Chanakya Niti: ಚಾಣಕ್ಯ ನೀತಿ ಪ್ರಕಾರ ಈ ವಿಶೇಷ ಗುಣ ಹೊಂದಿರುವ ವಿದ್ಯಾರ್ಥಿ ಯಾವುದೆ ಕ್ಷೇತ್ರದಲ್ಲಾದರೂ ಜಯ ಸಾಧಿಸಬಲ್ಲ!

ಯಾವುದೇ ವಿದ್ಯಾರ್ಥಿ ತನ್ನ ಜೀವನದಲ್ಲಿ ಆಲಸಿಯಾಗಿದ್ದರೆ ಏನನ್ನು ಸಾಧಿಸಲೂ ಕಷ್ಟ ಕಷ್ಟವಾದೀತು. ಆಲಸ್ಯವೇ ವಿದ್ಯಾರ್ಥಿಗೆ ಪರಮ ಶತೃ. ವಿದ್ಯಾರ್ಥಿಯೊಬ್ಬ ತಾನು ವಿದ್ಯಾರ್ಜನೆ ಮಾಡುವಾಗ ಆಲಸ್ಯ ತಾಳದಿದ್ದರೆ ಆತ ಯಾವುದೆ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಸಾಧಿಸಬಲ್ಲ.

Chanakya Niti: ಚಾಣಕ್ಯ ನೀತಿ ಪ್ರಕಾರ ಈ ವಿಶೇಷ ಗುಣ ಹೊಂದಿರುವ ವಿದ್ಯಾರ್ಥಿ ಯಾವುದೆ ಕ್ಷೇತ್ರದಲ್ಲಾದರೂ ಜಯ ಸಾಧಿಸಬಲ್ಲ!
ಚಾಣಕ್ಯ ನೀತಿ ಪ್ರಕಾರ ಈ ವಿಶೇಷ ಗುಣ ಹೊಂದಿರುವ ವಿದ್ಯಾರ್ಥಿ ಯಾವುದೆ ಕ್ಷೇತ್ರದಲ್ಲಾದರೂ ಜಯ ಸಾಧಿಸಬಲ್ಲ!
Follow us
| Updated By: ಸಾಧು ಶ್ರೀನಾಥ್​

Updated on: May 11, 2022 | 6:06 AM

ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ-ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ಚಾಣಕ್ಯನ ಪ್ರಕಾರ ಈ ಗುಣ ವಿಶೇಷ ಹೊಂದಿರುವ ವಿದ್ಯಾರ್ಥಿ (Student) ಯಾವುದೇ ಕ್ಷೇತ್ರದಲ್ಲಾದರೂ ಜಯ ಸಾಧಿಸಬಲ್ಲ! ಆಚಾರ್ಯ ಚಾಣಕ್ಯ ಕೆಲ ವಿದ್ಯಾರ್ಥಿಗಳಲ್ಲಿ ವಿಶೇಷ ಗುಣಗಳನ್ನು ಗುರುತಿಸಿ, ಗುರುತರ ಸಾಧನೆಗೆ ಅವೇ ಕಾರಣೀಭೂತವೆನಿಸುತ್ತವೆ. ಇಂತಹ ಗುಣವಿರುವ ಯಾವುದೇ ವಿದ್ಯಾರ್ಥಿ ತನ್ನ ಲಕ್ಷ್ಯವನ್ನು ಸುಲಭವಾಗಿ ಸಾಧಿಸಬಲ್ಲ (Success Story).

ಶಿಸ್ತು: ಯಾವುದೇ ವಿದ್ಯಾರ್ಥಿ ತನ್ನ ಜೀವನದಲ್ಲಿ ಶಿಸ್ತು ರೂಢಿಸಿಕೊಂಡರೆ ವಿದ್ಯಾರ್ಜನೆ ಕಟ್ಟಿಟ್ಟಬುತ್ತಿಯಾಗುತ್ತದೆ. ಚಾಣಕ್ಯನ ಪ್ರಕಾರ ವಿದ್ಯಾರ್ಥಿಯು ಶಿಸ್ತನ್ನು ಕರಗತ ಮಾಡಿಕೊಂಡರೆ ಆತ ತನ್ನ ಲಕ್ಷ್ಯದ ಕಡೆಗೆ ಸುಲಭವಾಗಿ ಮತ್ತು ಖಚಿತವಾಗಿ ಸಾಗಬಲ್ಲ. ಶಿಸ್ತುಬದ್ಧ ಜೀವನ ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿ ನಿಗದಿತ ಸಮಯದಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಲಾರ. ಆತ ತನ್ನ ಹಾದಿಯಲ್ಲಿ ಏಳಿಗೆ ಕಾಣಲಾರ.

ಆಲಸ್ಯವಿದ್ದರೆ ಗಮ್ಯ ದೂರ ದೂರ: ಯಾವುದೇ ವಿದ್ಯಾರ್ಥಿ ತನ್ನ ಜೀವನದಲ್ಲಿ ಆಲಸಿಯಾಗಿದ್ದರೆ ಏನನ್ನು ಸಾಧಿಸಲೂ ಕಷ್ಟ ಕಷ್ಟವಾದೀತು. ಆಲಸ್ಯವೇ ವಿದ್ಯಾರ್ಥಿಗೆ ಪರಮ ಶತೃ. ವಿದ್ಯಾರ್ಥಿಯೊಬ್ಬ ತಾನು ವಿದ್ಯಾರ್ಜನೆ ಮಾಡುವಾಗ ಆಲಸ್ಯ ತಾಳದಿದ್ದರೆ ಆತ ಯಾವುದೆ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಸಾಧಿಸಬಲ್ಲ. ಚುರುಕುತನ ಇರುವ ವಿದ್ಯಾರ್ಥಿ ಸಲೀಸಾಗಿ ಶೈಕ್ಷಣಿಕವಾಗಿ ಮೇಲಕ್ಕೆ ಬರಬಲ್ಲ. ಒಮ್ಮೆ ವಿದ್ಯಾರ್ಥಿ ಆಲಸ್ಯದ ಜೀವನಕ್ಕೆ ಮಾರುಹೋದರೆ ಆತ ಜೀವನದಲ್ಲಿ ಎಂದಿಗೂ ಏಳಿಗೆ ಕಾಣಲಾರ.

ದುರಾಸೆ: ಇದೊಂದು ದೊಡ್ಡ ರೋಗ. ಇದು ವಿದ್ಯಾರ್ಥಿ ಮನಸ್ಸಿಗೆ ಬಂದುಬಿಟ್ಟರೆ ಆತನ ಏಳಿಗೆಗೆ ಬಾಧೆ ಕಲ್ಪಿಸುತ್ತದೆ. ವಿದ್ಯಾರ್ಥಿಯಾದವನು ಯಾವುದೇ ವಸ್ತು ವಿಷಯದ ಬಗ್ಗೆ ದುರಾಸೆ ಪಡಬಾರದು. ಜ್ಞಾನಾರ್ಜನೆಯತ್ತ ಆತ ತನ್ನ ಧ್ಯಾನವನ್ನು ಕೇಂದ್ರೀಕರಿಸಬೇಕು. ಅದರಿಂದ ಆತನ ಶೈಕ್ಷಣಿಕ ಜೀವನ ಸಫಲತೆಯನ್ನು ಕಾಣುತ್ತದೆ.

ಇದನ್ನೂ ಓದಿ: Chanakya Niti: ನಾವು ಬಯಸಿದರೆ ನಾಯಿಯಿಂದಲೂ ಬಹಳಷ್ಟು ಕಲಿಯಬಹುದು, ನಾಯಿಯ 4 ವಿಶೇಷ ಗುಣಗಳಿವು- ಚಾಣಕ್ಯ ನೀತಿ

ಇದನ್ನೂ ಓದಿ: Chanakya Niti: ಈ 4 ವ್ಯಕ್ತಿಗಳ ಜೊತೆಗೆ ಎಂದೂ ವಾದ, ಮನಸ್ಥಾಪ ಮಾಡಿಕೊಳ್ಳಬೇಡಿ- ಚಾಣಕ್ಯ ನೀತಿ