Crime News: ಬೆಂಗಳೂರಿನಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ, ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ನೇಣಿಗೆ ಶರಣು
ಕೆಲಸ ಮಾಡುವ ವಿಚಾರಕ್ಕೆ ಅಣ್ಣ ತಮ್ಮಂದಿರು ಗಲಾಟೆ ಮಾಡಿಕೊಂಡಿದ್ದರು. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೆ.ಆರ್.ಪುರಂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆಯಾಗಿದೆ. ಅಣ್ಣ ರಾಮಕೃಷ್ಣ ತಮ್ಮ ಬಾಲಕೃಷ್ಣನ (26) ಎದೆಗೆ ಚಾಕುವಿನಿಂದ ಇರಿದು ಸಾಯಿಸಿದ್ದಾನೆ. ಕೆ.ಆರ್. ಪುರಂ ನ ಪ್ರಿಯಾಂಕ ನಗರದ ಮನೆಯಲ್ಲಿ ಘಟನೆ ನಡೆದಿದೆ. ಕೆಲಸ ಮಾಡುವ ವಿಚಾರಕ್ಕೆ ರಾಮಕೃಷ್ಣ-ಬಾಲಕೃಷ್ಣ ಗಲಾಟೆ ಮಾಡಿಕೊಂಡಿದ್ದರು. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೆ.ಆರ್.ಪುರಂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ನೇಣಿಗೆ ಶರಣು
ಪ್ರೀತಿ ವಿಷಯವಾಗಿ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಟಿ. ದಾಸರಹಳ್ಳಿಯ ಕಾಳಾಸ್ತ್ರಿ ನಗರದಲ್ಲಿ ಘಟನೆ ನಡೆದಿದೆ. ಸಂಜಯ್ (21) ಮೃತ ಯುವಕ. ಸಂಜಯ್, ಒಂದು ವರ್ಷದ ಹಿಂದೆ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದನಂತೆ. ಹುಡುಗಿ ಈತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳ್ಳಂತೆ. ಇದರಿಂದ ಮನನೊಂದು ಮನೆಯ ರೂಂನಲ್ಲಿ ನೇಣಿಗೆ ಶರಣಾಗಿದ್ದಾನೆ.
ಕೊಪ್ಪಳ ಮೂಲದ ಮೃತ ಸಂಜಯ್ ಜಾಲಹಳ್ಳಿ ಬಳಿಯ ಟ್ರಾವೆಲ್ ನಲ್ಲಿ ಚಾಲಕನಾಗಿದ್ದ. ಡ್ರೈವರ್ ಕಂ ಒನರ್ ಆಗಿ ಟ್ರಾವೆಲ್ ಕೆಲಸ ಮಾಡುತ್ತಿದ್ದ. ತಂದೆ ಗುರುಪಾದಯ್ಯ ರಾತ್ರಿ ಕರೆ ಮಾಡಿದಾಗ ಸಂಜಯ್ ಕರೆ ಸ್ವೀಕರಿಸಿಲ್ಲ. ಸ್ನೇಹಿತರು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳತನ ಮಾಡ್ತಿದ್ದ ಆರೋಪಿಗಳು ಅರೆಸ್ಟ್:
ಬೆಂಗಳೂರಿನಲ್ಲಿ ಸರಗಳ್ಳತನ ಮಾಡ್ತಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಬಾಣಸವಾಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರೋಹಿತ್, ಸಾದಿಕ್ ಅಲಿಯಾಸ್ ಕಾಲು, ರಿಜ್ವಾನ್ ಬಂಧಿತ ಆರೋಪಿಗಳು. ಅಮೃತಹಳ್ಳಿ, ಕೊಡಿಗೇಹಳ್ಳಿ, ಯಲಹಂಕ, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಸರಗಳ್ಳತನ ಮಾಡಿದ್ದರು. ಮೂವರು ಆರೋಪಿಗಳನ್ನ ಬಂಧಿಸಿ 200 ಗ್ರಾಂ. ಗೂ ಅಧಿಕ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಆರೋಪಿಗಳು ಬೆಳ್ಳಂಬೆಳಗ್ಗೆ ಸರಗಳ್ಳತನಕ್ಕಿಳಿಯುತ್ತಿದ್ದರು. ಮುಂಜಾನೆ ವಾಕಿಂಗ್ ಮಾಡುವ, ಮನೆ ಮುಂಭಾಗ ರಂಗೋಲಿ ಹಾಕುವ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ರು. ಬೈಕ್ ನಲ್ಲಿ ಬಂದು ಸರಗಳ್ಳತನ ಮಾಡ್ತಿದ್ದರು. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದಾರೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 3:58 pm, Sat, 2 July 22