ಗೇಟ್ ವೇ ಆಫ್ ಬೆಂಗಳೂರಿನ ಫ್ಲೈಓವರ್ ದುರಸ್ತಿ ಕಾರ್ಯ ಇನ್ನೂ ಒಂದು ವಾರ ವಿಳಂಬ; ವಾಹನ ಸಂಚಾರಕ್ಕೆ ಸಮಸ್ಯೆ
ಸತತ 26 ದಿನದಿಂದಲೂ NHAI ಅಧಿಕಾರಿಗಳು ಕಾಮಗಾರಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದು ವಾರಗಳ ಕಾಲ ವಾಹನ ಸವಾರರು ಸಂಚಾರ ದಟ್ಟಣೆಯ ನಡುವೆಯೇ ಸಾಗಬೇಕಿದೆ. NHAI ತಾಂತ್ರಿಕ ಮುಖ್ಯಸ್ಥ ಪಾರ್ವತೀಶಮ್ ಈ ಬಗ್ಗೆ ಮೌಖಿಕ ಹೇಳಿಕೆ ನೀಡಿದ್ದಾರೆ.
ನೆಲಮಂಗಲ: ಗೇಟ್ ವೇ ಆಫ್ ಬೆಂಗಳೂರಿನ ಬ್ರಿಡ್ಜ್ ದುರಸ್ತಿ ಕಾರ್ಯ ಸರಿಯಾಗಿ ನಡೆದಿಲ್ಲ. 26 ದಿನ ಕಳೆದರೂ ಗೇಟ್ ವೇ ಆಫ್ ಬೆಂಗಳೂರಿನ ಬ್ರಿಡ್ಜ್ ಸರಿಯಾಗಿಲ್ಲ. 4 ಕಿಲೋ ಮೀಟರ್ ಉದ್ದದ ನಾಗಸಂದ್ರ- ಗೊರಗುಂಟೆಪಾಳ್ಯ ಬ್ರಿಡ್ಜ್ ಇನ್ನೂ ಸರಿಯಾಗಿಲ್ಲ. ಡಿಸೆಂಬರ್ 25 ರಂದು 101, 102, 103 ರ ಪಿಲ್ಲರ್ ನಡುವಿನ ಸ್ಲಾಬ್‌ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಉಂಟಾಗಿತ್ತು. ಈ ಸಂಬಂಧ ಟೆಕ್ನಿಕಲ್ ಹೆಡ್ ದೆಹಲಿಯಿಂದ ಬಂದಿದ್ದರು. ಅಹಮದ್ ಶಾಬಜ್ ಅಲಂ ಬಂದು ಸಮಸ್ಯೆ ಗುರ್ತಿಸಿದ್ದರು. ಸಮಯ ಪ್ರಜ್ಞೆಯಿಂದ ಬೆಂಗಳೂರಿನಲ್ಲಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ತಪ್ಪಿತ್ತು.
ಆದರೆ, ಅದು ಇನ್ನೂ ದುರಸ್ತಿ ಆಗಿರದ ಬಗ್ಗೆ ಅಸಮಾಧಾನ ಕೇಳಿಬಂದಿದೆ. ಕೇವಲ 10 ವರ್ಷದಲ್ಲೇ ಪ್ಲೈಒವರ್ ಕಳಪೆ ಕಾಮಗಾರಿ ಬಯಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 10 ವರ್ಷದ ಟೆಂಡರ್ ಮುಗಿದಿರೋ ಹಿನ್ನೆಲೆ ಹೊಸ ಸಾಯಿ ಟೋಲ್ ಸಂಸ್ಥೆ ಚಾರ್ಜ್ ವೇಳೆ ಘಟನೆ ಬೆಳಕಿಗೆ ಬಂದಿದೆ. ಫ್ಲೈ ಓವರ್‌ನಲ್ಲಿ 16 ರೋಪ್‌ಗಳನ್ನ ಅಳವಡಿಸಿದ್ದು ಅದರಲ್ಲಿ ಎರಡು ರೋಪ್‌ನ ಸೆಗ್ಮೆಂಟ್ ಜಾಯಿಂಟ್ ಮಾತ್ರ ಸಮಸ್ಯೆಯಾಗಿತ್ತು ಎಂದು ತಿಳಿದುಬಂದಿದೆ.
ಫ್ಲೈ ಓವರ್‌ನಲ್ಲಿ ಒಟ್ಟು 116 ಪಿಲ್ಲರ್‌ಗಳಿದ್ದು ಅದರಲ್ಲಿ 101, 102, 103ನೇ ಪಿಲ್ಲರ್ ನಡುವಿನ ಸ್ಲಾಬ್‌ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಎದುರಾಗಿದೆ. ಸತತ 26 ದಿನದಿಂದಲೂ NHAI ಅಧಿಕಾರಿಗಳು ಕಾಮಗಾರಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದು ವಾರಗಳ ಕಾಲ ವಾಹನ ಸವಾರರು ಸಂಚಾರ ದಟ್ಟಣೆಯ ನಡುವೆಯೇ ಸಾಗಬೇಕಿದೆ. NHAI ತಾಂತ್ರಿಕ ಮುಖ್ಯಸ್ಥ ಪಾರ್ವತೀಶಮ್ ಈ ಬಗ್ಗೆ ಮೌಖಿಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: 102, 103ನೇ ಪಿಲ್ಲರ್ ನಡುವಿನ ರೋಪ್ ಸಡಿಲ; ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ ಕಾರ್ಯ, ಬೆಳ್ಳಂ ಬೆಳಿಗ್ಗೆ ಟ್ರಾಫಿಕ್ ಜಾಮ್
ಇದನ್ನೂ ಓದಿ: Bengaluru: 8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ; ವಾಹನ ಸಂಚಾರ ಸ್ಥಗಿತ