ನಲಪಾಡ್ ವಿರುದ್ಧ ಹಲ್ಲೆ ಆರೋಪ; ಯಾವ ಗಲಾಟೆನೂ ಇಲ್ಲ, ಏನು ಇಲ್ಲ: ಡಿಕೆ ಶಿವಕುಮಾರ್

ನಲಪಾಡ್ ವಿರುದ್ಧ ಹಲ್ಲೆ ಆರೋಪ; ಯಾವ ಗಲಾಟೆನೂ ಇಲ್ಲ, ಏನು ಇಲ್ಲ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಲಸ ಮಾಡುತ್ತಾ ಇದ್ದಾರೆ ಅಂದರೆ ಅವರ ವಿರುದ್ಧ ಈ ರೀತಿ ಏನೋ ಒಂದು ಆರೋಪ ಕೇಳಿ ಬರುತ್ತಲೇ ಇರುತ್ತದೆ. ನಾನು ಯಾರ ವೈಯಕ್ತಿಕ ಜೀವನದ ಒಳಗೂ ಪ್ರವೇಶ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಯಾರೇ ಪಕ್ಷದಲ್ಲಿ ತಪ್ಪು ಮಾಡಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೀನಿ ಎಂದು ಡಿ.ಕೆ. ಶಿವಕುಮಾರ್​ .

TV9kannada Web Team

| Edited By: preethi shettigar

Jan 20, 2022 | 5:58 PM

ಬೆಂಗಳೂರು: ಮೊಹಮ್ಮದ್ ನಲಪಾಡ್ ವಿರುದ್ಧ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (​DK Shivakumar) ಹೇಳಿಕೆ ನೀಡಿದ್ದಾರೆ. ಯಾವ ಗಲಾಟೆನೂ ಇಲ್ಲ, ಏನು ಇಲ್ಲ. ನಾನು ಕ್ರಾಸ್ ಚೆಕ್ ಮಾಡಿದೆ. ಆ ಥರ ಏನೂ ಇಲ್ಲ. ಯಾವ ಗಲಾಟೆನೂ ಇಲ್ಲ. ಯಾರೋ ಮಿಸ್ ಗೈಡ್ ಮಾಡಿದ್ದಾರೆ. ನಾನು ಸಿದ್ದು ಹಳ್ಳೇಗೌಡರ ಜೊತೆ ಪೋನ್​ನಲ್ಲಿ ಮಾತನಾಡಿದೆ. ನನ್ನ ಪೋನ್ (Phone) ತಗೊಂಡು ಯಾರೋ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕೆಲಸ ಮಾಡುತ್ತಾ ಇದ್ದಾರೆ ಅಂದರೆ ಅವರ ವಿರುದ್ಧ ಈ ರೀತಿ ಏನೋ ಒಂದು ಆರೋಪ ಕೇಳಿ ಬರುತ್ತಲೇ ಇರುತ್ತದೆ. ನಾನು ಯಾರ ವೈಯಕ್ತಿಕ ಜೀವನದ ಒಳಗೂ ಪ್ರವೇಶ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಯಾರೇ ಪಕ್ಷದಲ್ಲಿ ತಪ್ಪು ಮಾಡಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೀನಿ ಎಂದು ನಲಪಾಡ್ ಪರ ಡಿ.ಕೆ. ಶಿವಕುಮಾರ್​  ಬ್ಯಾಟ್​ ಬೀಸಿದ್ದಾರೆ.

ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ವಿಚಾರ

ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಸಿಎಂ ಬೊಮ್ಮಾಯಿ ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ ಯಾರ ವಿರುದ್ಧವೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಕೇವಲ ನಮ್ಮ ವಿರುದ್ಧ ಮಾತ್ರ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಯಾವ ಕೇಸ್​ ಕೂಡ ಹಾಕಿಲ್ಲ. ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನೆ ಕೂರುವುದಿಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಿದ್ದರಾಮಯ್ಯಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಲಿ. ಎಲ್ಲೆಲ್ಲಿ ಕೊವಿಡ್ ನಿಯಮಗಳು ಉಲ್ಲಂಘನೆಯಾಗಿದೆ. ಅಲ್ಲಿ ಕ್ರಮತೆಗೆದುಕೊಳ್ಳಬೇಕು. ಡೆಪ್ಯೂಟಿ ಕಮೀಷನರ್ ಹಾಗೂ ಎಸ್‌ಪಿ ಮೇಲೆ ಕ್ರಮ ತೆಗೆದುಕೊಳ್ಳಲಿ. ಯಾವ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿಲ್ಲ. ಯಾರೋ ಒಬ್ಬರ ಮೇಲೆ ಹಾಕಿದ್ದಾರೆ ಅಷ್ಟೇ. ಎಲ್ಲಾ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಡಿಕೆಶಿಯಿಂದ ಪಾದಯಾತ್ರೆ: ಸಚಿವ ಅಶ್ವತ್ಥ್ ನಾರಾಯಣ

ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿಲ್ಲ; ಈ ವಿಚಾರ ಸತ್ಯಕ್ಕೆ ದೂರವಾದದ್ದು: ಸಿದ್ದು ಹಳ್ಳೇಗೌಡ

Follow us on

Related Stories

Most Read Stories

Click on your DTH Provider to Add TV9 Kannada