ಬೆಂಗಳೂರು: ಅಲ್ಲಾವುದ್ದೀನನ ಅದ್ಭುತ ದೀಪದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮವು ಈ ಹಿಂದಿನ ನೇಮಕಾತಿಗಳ ಬಗ್ಗೆ ಸಂಶಯದ ಪಿಶಾಚಿಯನ್ನು ಒಂದೊಂದಾಗಿ ಹೊರಹಾಕುತ್ತಿದೆ. ಅದಕ್ಕೂ ಮುನ್ನ ಶೇ. 40 ಕಮಿಷನ್ ವಿಚಾರವೂ ಸಹ ಭ್ರಷ್ಟಾಚಾರವನ್ನು ಪೋಷಿಸುವಂತಿದೆ. ಅದು ಸರ್ಕಾರ ಯಾವುದೇ ಇರಲಿ ಅಕ್ರಮಗಳು, ಭ್ರಷ್ಟಾಚಾರಗಳು ಜನಸಾಮಾನ್ಯರ ಊಹೆಗೆ ನಿಲುಕದಂತೆ ನಡೆದಿವೆ ಎಂಬು ಶ್ರೀಸಾಮಾನ್ಯನ ಸಾಮಾನ್ಯ ಅನಿಸಿಕೆಯಾಗಿಬಿಟ್ಟಿದೆ. ಈ ಮಧ್ಯೆ, ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಸಹ ಕೆಸರೆರಚಾಟದಲ್ಲಿ ಸಕ್ರಿಯರಾಗಿದ್ದಾರೆ. ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣಗೆ (Dr CN Ashwath Narayan) ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಎಚ್ಚರಿಕೆ ಮಿಶ್ರಿತ ಸವಾಲು ಹಾಕಿದ್ದು, ನಾನು ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ನಡೆಸಿದಾಗ ನಿಮ್ಮ ತರಹ ಲೂಟಿ ಮಾಡಿಲ್ಲ. ಲೂಟಿ ಮಾಡ್ತಿರೋರು ನೀವು. ನನ್ನ ವಿರುದ್ಧ ಏನೇ ದಾಖಲು ಇದ್ದರೂ ಬಿಡುಗಡೆಯಾಗಲಿ. ನಿಮಗೆ ತಾಕತ್ ಇದ್ದರೆ ನಾಳೆ ಬೆಳಗ್ಗೆಯೇ ದಾಖಲಾತಿ ಬಿಡುಗಡೆ ಮಾಡಿ. ಪ್ರಾಧ್ಯಾಪಕರ ನೇಮಕಾತಿಯಲ್ಲಿ 450 ಕೋಟಿ ರೂಪಾಯಿ ಅಕ್ರಮ ಆಗಿದೆ. ಹುಷಾರ್ ನನ್ನ ಬಗ್ಗೆ ಮಾತಾಡಿದ್ರೆ. ನನ್ನ ಬಳಿ ಇರೋ ದಾಖಲಾತಿ ನಿಮ್ಮ ಬಳಿ ಇಲ್ಲ (Corruption). ಮಾತಾಡೋ ಮುನ್ನ ಎಚ್ಚರಿಕೆಯಿಂದ ಮಾತಾಡಿ. ತಾಕತ್ ಇದ್ದರೆ ಅಶ್ವಥ್ ನಾರಾಯಣ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಅಶ್ವತ್ಥ್ ನಾರಾಯಣ್ ಗೆ ಕುಮಾರಸ್ವಾಮಿ ಸವಾಲ್ ಎಸೆದಿದ್ದಾರೆ.
Published On - 2:25 pm, Wed, 11 May 22