ಡ್ರೈವರ್ ಜೊತೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರೇಮ ಪುರಾಣ; ಯುವತಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿದ ಕೋರ್ಟ್

| Updated By: ಆಯೇಷಾ ಬಾನು

Updated on: Jun 14, 2022 | 7:38 PM

ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ತಂದೆ-ತಾಯಿಯರಿದ್ದಾರೆ. ತಂದೆ-ತಾಯಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಕ್ಕಳಿದ್ದಾರೆ. ಪರಸ್ಪರ ಪ್ರೀತಿಯಿದ್ದರೆ ಇಂತಹ ಸ್ಥಿತಿ ಉದ್ಭವಿಸುವುದಿಲ್ಲ. ತಂದೆ ತಾಯಿಗಿಂತ ದೇವರಿಲ್ಲ, ಅವರ ಋಣ ತೀರಿಸಲಾಗಲ್ಲ ಎಂದು ಮನುಸ್ಮೃತಿಯಲ್ಲಿನ ವಾಕ್ಯವನ್ನು ಹೈಕೋರ್ಟ್ ಉಲ್ಲೇಖಿಸಿದೆ.

ಡ್ರೈವರ್ ಜೊತೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರೇಮ ಪುರಾಣ; ಯುವತಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿದ ಕೋರ್ಟ್
ಕರ್ನಾಟಕ್​ ಹೈಕೋರ್ಟ್​
Follow us on

ಬೆಂಗಳೂರು: ಡ್ರೈವರ್ ಜೊತೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರೇಮ(Driver And Engineering Student Love) ಪ್ರಕರಣಕ್ಕೆ ಸಂಬಂಧಿಸಿ ಪುತ್ರಿಗಾಗಿ ತಂದೆ ಹೈಕೋರ್ಟ್‌ಗೆ( High Court) ಹೇಬಿಯಸ್ ಕಾರ್ಪಸ್ (Habeas Corpus) ಸಲ್ಲಿಸಿದ್ದಾರೆ. ಪುತ್ರಿಯನ್ನು ತಮ್ಮ ಸುಪರ್ದಿಗೆ ನೀಡುವಂತೆ ತಂದೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ಬಗ್ಗೆ ಹೈಕೋರ್ಟ್‌ ಚರ್ಚೆ ನಡೆಸಿದೆ. ಆದ್ರೆ ಪೋಷಕರೊಂದಿಗೆ ತೆರಳಲು 19 ವರ್ಷದ ಮಗಳು ನಕಾರ ಮಾಡಿದ್ದು ವಯಸ್ಕಳಾಗಿರುವುದರಿಂದ ಪ್ರೀತಿಸಿ ವಿವಾಹವಾಗಿರುವುದಾಗಿ ಹೇಳಿದ್ದಾಳೆ. ಹಾಗೂ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪ್ರಿಯಕರ ಕೂಡ ಕೋರ್ಟ್‌ಗೆ ಭರವಸೆ ನೀಡಿದ್ದಾನೆ.

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಗೆ ಅದೇ ಕಾಲೇಜಿನ ವ್ಯಾನ್ ಡ್ರೈವರ್ ಮೇಲೆ ಪ್ರೇಮಾಂಕುರವಾಗಿದೆ. ಹಾಸ್ಟೆಲ್ ಗೆ ಯುವತಿಯನ್ನು ಡ್ರಾಪ್ ಮಾಡುವಾಗ ಶುರುವಾದ ಪ್ರೇಮಕಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಮಂಡ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಯುವತಿ ನಾಪತ್ತೆ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮಳವಳ್ಳಿಯ ಪೋಷಕರು ಇಂಜಿನಿಯರಿಂಗ್ ಓದುತ್ತಿದ್ದ ಮಗಳಿಗೆ ಅನುಕೂಲವಾಗಲೆಂದು ಮಂಡ್ಯದಲ್ಲಿಯೇ ಹಾಸ್ಟೆಲ್ ಗೆ ದಾಖಲಿಸಿದ್ದರು. ಆದ್ರೆ ಯುವತಿಯನ್ನು ಹಾಸ್ಟೆಲ್ ಗೆ ಡ್ರಾಪ್ ಮಾಡುತ್ತಿದ್ದ ಬಸ್ ಡ್ರೈವರ್ ನೊಂದಿಗೇ ಆಕೆಯ ಲವ್ವಿ ಡವ್ವಿ ಶುರುವಾಗಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾದ ಯುವತಿ ಪತ್ತೆಯಾಗಿದ್ದು ಡ್ರೈವರ್ ನ ಊರಿನಲ್ಲಿ. ಕಿಡ್ನಾಪ್ ಕೇಸ್ ದಾಖಲಿಸಿದರೂ ಪ್ರಯೋಜನವಾಗದಿದ್ದಾಗ, ಯುವತಿಯ ತಂದೆ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ಯುವತಿಯನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಮನವಿ ಮಾಡಿದ್ದರು. ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ರವರಿದ್ದ ವಿಭಾಗೀಯ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೀತು. ಇದನ್ನೂ ಓದಿ: ಏಕದಿನ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ ಆಟಗಾರ..!

ಯುವತಿಯ ತಂದೆ ವಾದ
ಮಳವಳ್ಳಿಯಿಂದ ಮಂಡ್ಯದ ಇಂಜಿನಿಯರಿಂಗ್ ಕಾಲೇಜಿಗೆ ಓಡಾಡುವುದಕ್ಕೆ ಕಷ್ಟವಾಗುತ್ತದೆಂದು ಹಾಸ್ಟೆಲ್ ಗೆ ಸೇರಿಸಿದ್ದೆವು. ಸ್ವಲ್ಪ ಖಿನ್ನತೆಯೂ ಇದ್ದದ್ದರಿಂದ ಸ್ನೇಹಿತೆಯರೊಂದಿಗೆ ಬೆರೆತರೆ ಸರಿ ಹೋಗುತ್ತಾಳೆಂದು ತಿಳಿದಿದ್ದೆವು. ಆದ್ರೆ ಕಾಲೇಜಿನಿಂದ ಹಾಸ್ಟೆಲ್ ಗೆ ಡ್ರಾಪ್ ಮಾಡುವ ನೆಪದಲ್ಲಿ ಕಾಲೇಜಿನ ವ್ಯಾನ್ ಡ್ರೈವರ್ ನನ್ನ ಮಗಳ ಸ್ನೇಹ ಬೆಳೆಸಿ ಕರೆದೊಯ್ದಿದ್ದಾನೆ. ಮಗಳನ್ನು ಹುಡುಕಿ ಅವನ ಮನೆಗೆ ತೆರಳಿದಾಗ ಬೆದರಿಸಿದ್ದಾನೆ. ಹೀಗಾಗಿ ನನ್ನ ಮಗಳ ಭವಿಷ್ಯದ ದೃಷ್ಟಿಯಿಂದ ನನ್ನ ಮಗಳನ್ನು ನಮ್ಮ ಸುಪರ್ದಿಗೆ ಒಪ್ಪಿಸಿ.

ಯುವತಿಯ ವಾದ
ನಾನು 19 ವರ್ಷ ವಯಸ್ಕಳಾಗಿದ್ದೇನೆ. ನನ್ನ ಸ್ವಂತ ಇಚ್ಚೆಯಿಂದ ನನ್ನ ಸ್ನೇಹಿತನೊಂದಿಗೆ ತೆರಳಿ ಅನೇಕಲ್ ನ ದೇವಾಲಯದಲ್ಲಿ ಮದುವೆಯಾಗಿದ್ದೇನೆ. ನನಗೆ ಯಾವುದೇ ಖಿನ್ನತೆಯಿಲ್ಲ, ಚಿಕಿತ್ಸೆಯನ್ನೂ ಪಡೆದಿಲ್ಲ. ನಾನು ನನ್ನ ತಂದೆಯ ಜೊತೆ ಮಾತನಾಡಲು ಬಯಸಲ್ಲ. ನಾನು ಜೀವನಪರ್ಯಂತ ಅಭಿಯೊಂದಿಗೆ ಸಂತೋಷವಾಗಿ ಬಾಳುತ್ತೇನೆಂಬ ವಿಶ್ವಾಸ ಇದೆ.
ಪ್ರಿಯಕರನ ವಾದ
ನಾನು ಅವಳೂ ಪ್ರೀತಿಸಿ ಮದುವೆಯಾಗಿದ್ದೇವೆ. ಒಂದು ಹನಿ ಕಣ್ಣೀರು ಹಾಕಿಸದಂತೆ ಜೀವನವಿಡೀ ನೋಡಿಕೊಳ್ಳುತ್ತೇನೆ. ಅವಳು ಮುಂದೆ ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇನೆ.

ಹೈಕೋರ್ಟ್ ತೀರ್ಪು
ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ತಂದೆತಾಯಿಯರನ್ನು ನೋಡಿದ್ದೇವೆ. ತಂದೆ ತಾಯಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಕ್ಕಳನ್ನೂ ಕಂಡಿದ್ದೇವೆ. ತಂದೆ ತಾಯಿ ಹಾಗೂ ಮಕ್ಕಳಿಗೆ ಪರಸ್ಪರ ಪ್ರೀತಿಯಿದ್ದರೆ ಸಾಮಾನ್ಯವಾಗಿ ಇಂತಹ ಸ್ಥಿತಿ ಉದ್ಭವಿಸುವುದಿಲ್ಲ. ತಂದೆ ತಾಯಿಯ ಶ್ರಮವಿಲ್ಲದಿದ್ದರೆ ಮಕ್ಕಳಿಗೆ ಉತ್ತಮ ಶಿಕ್ಷಣವಾಗಲೀ, ಜೀವನವಾಗಲೀ ಸಿಗುವುದಿಲ್ಲ ಎಂಬುದನ್ನು ಮಕ್ಕಳೂ ಅರಿಯಬೇಕು. ತಲೆಗೆ ಕೆಟ್ಟ ಬುದ್ದಿ ವಕ್ಕರಿಸಿದರೆ ಶಿಕ್ಷಣ, ಅಧಿಕಾರ ಒಂದೂ ಪ್ರಯೋಜನಕ್ಕೆ ಬರುವುದಿಲ್ಲ. ತಂದೆ ತಾಯಿಗಿಂತ ದೇವರಿಲ್ಲ, ಅವರು ಮಕ್ಕಳನ್ನು ಹೆತ್ತು, ಹೊತ್ತು, ಸಾಕಲು ಜೀವನವನ್ನೇ ಸವೆಸಿರುತ್ತಾರೆ. 100 ವರ್ಷ ಶ್ರಮಿಸಿದರೂ ಅವರ ರುಣ ತೀರಿಸಲು ಸಾಧ್ಯವಿಲ್ಲವೆಂದು ಮನುಸ್ಮೃತಿಯಲ್ಲಿ ಉಲ್ಲೇಖವಿದೆ. ಪ್ರೇಮ ಕುರುಡಾಗಿರುವುದರಿಂದ ಈ ಮಕ್ಕಳಿಗೆ ಪೋಷಕರ ಪ್ರೀತಿ ಕಾಣುತ್ತಿಲ್ಲ. ಇಂದು ಹೆತ್ತವರಿಗೆ ಮಾಡಿದ್ದೇ ನಾಳೆ ಮಕ್ಕಳಿಗೂ ಆಗಬಹುದು. ಮಗಳು ವಯಸ್ಕಳಾಗಿರುವುದರಿಂದ ಆಯ್ಕೆಯ ಸ್ವಾತಂತ್ರ್ಯವಿದೆ. ಬಾಹ್ಯ ಆಕರ್ಷಣೆಗಿಂತ ಹೃದಯದ ಪ್ರೀತಿ ಮುಖ್ಯ. ಇವರಿಬ್ಬರೂ ಹೇಳಿಕೊಂಡಿರುವಂತೆ ಜೀವನವಿಡೀ ಸಂತೋಷದಿಂದಿರಲೆಂದು ಬಯಸುತ್ತೇವೆ. ಕಾನೂನಿನಡಿ ವಯಸ್ಕ ಮಕ್ಕಳನ್ನು ಅವರ ಇಚ್ಚೆಯ ವಿರುದ್ಧವಾಗಿ ಪೋಷಕರ ಸುಪರ್ದಿಗೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ .ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ರವರಿದ್ದ ಪೀಠ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದೆ. ಹೀಗೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಗೂ ಡ್ರೈವರ್ ನಡುವಿನ ಹದಿಹರೆಯದ ಪ್ರೀತಿಗೆ ಹೈಕೋರ್ಟ್ ಅನ್ಯಮಾರ್ಗವಿಲ್ಲದೇ ಅನುಮತಿ ನೀಡಿದೆ. ಇದನ್ನೂ ಓದಿ: Post Covid Illness: ಕೋವಿಡ್​ನಿಂದ ಗುಣಮುಖರಾದವರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಳ, ಲಕ್ಷಣಗಳೇನು?

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:24 pm, Tue, 14 June 22