ನಾನ್-ಎಸಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರೈಲ್ವೆ, ಎಸಿ ಬಸ್‌ಗಳ ಟಿಕೆಟ್ ಸಂಗ್ರಹಕ್ಕೆ ಹೊಡೆತ
ಮಹಿಳೆಯರಿಗೆ ಶಕ್ತಿ ಯೋಜನೆಯಡಿ ನಾನ್-ಎಸಿ ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಆರಂಭವಾಗಿದೆ. ಇದರಿಂದ ಪ್ರಮುಖ ನಗರಗಳ ರೈಲ್ವೆ ಮತ್ತು ಉನ್ನತ ದರ್ಜೆಯ ವೋಲ್ವೋ ಬಸ್‌ಗಳ ಟಿಕೆಟ್ ಹಣ ಸಂಗ್ರಹಕ್ಕೆ ಹೊಡೆತ ಬಿದ್ದಿದೆ.
ಮೈಸೂರು: ಮಹಿಳೆಯರಿಗೆ ಶಕ್ತಿ ಯೋಜನೆಯಡಿ (Shakti Yojana) ನಾನ್-ಎಸಿ (Non-AC) ಸರ್ಕಾರಿ ಸಾರಿಗೆ ಬಸ್ನಲ್ಲಿ (Government Bus) ಉಚಿತ ಪ್ರಯಾಣ ಆರಂಭವಾಗಿದೆ. ಇದರಿಂದ ಪ್ರಮುಖ ನಗರಗಳ ರೈಲ್ವೆ (Train) ಮತ್ತು ಉನ್ನತ ದರ್ಜೆಯ ವೋಲ್ವೋ ಬಸ್‌ಗಳ (Volvo Bus) ಟಿಕೆಟ್ ಹಣ ಸಂಗ್ರಹಕ್ಕೆ ಹೊಡೆತ ಬಿದ್ದಿದೆ. ಹೌದು ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಉತ್ಸುಕರಾಗಿದ್ದಾರೆ. ಇದರಿಂದ ರೈಲ್ವೆಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಲ್ಲಿ ಶೇ 20ರಷ್ಟು ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಮೈಸೂರಿನಿಂದ ಬೆಂಗಳೂರಿಗೆ, ಮಲೆ ಮಹದೇಶ್ವರ ಬೆಟ್ಟ ಹಾಗೂ ಇತರೆ ಯಾತ್ರಾ ಕೇಂದ್ರಗಳಿಗೆ ತೆರಳುವ ನಾನ್-ಎಸಿ ಸರ್ಕಾರಿ ಸಾರಿಗೆ ಬಸ್‌ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ.
ಶಕ್ತಿ ಯೋಜನೆಯ ಎರಡನೇ ದಿನ, ಅನೇಕ ವೋಲ್ವೋ ಬಸ್‌ಗಳು ಪ್ರಯಾಣಿಕರಿಗಾಗಿ ಸಾಕಷ್ಟು ಹೊತ್ತು ಕಾದು ನಿಂತಿರುವುದನ್ನು ಕಾಣಬಹುದಾಗಿತ್ತು. ಹೀಗಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಆರಾಮದಾಯಕ ಮತ್ತು ಸುರಕ್ಷತೆ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಹೆಚ್ಚಿನ ನಾನ್-ಎಸಿ ಬಸ್ಗಳನ್ನು ರಸ್ತೆಗೆ ಇಳಿಸಲು ಪರದಾಡಿತು.
ಕೆಎಸ್‌ಆರ್‌ಟಿಸಿ ಚಾಲಕ ರವಿ ಮಾತನಾಡಿ, ಬೆಂಗಳೂರು- ಮಲೆಮಹದೇಶ್ವರ ಬೆಟ್ಟ ಬಸ್ನಲ್ಲಿ ಸಾಮರ್ಥ್ಯಕ್ಕೆ ಮೀರಿ ಜನರು ಪ್ರಯಾಣಿಸಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆ ಮಹಿಳೆಯರೇ ಇದ್ದರು. ಅಲ್ಲದೇ ಬೇರೆ ಯಾತ್ರಾಸ್ಥಳಕ್ಕೆ ಬಸ್ಗಳಲ್ಲೂ ಇದೇ ದೃಶ್ಯಗಳನ್ನು ನೋಡಬಹುದಿತ್ತು ಎಂದು ಹೇಳಿದ್ದಾರೆ.
ಉಚಿತ ಪ್ರಯಾಣ ಮಾಡಿದ್ದರಿಂದ ಮದುವೆ ಸಮಾರಂಭ, ಪ್ರವಾಸಕ್ಕೆ ಹೆಚ್ಚಾಗಿ ಮಹಿಳೆಯರೇ ತೆರಳುತ್ತಿದ್ದು, ತಮ್ಮ ಲಗೇಜ್ ಜೊತೆಗೆ ಆಧಾರ್ ಕಾರ್ಡ್‌ಗಳನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ 2 ಗಂಟೆ ಪ್ರಯಾಣವಿದ್ದು, ಒಡೆಯರ್ ಎಕ್ಸ್‌ಪ್ರೆಸ್ ಸೇರಿದಂತೆ ಮೈಸೂರು ಮತ್ತು ಬೆಂಗಳೂರು ನಡುವಿನ ಎಲ್ಲ ರೈಲುಗಳು ಬಹುತೇಕ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ. ಮುಂಜಾನೆ ನಗರದಿಂದ ಹೊರಡುವ ರೈಲುಗಳನ್ನು ಹೊರತುಪಡಿಸಿ, ಉಳಿದ ಸಮಯದಲ್ಲಿ ಸಂಚರಿಸಿವ ರೈಲುಗಳು ಬಹುತೇಕ ಖಾಲಿಯಾಗಿದ್ದವು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Wed, 14 June 23