ವೀಕೆಂಡ್ ಕರ್ಫ್ಯೂ ತೆರೆವುಗೊಳಿಸಿದ ಬಳಿಕ ರಾಜ್ಯದಲ್ಲಿ ಮೊದಲ ಮದುವೆ; ಕೇವಲ 30 ಜನ ಭಾಗಿ
ವೀಕೆಂಡ್ ಕರ್ಫ್ಯೂ ತೆರೆವುಗೊಳಿಸಿದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಮದುವೆ ನಡೆದಿದೆ. ಯುಎಸ್ನ ಬಂದಿದ್ದ ಹೊಸ ಜೊಡಿ ವಧು ಕೃತಿ ಮತ್ತು ವರ ಅಶ್ವಿನ್ ಅವರ ವಿವಾಹ ಸಮಾರಂಭವೂ ಕೇವಲ 30 ಜನರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮಗಳು ಜರುಗಿದವು.
ರಾಜ್ಯ ಸರ್ಕಾರ ನಿನ್ನೆಯಷ್ಟೇ ವೀಕೆಂಡ್ ಕರ್ಫ್ಯೂವನ್ನು ತೆರೆವುಗೊಳಿಸಿದೆ. ಜನರ ಜೀವ ಮತ್ತು ಜೀವನವನ್ನು ಗನಮದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ವೀಕೆಂಡ್ ಕರ್ಫ್ಯೂ ವೇಳೆ ಮದುವೆಗೆ ಅವಕಾಶ ಇದ್ದರೂ ಯಾರು ಮದುವೆ ಆಗಿರಲಿಲ್ಲ. ಆದರೆ ವೀಕೆಂಡ್ ಕರ್ಫ್ಯೂ ತೆರೆವುಗೊಳಿಸಿದೆ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಮದುವೆ ನಡೆಯುತ್ತಿದೆ. ಯುಎಸ್ನ ಬಂದಿದ್ದ ಹೊಸ ಜೊಡಿ ವಧು ಕೃತಿ ಮತ್ತು ವರ ಅಶ್ವಿನ್ ಅವರ ವಿವಾಹ ಸಮಾರಂಭವೂ ಕೇವಲ 30 ಜನರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮಗಳು ಜರುಗಿದವು. ಎರಡು ವಾರಗಳ ಬಳಿಕ ರಾಜದಲ್ಲಿ ಮೊದಲ ಮದುವೆ ಸಮಾರಂಭ ಜನರಿಲ್ಲದೆ ನಡೆಯುತ್ತಿದ್ದು, ಹೆಚ್ಚು ಜನರ ಮಿತಿಗೊಳಿಸುವಂತೆ ನವ ವಧು-ವರರು ಮನವಿ ಮಾಡಿಕೊಂಡಿದ್ದಾರೆ.
ಮದುವೆಗೆ ಬರಬೇಡಿ ಎಂದು ಮನವಿ
ಇನ್ನೂ ಚಾವರಾಜನಗರದ ವಧುವೊಬ್ಬರು ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಇಂದು ಮತ್ತು ನಾಳೆ ನಡೆಯಲಿರುವ ಮದುವೆಗಾಗಿ ಮದುಮಗಳು ಹೀಗೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬಸ್ಥರು ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆಯನ್ನ ಸಂಬಂಧಿಕರಿಗೆ ಹಂಚಿದ್ದರು. ಆದರೆ ಕೋವಿಡ್ ಕಾರಣದಿಂದ ಇದೀಗ ಮನೆಯಲ್ಲಿಯೇ ಸರಳ ವಿವಾಹ ಮಾಡಿಕೊಳ್ಳಲು ವಧು-ವರ ಸೇರಿದಂತೆ ಎರಡೂ ಕಡೆಯ ಕುಟುಂಬಸ್ಥರೆಲ್ಲಾ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ವಿ.ಸಿ. ಹೊಸೂರು ಗ್ರಾಮದ ಸುಶ್ಮಾ ಹಾಗೂ ಚನ್ನಪ್ಪನಪುರದ ಶ್ರೇಯಸ್ ನಡುವೆ ನಿಶ್ಚಯವಾಗಿರುವ ಮದುವೆ ಇದಾಗಿದೆ. ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಬೇಕಿತ್ತು. ಆದ್ರೆ ಸದ್ಯ ವಧುವಿನ ಸ್ವಗೃಹದಲ್ಲೆ ಸರಳವಾಗಿ ವಿವಾಹವಾಗಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಮದುವೆ ಕಾರ್ಯಕ್ರಮಕ್ಕೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವಧು ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಕೊವಿಡ್ ನಿರ್ವಹಣೆ, ಹೊಸ ಗೈಡ್ಲೈನ್ಸ್ಗೆ ಸಂಬಂಧಿಸಿದಂತೆ ನಿನ್ನೆ (ಜನವರಿ 21) ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ತಜ್ಞರು, ಕೆಲ ಸಚಿವರು ನಿನ್ನೆಯ ಸಭೆಯಲ್ಲಿ ಭಾಗಿಯಾಗಿದ್ದರು. ನೈಟ್, ವೀಕೆಂಡ್ ಕರ್ಫ್ಯೂ ತೆಗೆಯುವಂತೆ ಸಲಹೆ ನೀಡಿದ್ದಾರೆ. ಕೆಲ ಕಾಂಗ್ರೆಸ್ ನಾಯಕರು ಈ ಬಗ್ಗೆ ನಮಗೆ ಸಲಹೆಯನ್ನು ನೀಡಿದ್ದಾರೆ. ಕುಮಾರಸ್ವಾಮಿ ಶಾಲೆ ಮುಚ್ಚುವಂತೆಯೂ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಲಹೆ, ತಜ್ಞರು ನೀಡಿರುವ ಸಲಹೆ, ನಾಯಕರು ನೀಡಿರುವ ಸಲಹೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದರು.
ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಮಾಡುತ್ತೇವೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸುತ್ತೇವೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆಗೆ ಸ್ಪಷ್ಟ ಮಾಹಿತಿ ನೀಡಲಾಯಿತು. ಅಮೆರಿಕದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಹೀಗಾಗಿ ಅಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಸಾವುಗಳು ಕೂಡ ಹೆಚ್ಚಾಗಿವೆ. ಆದರೆ ರಾಜ್ಯದಲ್ಲಿ ಅಂತಹ ಯಾವುದೇ ಘಟನೆ ನಡೆಯಬಾರದು. ಬ್ಯುಸಿನೆಸ್ ಒಂದೇ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನಿಸಲ್ಲ. ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸುತ್ತೇವೆ ಎಂದು ಸಚಿವ ಆರ್.ಅಶೋಕ್ ನಿನ್ನೆ ಹೇಳಿದ್ದರು. ಅದರಂತೆಯೇ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ನಿನ್ನೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ;
ಕರ್ನಾಟಕ ಸರ್ಕಾರದ 50:50 ರೂಲ್ಸ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ
ಆಸ್ಕರ್ ರೇಸ್ನಲ್ಲಿ ‘ಜೈ ಭೀಮ್’ ಮತ್ತು ‘ಮರಕ್ಕರ್’; ಭಾರತೀಯ ಚಿತ್ರಕ್ಕೆ ಈ ಬಾರಿಯಾದರೂ ಒಲಿಯುತ್ತಾ ಪ್ರಶಸ್ತಿ?