯೂ ತೆಗೆದಿದ್ದಾರೆ. ರೈತರು ನಷ್ಟ ಅನುಭವಿಸಿದ್ರೂ ಕಾರ್ಯಕ್ರಮ ಕೊಟ್ಟಿಲ್ಲ. ಸಿಮೆಂಟ್, ಕಬ್ಬಿಣದ ದರ ಇಳಿಸಲು ಪ್ರಯತ್ನಿಸಿದ್ರಾ? ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ. ಅವೈಜ್ಞಾನಿಕ ರೂಲ್ಸ್ ಬೇಡ ಅಂತ ಶಿವಕುಮಾರ್ ಹೇಳಿದರು.
ಪಾದಯಾತ್ರೆ ಕಾರಣಕ್ಕೆ ಕರ್ಪ್ಯೂ ತಂದ್ರು. ಜನರಿಗೆ ಬಹಳ ನಷ್ಟ ಆಗುವ ರೀತಿ ನಡೆದುಕೊಂಡ್ರು. ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ. ಲಂಡನಲ್ಲಿ ಎಲ್ಲವೂ ಫ್ರೀ ಬಿಟ್ಟಿಲ್ಲವಾ. ಆಂಧ್ರ, ತೆಲಂಗಾಣದಲ್ಲಿ ಯಾವುದೇ ಕರ್ಪ್ಯೂ ಇಲ್ಲ. ಇಲ್ಲಿ ಯಾಕೆ ಕರ್ಪ್ಯೂ ಜಾರಿ ಮಾಡಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ದರ ಏರಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ: ಸಿಎಂ ಬೊಮ್ಮಾಯಿ
ಹಾಲು, ನೀರು, ವಿದ್ಯುತ್ ದರ ಏರಿಕೆ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದರ ಏರಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಅವಸರದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುವುದಿಲ್ಲ. ಎಲ್ಲಾ ಆಯಾಮಗಳಿಂದಲೂ ಚರ್ಚೆ ಮಾಡುತ್ತೇವೆ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪಗಳು ಬರೋದು ಸಹಜ ಎಂದಿದ್ದಾರೆ. ವೀಕೆಂಡ್ ಕರ್ಫ್ಯೂ ರದ್ದು ನಿರ್ಧಾರ ಒತ್ತಡದಿಂದ ಮಾಡಿದ್ದಲ್ಲ. ಕೊರೊನಾ ಕೇಸ್ ಹೆಚ್ಚಿದ್ದರೂ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ. ಕೊರೊನಾ ಸೋಂಕಿತರ ಗುಣಮುಖ ದರವೂ ಹೆಚ್ಚಿದೆ. ಹೀಗಾಗಿ ಜನರಿಗೆ ಸಮಸ್ಯೆ ಆಗಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತ ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ
ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರಿಯಾಂಕಾ ಗಾಂಧಿ; ಉಲ್ಟಾ ಹೊಡೆದಿದ್ದು ಯಾಕೆ?
ಕೋಲಾರ: ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಇಬ್ಬರ ದುರ್ಮರಣ; ತಿರುಪತಿಯಿಂದ ವಾಪಸಾಗುವಾಗ ಘಟನೆ
Published On - 12:13 pm, Sat, 22 January 22