ಆನ್​ಲೈನ್​​​ ಟ್ರೇಡಿಂಗ್​ ನೆಪದಲ್ಲಿ ಜನರಿಗೆ ಕೋಟ್ಯಂತರ ರೂ. ವಂಚನೆ; ನಾಲ್ವರು ಅರೆಸ್ಟ್

ಆನ್​ಲೈನ್​​​ ಟ್ರೇಡಿಂಗ್​ ಹೆಸರಲ್ಲಿ ಜನರಿಂದ ಕೋಟ್ಯಂತರ ಹಣ ಪಡೆದು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಿದ್ದು 7 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಆನ್​ಲೈನ್​​​ ಟ್ರೇಡಿಂಗ್​ ನೆಪದಲ್ಲಿ ಜನರಿಗೆ ಕೋಟ್ಯಂತರ ರೂ. ವಂಚನೆ; ನಾಲ್ವರು ಅರೆಸ್ಟ್
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Sep 03, 2024 | 7:20 AM

ಬೆಂಗಳೂರು, ಸೆಪ್ಟೆಂಬರ್.03: ಆನ್​ಲೈನ್​​​ ಟ್ರೇಡಿಂಗ್​ ನೆಪದಲ್ಲಿ ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ನಾಲ್ವರು ಸೈಬರ್ ಕಳ್ಳರನ್ನು (Cyber Crime) ಇಡಿ ಅಧಿಕಾರಿಗಳು (ED Officials) ಬಂಧಿಸಿದ್ದಾರೆ. ಶಶಿಕುಮಾರ್, ಸಚಿನ್, ಕಿರಣ್, ಚರಣ್ ರಾಜ್ ಬಂಧಿತ ಆರೋಪಿಗಳು. ಸದ್ಯ ಬಂಧಿತ ಆರೋಪಿಗಳನ್ನು ಬೆಂಗಳೂರು ಇಡಿ ಕೋರ್ಟ್​ಗೆ ಹಾಜರು ಪಡಿಸಿದ್ದು ಆರೋಪಿಗಳನ್ನು 7 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಈ ಆರೋಪಿಗಳು ಆನ್​ಲೈನ್​​​ ಟ್ರೇಡಿಂಗ್​ ಹೆಸರಲ್ಲಿ ಜನರಿಂದ ಕೋಟ್ಯಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ನಕಲಿ ಕಂಪನಿಗಳ ಹೆಸರಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ನಕಲಿ ದಾಖಲೆ ನೀಡಿ ಹತ್ತಾರು ಬ್ಯಾಂಕ್​​ಗಳಲ್ಲಿ ಅಕೌಂಟ್​ ತೆರೆದಿದ್ದರು. ಜನರಿಂದ ಹಣ ಪಡೆದ ಕೂಡಲೇ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಂತರ ಹಣ ಜಮಾ ಮಾಡಿದವರ ನಂಬರ್ ಬ್ಲಾಕ್ ಮಾಡ್ತಿದ್ರು. ಈ ಬಗ್ಗೆ ಬೆಂಗಳೂರು ಸೈಬರ್ ಠಾಣೆಗಳಲ್ಲಿ ಹಲವು ದೂರು ದಾಖಲಾಗಿದ್ದವು. ವಿವಿಧ ಬ್ಯಾಂಕ್​ ಖಾತೆಗಳಿಂದ ಕೋಟ್ಯಂತರ ಹಣ ವರ್ಗಾವಣೆ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸರು ಬೇನಾಮಿ ಹಣದ ಬಗ್ಗೆ ಇಡಿಗೆ ಮಾಹಿತಿ ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ನಾಲ್ವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ಇಡಿ ಕೋರ್ಟ್​ಗೆ ಹಾಜರುಪಡಿಸಿದ್ದು 7 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ಶೇ 25ರಷ್ಟು ಬಿಲ್ ಬಾಕಿ: ಬಿಬಿಎಂಪಿ ಕಚೇರಿಯಲ್ಲಿ ಗುತ್ತಿಗೆದಾರರ ಪ್ರತಿಭಟನೆ, ಸರ್ಕಾರದ ನಿರ್ಧಾರ ಎಂದ ಕಮಿಷನರ್

ಅಕ್ರಮ ಮದ್ಯ ಮಾರಾಟ, ಮಹಿಳೆಯರಿಂದ ತರಾಟೆ

ಚಿತ್ರದುರ್ಗ ಜಿಲ್ಲೆ‌ ಹೊಸದುರ್ಗದ ಮೆಣಸಿನೋಡು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆರೋಪ ಕೇಳಿಬಂದಿದೆ. ಎಕ್ಸೆಲ್ ಬೈಕ್​ನಲ್ಲಿ ಮದ್ಯದ ಪಾಕೆಟ್​ಗಳನ್ನ ತಂದು ಮಾರಾಟ ಮಾಡುತ್ತಿದ್ದ ಕಾರೇಹಳ್ಳಿ ಶಿವಣ್ಣ ಎಂಬಾತನಿಗೆ ಮಹಿಳೆಯರು ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಯನ್ನ ಶ್ರೀರಾಂಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ಹುಬ್ಬಳ್ಳಿಯ ಇಂದಿರಾ ಗ್ಲಾಸ್​ಹೌಸ್ ಬಳಿ ಹಾಡಹಗಲೇ ವ್ಯಕ್ತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಲ್ಲೇಶ್ ಹಣಮಂತಪ್ಪ ಹಾಲರವಿ ಎಂಬಾತನನ್ನ ಕೊಂದು, ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಬಾವಿಗೆ ಶವ ಎಸೆಯಲಾಗಿದೆ. ಕೊಲೆ ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಸಲಾಗ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ