ಈ ರಾಶಿಯವರು ಕಷ್ಟಪಟ್ಟು ಹಣ ಸಂಪಾದಿಸ್ತಾರೆ. ಆದರೆ ಇವರ ಶೋಕಿ-ಹವ್ಯಾಸಗಳು ತುಂಬಾ ದುಬಾರಿ ಆಗಿರುತ್ತವೆ! ಯಾರವರು, ತಿಳಿಯೋಣ

ಈ ರಾಶಿಯವರು ಕಷ್ಟಪಟ್ಟು ಹಣ ಸಂಪಾದಿಸ್ತಾರೆ. ಆದರೆ ಇವರ ಶೋಕಿ-ಹವ್ಯಾಸಗಳು ತುಂಬಾ ದುಬಾರಿ ಆಗಿರುತ್ತವೆ! ಯಾರವರು, ತಿಳಿಯೋಣ
ಈ ನಾಲ್ಕು ರಾಶಿಯ ಜನರ ಮೇಲೆ ಲಕ್ಷ್ಮಿ ಕೃಪಾಕಟಾಕ್ಷ ಸದಾ ಇರುತ್ತದೆ! ಯಾವ ರಾಶಿಯವರು ತಿಳಿಯೋಣ

Zodiac signs: ಕರ್ಕಾಟಕ ರಾಶಿ ಜನರು ಬಹಳ ಬುದ್ಧಿವಂತರಾಗಿರುತ್ತಾರೆ. ಇವರು ಜೀವನದಲ್ಲಿ ಪ್ರತಿಯೊಂದು ಸುಖ ಶಾಂತಿ ನೆಮ್ಮದಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರು ಪರಿಶ್ರಮ ಹಾಕಿ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಇವರು ತಮ್ಮ ಕುಟುಂಬಸ್ಥರನ್ನೂ ಖುಷಿಯಾಗಿಟ್ಟಿರುತ್ತಾರೆ.

TV9kannada Web Team

| Edited By: sadhu srinath

May 11, 2022 | 6:06 AM

ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳ ಬಗ್ಗೆ ವರ್ಣನೆ ಇದೆ. ಪ್ರತಿ ರಾಶಿಯೂ (Astrology) ಮತ್ತೊಂದಕ್ಕಿಂತ ಭಿನ್ನವಾಗಿರುತ್ತದೆ. ಹಾಗೆಯೇ ಆ ರಾಶಿಯ ಜನರ ಸ್ವಭಾವ ಇತರರಗಿಂತ ಭಿನ್ನವಾಗಿರುತ್ತದೆ. ಕೆಲ ರಾಶಿಯ ಜನರು ವಿಶೇಷವಾಗಿ ಭಆಗ್ಯಶಾಲಿಗಳಾಗಿದ್ದು ದೇವೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ (Goddess Lakshmi) ಪಾತ್ರರಾಗಿ ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಬನ್ನೀ ಹಾಗಾದರೆ ಯಾರು ಆ ರಾಶಿಯವರು (Zodiac signs), ತಿಳಿಯೋಣ.

  1. ವೃಷಭ ರಾಶಿ (Taurus): ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಜನರ ಮೇಲೆ ವರ ಲಕ್ಷ್ಮಿ ಕೃಪೆ ಸದಾ ಇರುತ್ತದೆ. ತಾಯಿ ಲಕ್ಷ್ಮಿ ಆಶೀರ್ವಾದ ಬೀರುತ್ತಿರುತ್ತಾಳೆ. ವೃಷಭ ರಾಶಿಯವರಿಗೆ ಹಣಕಾಸಿನ ಮುಗ್ಗಟ್ಟು/ ತೊಂದರೆ ಎದುರಾಗುವುದೇ ಇಲ್ಲ. ಇವರು ತಮ್ಮ ಶ್ರಮ, ತನ್ಮಯತೆಯಿಂದ ಉತ್ತಮ ಸಂಪಾದನೆ ಮಾಡುತ್ತಾರೆ. ಜೀವನದಲ್ಲಿ ಬಹಳಷ್ಟು ಪ್ರಗತಿ ಕಂಡು, ಉನ್ನತ ಸ್ತರ ತಲುಪುತ್ತಾರೆ.
  2. ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿ ಜನರು ಬಹಳ ಬುದ್ಧಿವಂತರಾಗಿರುತ್ತಾರೆ. ಇವರು ಜೀವನದಲ್ಲಿ ಪ್ರತಿಯೊಂದು ಸುಖ ಶಾಂತಿ ನೆಮ್ಮದಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರು ಪರಿಶ್ರಮ ಹಾಕಿ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಇವರು ತಮ್ಮ ಕುಟುಂಬಸ್ಥರನ್ನೂ ಖುಷಿಯಾಗಿಟ್ಟಿರುತ್ತಾರೆ.
  3. ಸಿಂಹ ರಾಶಿ (Leo): ಸಿಂಹ ರಾಶಿಯವರು ತಮ್ಮ ಜಾತಕದ ಅನುಸಾರ ಉತ್ತಮ ಲೀಡರ್​ ಆಗಿರುತ್ತಾರೆ. ಇವರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಭರಪೂರ ಇರುತ್ತದೆ. ಇವರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಆದರೆ ಇವರ ಶೋಕಿಗಳು/ ಹವ್ಯಾಸಗಳು ತುಂಬಾ ದುಬಾರಿ ಆಗಿರುತ್ತವೆ. ಇಂತಹವರು ಐಷಾರಾಮಿ ಜೀವನ ಶೈಲಿಗೆ ಒಗ್ಗಿಕೊಂಡು ತುಂಬಾ ಹಣ ಖರ್ಚು ಮಾಡುತ್ತಾರೆ. ಇವರಿಗೆ ಎಂದಿಗೂ ಹಣದ ಕೊರತೆ ಎದುರಾಗದು.
  4. ವೃಶ್ಚಿಕ ರಾಶಿ (Scorpio): ಈ ರಾಶಿಯ ಜನರ ಮೇಲೂ ಲಕ್ಷ್ಮಿ ದೇವಿ ಸದಾ ಆಶೀರ್ವಾದ ಬೀರುತ್ತಾಳೆ. ಈ ರಾಶಿಯವರು ಹಣ ಗಳಿಸಲು ಹೆಚ್ಚು ಶ್ರಮವೇನೂ ಪಡುವುದಿಲ್ಲ. ಇವರು ಐಷಾರಾಮಿ ಬದುಕನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಇವರಿಗೆ ಅದೃಷ್ಟ ಹೆಚ್ಚು ಕೈಹಿಡಿಯುತ್ತದೆ.

Follow us on

Related Stories

Most Read Stories

Click on your DTH Provider to Add TV9 Kannada