ಬೆಂಗಳೂರು, ನವೆಂಬರ್ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಡೆಸಿದ ಸ್ಟಾರ್ಮ್ ವಾಟರ್ ಡ್ರೈನ್ (SWD) ಸಮೀಕ್ಷೆಯ ಪ್ರಕಾರ ಪಾಲಿಕೆಯ ಎಂಟು ವಲಯಗಳಲ್ಲಿ ಸುಮಾರು 1,134 ಸ್ಥಳಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಎಂಟು ವಲಯಗಳ ಪೈಕಿ ಯಲಹಂಕ ವಲಯವು 308 ಅತಿಕ್ರಮಣಗಳೊಂದಿಗೆ ಒತ್ತುವರಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಗಸ್ಟ್ 27 ರಿಂದ ಅಕ್ಟೋಬರ್ 30 ರ ನಡುವೆ ಕೇವಲ ಮೂರು ತಿಂಗಳಲ್ಲಿ ಈ ಒತ್ತುವರಿ ನಡೆದಿವೆ.
ದಾಸರಹಳ್ಳಿ ವಲಯ 246 ಒತ್ತುವರಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಬೊಮ್ಮನಹಳ್ಳಿ ವಲಯದಲ್ಲಿ 175, ಮಹದೇವಪುರ ವಲಯದಲ್ಲಿ 75, ಬಿಬಿಎಂಪಿ ಪಶ್ಚಿಮ ವಲಯದಲ್ಲಿ 74, ಆರ್‌ಆರ್ ನಗರದಲ್ಲಿ 71, ಬಿಬಿಎಂಪಿ ದಕ್ಷಿಣ ವಲಯದಲ್ಲಿ 51, ಬಿಬಿಎಂಪಿ ಪೂರ್ವ ವಲಯದಲ್ಲಿ 24 ಮತ್ತು ಕೋರಮಂಗಲ ಕಣಿವೆಯಲ್ಲಿ 110 ಕಡೆ ಒತ್ತುವರಿ ನಡೆದಿವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶದ ಮೇರೆಗೆ ಅತಿಕ್ರಮಣ ಸಮೀಕ್ಷೆ ನಡೆಸಲಾಗಿತ್ತು. ಸ್ಟಾರ್ಮ್ ವಾಟರ್ ಡ್ರೈನ್ ಎಂಜಿನಿಯರ್‌ಗಳು ಸಮೀಕ್ಷೆಯನ್ನು ನಡೆಸಿದ್ದಾರೆ.
ಒತ್ತುವರಿಯಾಗಿರುವ ಆಸ್ತಿಗಳ ಪರಿಶೀಲನೆ ನಡೆಸುವಂತೆ ತಹಶೀಲ್ದಾರ್‌ಗಳಿಗೆ ಮಳೆನೀರು ಚರಂಡಿ ಇಲಾಖೆ ಸೂಚಿಸಿದೆ. ಕರ್ನಾಟಕ ಭೂಕಂದಾಯ (ಕೆಎಲ್‌ಆರ್) ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ತಹಶೀಲ್ದಾರ್‌ಗಳು ಅತಿಕ್ರಮಿತ ಆಸ್ತಿಗಳಿಗೆ ನೋಟಿಸ್ ನೀಡಲಿದ್ದಾರೆ. ಪರಿಸರವನ್ನು ಪರಿಶೀಲಿಸಿದ ನಂತರ ಅಕ್ರಮ ಕಟ್ಟಡಗಳನ್ನು ಕೆಡವಲು ಆದೇಶಗಳನ್ನು ನೀಡಲಾಗುವುದು. ಬಿಬಿಎಂಪಿಯು ಅಕ್ರಮ ಕಟ್ಟಡಗಳನ್ನು ಕೆಡವುವ ಕಾರ್ಯಕ್ಕೆ ಚಾಲನೆಯನ್ನು ನೀಡಲಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಗಳೂರು ಭೇಟಿ; ನವೆಂಬರ್ 25 ರಂದು HAL ಕಾರ್ಯಕ್ರಮದಲ್ಲಿ ಭಾಗಿ
ವರದಿಗಳ ಪ್ರಕಾರ, ನಗರ ಪ್ರವಾಹವನ್ನು ತಡೆಗಟ್ಟಲು ನಗರದಾದ್ಯಂತ ಮಳೆನೀರಿನ ಚರಂಡಿಗಳನ್ನು ಸ್ವಚ್ಛಗೊಳಿಸಲು ಬಿಬಿಎಂಪಿಯು ಈ ಬೇಸಿಗೆಯಲ್ಲಿ ಕಾಲುವೆ ಸ್ವಚ್ಛಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯೋಜಿಸುತ್ತಿದೆ. 2022 ರಲ್ಲಿ ಸಂಭವಿಸಿದ ಪ್ರವಾಹದಂತಹ ಪರಿಸ್ಥಿತಿಯನ್ನು ತಡೆಗಟ್ಟಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಭಾರೀ ಮಳೆಯ ನಂತರ ಆ ಪ್ರದೇಶಗಳಲ್ಲಿನ ಹಲವಾರು ತಗ್ಗು ಪ್ರದೇಶಗಳು, ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಜಲಾವೃತವಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Wed, 22 November 23