AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kaala Bhairava Gayatri Mantra: ಶಕ್ತಿ ಶಾಲಿ ಕಾಲಭೈರವ ಮಂತ್ರ – ಸೂರ್ಯ ಉದಯಿಸುವ ಮುನ್ನ ಈ ಮಂತ್ರ ಹೇಳಿಕೊಂಡರೆ ನಿಮ್ಮ ಜೀವನದ ಗತಿಯೇ ಬದಲಾಗುತ್ತದೆ!

Kaala Bhairava Gayatri Mantra: ಕಾಲ ಭೈರವೇಶ್ವರ ಸ್ವಾಮಿಗೆ ವಿಶೇಷವಾಗಿ ಸಂಕಲ್ಪ ಮಾಡಿಕೊಂಡಿದ್ದರೆ ಶತ್ರುಗಳು ಕೂಡ ಮಿತ್ರರಾಗುತ್ತಾರೆ. ಜೀವನದಲ್ಲಿ ನೀವು ಎಲ್ಲಿಯೇ ಹೋದರೂ ಕೂಡ ಧನವಂತರಾಗಿ ಬಾಳುತ್ತೀರಿ.

Kaala Bhairava Gayatri Mantra: ಶಕ್ತಿ ಶಾಲಿ ಕಾಲಭೈರವ ಮಂತ್ರ - ಸೂರ್ಯ ಉದಯಿಸುವ ಮುನ್ನ ಈ ಮಂತ್ರ ಹೇಳಿಕೊಂಡರೆ ನಿಮ್ಮ ಜೀವನದ ಗತಿಯೇ ಬದಲಾಗುತ್ತದೆ!
ಶಕ್ತಿ ಶಾಲಿ ಕಾಲಭೈರವ ಮಂತ್ರ - ಸೂರ್ಯ ಉದಯಿಸುವ ಮುನ್ನ ಈ ಮಂತ್ರ ಹೇಳಿಕೊಂಡರೆ ನಿಮ್ಮ ಜೀವನದ ಗತಿಯೇ ಬದಲಾಗುತ್ತದೆ!
TV9 Web
| Edited By: |

Updated on: May 10, 2022 | 6:06 AM

Share

ಪ್ರತಿನಿತ್ಯ ಬೆಳಗ್ಗೆ ಸೂರ್ಯೋದಯಕ್ಕೆ (sunrise) ಮೊದಲೇ ಭಕ್ತಿ ಶ್ರದ್ಧೆಗಳಿಂದ ಈ ಒಂದು ಮಂತ್ರವನ್ನು ಪಠಿಸುತ್ತಾ ಬಂದರೆ ವಿಶೇಷವಾಗಿ ಕಾಲ ಭೈರವೇಶ್ವರ ಸ್ವಾಮಿಯ (The Lord of the March of Time) ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ವಿಪರೀತವಾದ ಹಣಕಾಸಿನ ಬಾಧೆಗಳನ್ನು ಅನುಭವಿಸುತ್ತಿದ್ದಾರೆ, ಮನೆಯಲ್ಲಿ ಎಷ್ಟು ಸಂಪಾದನೆ ಮಾಡಿಕೊಂಡು ಬಂದರು ಕೂಡ ಹಣ ನಿಲ್ಲುತ್ತಿಲ್ಲ ಅಂದರೆ, ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟವಾಗುತ್ತಿದೆ, ಜೀವನದಲ್ಲಿ ಯಾವುದೇ ರೀತಿಯಾದಂತಹ ಏಳಿಗೆ ಇಲ್ಲ, ಮಾಟ ಮಂತ್ರದ ಸಮಸ್ಯೆಗಳು, ಶತ್ರುಗಳ ಬಾಧೆ ಇದ್ದರೆ, ಎಲ್ಲಾ ಕೆಟ್ಟ ಶಕ್ತಿಗಳು ತೊಲಗಿ ವಿಶೇಷವಾಗಿ ಏಳಿಗೆ ಕಾಣಬೇಕಾದರೆ ಪ್ರತಿನಿತ್ಯ ಒಂದು ಮಂತ್ರವನ್ನು ಜಪಿಸಿ. ಕಾಲ ಭೈರವೇಶ್ವರಸ್ವಾಮಿಗೆ ಸಂಬಂಧಪಟ್ಟಂತಹ ಈ ಒಂದು ಕಾಲಭೈರವೇಶ್ವರ ಗಾಯತ್ರಿ ಮಂತ್ರಕ್ಕೆ (Kaala Bhairava Gayatri Mantra) ಅತ್ಯಂತ ಶಕ್ತಿ ಇದೆ (Spiritual).

ಜೀವನದ ಮುಂದೆ ಯಾವ ದಾರಿ ಕಾಣುತ್ತಿಲ್ಲ, ಹೇಗೆ ಜೀವಿಸಬೇಕು ಎಂಬುದು ಗೊತ್ತಾಗುತ್ತಿಲ್ಲ, ಬಾಧೆ ಅನುಭವಿಸುತ್ತಿದ್ದೇನೆ, ನನಗೇ ಯಾಕೆ ಈ ರೀತಿಯ ಕಷ್ಟಗಳು ಬರುತ್ತಿದೆ ಅನ್ನುವವರಿಗೆ, ಮನೆಯಲ್ಲಿ ಗಂಡ, ಹೆಂಡತಿ, ಅತ್ತೆ ಸೊಸೆ, ಕಲಹ, ಯಾವ ರಂಗದಲ್ಲಿ ಕೂಡ ಯಶಸ್ಸು ನಿಮಗೆ ಸಿಗುತ್ತಿಲ್ಲ, ಶತ್ರುಗಳು ಹೆಚ್ಚಾಗಿದ್ದಾರೆ. ಪದೇ ಪದೇ ಜೀವನದಲ್ಲಿ ಎಲ್ಲಾ ಕಷ್ಟಗಳಿಗೆ ನೊಂದು ಹೋಗಿದ್ದೇವೆ ಅಂದರೆ ಈ ಮಂತ್ರವನ್ನು ನಿಯಮದಿಂದ ಅನುಸರಿಸಿ. ಪ್ರತಿ ನಿತ್ಯ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಿ ಮನೆಯಲ್ಲಿ ಸ್ವಚ್ಛವಾಗಿ ಇರುವಂತಹ ಒಂದು ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲೇ ಸ್ಮರಿಸಿದರೆ ದೇವರಿಗೆ ಸಂಕಲ್ಪವನ್ನು ಮಾಡಿಕೊಂಡು ಈ ಕೆಳಗಿನ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಿ: ಓಂ ಕಾಲಕಾಲಾಯ ವಿದ್ಮಹೇ ಕಾಲಾತೀತಾಯ ಧೀಮಹೀ ತನ್ನೋ ಕಾಲಭೈರವ ಪ್ರಚೋದಯಾತ್.

ಮುಂದೆ ನಡೆಯುವಂತಹ ಪ್ರತಿಯೊಂದು ಘಟನೆಗಳಿಗೂ ಶುಭಯೋಗ ನೀಡಲಿ ಎಂದು ಕಾಲ ಭೈರವೇಶ್ವರ ಸ್ವಾಮಿಗೆ ವಿಶೇಷವಾಗಿ ಸಂಕಲ್ಪ ಮಾಡಿಕೊಂಡಿದ್ದರೆ ಶತ್ರುಗಳು ಕೂಡ ಮಿತ್ರರಾಗುತ್ತಾರೆ. ಜೀವನದಲ್ಲಿ ನೀವು ಎಲ್ಲಿಯೇ ಹೋದರೂ ಕೂಡ ಧನವಂತರಾಗಿ ಬಾಳುತ್ತೀರಿ. ಇನ್ನು ಯಾರಿಗಾದರೂ ಸಂತಾನ ಫಲವಿಲ್ಲ ಅಥವಾ ವಿವಾಹ ತಡವಾಗುತ್ತಿದೆ, ಯಾವುದೋ ಕಂಕಣ ಬಲ ಕೂಡಿ ಬರುತ್ತಿಲ್ಲ ಅಂತ ಕೊರಗುತ್ತಿದ್ದರೆ ಅವರು ಕೂಡ ಈ ಒಂದು ಕಾಲಭೈರವ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ನಾವು ತಿಳಿಸಿದಂತೆ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು 21 ಬಾರಿ ಅಥವಾ 108 ಬಾರಿ ಪಠಿಸುತ್ತ ಪ್ರಾರ್ಥನೆ ಮಾಡಿಕೊಂಡು ಬಂದಲ್ಲಿ ನಿಮಗೆ ಸಂತಾನ ಫಲ ದೊರೆಯುತ್ತದೆ ಹಾಗೂ ವಿವಾಹ ಆಗದವರಿಗೆ ವಿವಾಹ ಯೋಗ ಕೂಡಿ ಬರುತ್ತದೆ (ಬರಹ -ವಾಟ್ಸಪ್ ಸಂದೇಶ).