ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆ ಸಹೋದರನನ್ನೇ ಕಿಡ್ನ್ಯಾಪ್ ಮಾಡಿದ ಪ್ರೇಮಿ! ಆರೋಪಿ ಅರೆಸ್ಟ್
ಶ್ರೀನಿವಾಸ ಎರಡು ತಿಂಗಳಿನಿಂದ ವೆಂಕಟೇಶ್ ಸಹೋದರಿಯನ್ನ ಪ್ರೀತಿಸುತ್ತಿದ್ದನಂತೆ. ಆಕೆ ಕೈಕೊಟ್ಟ ಹಿನ್ನೆಲೆ ಆಕೆಯ ಸಹೋದರನ್ನೆ ಆರೋಪಿ ಅಪಹರಣ ಮಾಡಿದ್ದ.
ಬೆಂಗಳೂರು: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯ ಸಹೋದರನನ್ನ ಕಿಡ್ನ್ಯಾಪ್ (Kidnap) ಮಾಡಿದ್ದ. ಕಿಡ್ನಾಪ್ ಮಾಡಿದ್ದ ಆರೋಪಿ ಶ್ರೀನಿವಾಸನನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು (Police) ಬಂಧಿಸಿದ್ದಾರೆ. ಶ್ರೀನಿವಾಸ ಎರಡು ತಿಂಗಳಿನಿಂದ ವೆಂಕಟೇಶ್ ಸಹೋದರಿಯನ್ನ ಪ್ರೀತಿಸುತ್ತಿದ್ದನಂತೆ. ಆಕೆ ಕೈಕೊಟ್ಟ ಹಿನ್ನೆಲೆ ಆಕೆಯ ಸಹೋದರನ್ನೆ ಆರೋಪಿ ಅಪಹರಣ ಮಾಡಿದ್ದ. ಕಿಡ್ನಾಪ್ ಮಾಡಿ ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ. ಈ ಘಟನೆ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನನ್ವಯ ಪೊಲೀಸರು ಆರೋಪಿ ಶ್ರೀನಿವಾಸನನ್ನು ಅರೆಸ್ಟ್ ಮಾಡಿದ್ದಾರೆ.
ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕನಿಂದ ಲೈಂಗಿಕ ಕಿರುಕುಳ ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕ ಪ್ರಭು ನಾಯಕ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಂತ ಆರೋಪಿ ಕೇಳಿಬಂದಿದೆ. ಬಂಧಿತ ಪ್ರಭು ನಾಯಕ್ ಮೇಲೆ 11 ಎಫ್ಐಆರ್ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ದೈಹಿಕ ಶಿಕ್ಷಕ ನಾಪತ್ತೆಯಾಗಿದ್ದ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಎಸ್ಪಿ ಸೂಚನೆ ನೀಡಿದ್ದು, ಎಸ್ಪಿ ಆದೇಶದ ಮೇರೆಗೆ ಪೊಲೀಸರು ಅಲರ್ಟ್ ಆಗಿದ್ದಾರೆ.
ದರೋಡೆ ಮಾಡಿದ್ದ ಆರೋಪಿ ಅರೆಸ್ಟ್ ಬೆಂಗಳೂರಿನ SBI ಶಾಖೆಯಲ್ಲಿ ಸುಲಿಗೆ ಮಾಡಿದ್ದವನನ್ನು ಸೆರೆ ಹಿಡಿಯಲಾಗಿದೆ. ಸುಲಿಗೆ ಮಾಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಧೀರಜ್ ಎಂಬಾತತನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ 40 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆನ್ಲೈನ್ ಌಪ್ಗಳ ಮೂಲಕ ಲೋನ್ ಪಡೆದಿದ್ದ. ಸಾಲ ತೀರಿಸಲು ಸುಲಿಗೆ ಪ್ಲ್ಯಾನ್ ಮಾಡಿ ಬ್ಯಾಂಕ್ಗೆ ನುಗ್ಗಿದ್ದ. ಮ್ಯಾನೇಜರ್ಗೆ ಚಾಕು ತೋರಿಸಿ ನಗದು, ಚಿನ್ನ ದರೋಡೆ ಮಾಡಿದ್ದ. ಜ.14ರಂದು ಸಿನಿಮೀಯ ರೀತಿ ಬ್ಯಾಂಕ್ಗೆ ನುಗ್ಗಿ ದರೋಡೆ ಮಾಡಿದ್ದ. 4 ಲಕ್ಷ, ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ ಧೀರಜ್ನನ್ನು ಸದ್ಯ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ
ಆಧಾರ್ ಸೇವಾ ಕೇಂದ್ರದ ಮೂಲಕ ಆಧಾರ್ಗೆ ನೋಂದಣಿ ಮಾಡಿಸಬೇಕಾ? ಆನ್ಲೈನ್ನಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡುವುದು ಹೇಗೆ?
ನಿಖಿಲ್ ಹೊಸ ಸಿನಿಮಾ ಹೆಸರು ‘ಯದುವೀರ’; ಖಡಕ್ ಲುಕ್ ಮೂಲಕ ಹುಟ್ಟುಹಬ್ಬದ ಗಿಫ್ಟ್
Published On - 2:26 pm, Sat, 22 January 22