ಕೈಗಾರಿಕೆಗಳಿಗೂ ಕರೆಂಟ್ ಶಾಕ್: ಕೈಗಾರಿಕೆ ಬೀಗ ಹಾಕಿ ಕೀ ನಿಮಗೆ ಕೊಡ್ತೀವಿ, ನೀವೇ ನಡೆಸಿ; ಸರ್ಕಾರಕ್ಕೆ ಪೀಣ್ಯ ಕೈಗಾರಿಕೆ ಸಂಘ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Jun 14, 2023 | 1:00 PM

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಿ. ಅದು ಬಿಟ್ಟು ಈ ರೀತಿ ಕರೆಂಟ್‌ ಶಾಕ್‌ ಕೊಡಬೇಡಿ. ಕೈಗಾರಿಕೆ ಬೀಗ ಹಾಕಿ ಅದರ ಕೀ ನಿಮಗೆ ಕೊಡ್ತೀವಿ, ನೀವೇ ನಡೆಸಿ ಎಂದು ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೈಗಾರಿಕೆಗಳಿಗೂ ಕರೆಂಟ್ ಶಾಕ್: ಕೈಗಾರಿಕೆ ಬೀಗ ಹಾಕಿ ಕೀ ನಿಮಗೆ ಕೊಡ್ತೀವಿ, ನೀವೇ ನಡೆಸಿ; ಸರ್ಕಾರಕ್ಕೆ ಪೀಣ್ಯ ಕೈಗಾರಿಕೆ ಸಂಘ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕಾಂಗ್ರೆಸ್(Congress) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದು ಕಡೆ ಉಚಿತ ವಿದ್ಯುತ್(Gruha Jyothi Yojana) ಎಂದು ಘೋಷಿಸಿ ಅದಕ್ಕೆ ಷರತ್ತುಗಳನ್ನು ವಿಧಿಸಿದೆ. ಮತ್ತೊಂದೆಡೆ ಉಚಿತ ವಿದ್ಯುತ್ ಪಡೆಯುವ ಮೊದಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ತಗುಲಿದೆ. 200 ರೂಪಾಯಿ ವಿದ್ಯುತ್ ಬಿಲ್ ಬರುತ್ತಿದ್ದದ್ದು ಜೂನ್‌ನಲ್ಲಿ 600 ರೂಪಾಯಿ ಬಂದಿದ್ದರೆ, 500 ರೂಪಾಯಿ ಕಟ್ಟುತ್ತಿರುವವರು, ಜೂನ್‌ನಲ್ಲಿ 1500-1800 ರೂಪಾಯಿವರೆಗೆ ವಿದ್ಯುತ್ ಬಿಲ್ ಕಂಡು ಶಾಕ್ ಆಗಿದ್ದಾರೆ. ಇನ್ನು ಜನಸಾಮಾನ್ಯರದೊಂದು ಸಮಸ್ಯೆಯಾದ್ರೆ ಕೈಗಾರಿಕೆಗಳು ಕೂಡ ವಿದ್ಯುತ್ ದರ ಏರಿಕೆಗೆ ಕಂಗಾಲಾಗಿವೆ. ವಿದ್ಯುತ್ ಬಿಲ್​ಗೆ ಬೆದರಿ ಸಣ್ಣ ಕೈಗಾರಿಕೆಗಳು ಬಳಲಿ ಬೆಂಡಾಗಿವೆ.

ಕೈಗಾರಿಕೆಗೆ ಬೀಗ ಹಾಕಿ ಸರ್ಕಾರಕ್ಕೆ ನಡೆಸುವಂತೆ ಕೀ ಕೊಡಲು ಪೀಣ್ಯ ಸಣ್ಣ ಕೈಗಾರಿಕೆಗಳು ಮುಂದಾಗಿವೆ. ಏಷ್ಯಾದಲ್ಲಿ ಸುಪ್ರಸಿದ್ದ, ಖ್ಯಾತಿ ಪಡೆದಿರುವ ಬೆಂಗಳೂರಿನ ಪೀಣ್ಯ ಕೈಗಾರಿಕೆಯು ಮೆಕಾನಿಕಲ್, ಗಾರ್ಮೆಂಟ್ ಸಣ್ಣ ಕೈಗಾರಿಕೆಗೆ ಹೆಸರುವಾಸಿ. ಆದ್ರೆ ಈಗ ಕರೆಂಟ್ ಯೂನಿಟ್ ಬೆಲೆ ಹಾಗೂ ನಿಗಧಿತ ಶುಲ್ಕ ಹೆಚ್ಚಳದಿಂದ ಕೈಗಾರಿಕೆ ನಡೆಸಲು ಭಾರೀ ಸಮಸ್ಯೆ ಎದುರಾಗಿದೆ. ಪೀಣ್ಯ ಕೈಗಾರಿಕೆ ವಲಯದಲ್ಲಿ 12 ಸಾವಿರ ಸಣ್ಣ ಕೈಗಾರಿಕೆಗಳಿವೆ. ಇದರಲ್ಲಿ ಬಿಡಿಭಾಗ ತಯಾರಿಸುವ 5 ಸಾವಿರ ಮೆಕಾನಿಕಲ್ ಸಣ್ಣ ಕೈಗಾರಿಕೆ ಇವೆ. ಇವೆಲ್ಲ ಕರೆಂಟ್ ಮೇಲೆ ಅವಲಂಬಿತವಾಗಿವೆ. ಕಮರ್ಷಿಯಲ್‌ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳವಾಗಿದೆ. ಈ ಮೊದಲು ಪ್ರತಿ ಯೂನಿಟ್ ಗೆ 6.75 ರೂ ಇತ್ತು. ಇದೀಗ ಪ್ರತಿ ಯೂನಿಟ್ ಬೆಲೆ 8.50 ರೂ. ಹೆಚ್ಚಳ ಮಾಡಿದ್ದಾರೆ. ನಿಗಧಿತ ಶುಲ್ಕವೂ ಶೇ. 40-60ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ವಿದ್ಯುತ್ ದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ: ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಿ. ಅದು ಬಿಟ್ಟು ಈ ರೀತಿ ಕರೆಂಟ್‌ ಶಾಕ್‌ ಕೊಡಬೇಡಿ. 4 ಸಾವಿರಕ್ಕೂ ಹೆಚ್ಚು ಮೆಕಾನಿಕಲ್ ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ ಎದುರಾಗಿದೆ. ಹೀಗೆ ಮುಂದುವರೆದ್ರೆ ಕೈಗಾರಿಕೆ ಬೀಗ ಹಾಕಿ ಅದರ ಕೀ ನಿಮಗೆ ಕೊಡ್ತೀವಿ, ನೀವೇ ನಡೆಸಿ ಎಂದು ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ