ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ, ಯುನಿಟ್ ದರದಲ್ಲಿ ಭಾರೀ ಹೆಚ್ಚಳಕ್ಕೆ ಪ್ರಸ್ತಾವನೆ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡ್ತಿದೆ. ಈ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಬೆಂಗಳೂರು: ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ಯುನಿಟ್‌ಗೆ 1 ರೂ. 50 ಪೈಸೆ ಹೆಚ್ಚಳಕ್ಕೆ ಕೆಇಆರ್‌ಸಿಗೆ(Karnataka Electricity regulatory commission) ಬೆಸ್ಕಾಂ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ವಿದ್ಯುತ್ ದರ ಹೆಚ್ಚಳವಾಗಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡ್ತಿದೆ. ಈ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ನಷ್ಟದ ನೆಪವೊಡ್ಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 1 ರೂ 50 ಪೈಸೆ ಹೆಚ್ಚಳ ಮಾಡುವಂತೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಬಾರಿ 1 ರೂ 39 ಪೈಸೆ ಪ್ರಸ್ತಾವನೆ ಇಟ್ಟಿತ್ತು. ಇದೀಗ ಮತ್ತೆ ಈ ಬಾರಿ 1 ರೂ 50 ಪೈಸೆ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಿದೆ. ಸದ್ಯ ಈಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ? ಎಂಬ ಪ್ರಶ್ನೆ ಎದ್ದಿದೆ. KERC ಸಾಧಕ ಬಾಧಕಗಳನ್ನ ಪರಿಶೀಲನೆ ಮಾಡಿ ದರ ಪರಿಷ್ಕರಣೆ ಮಾಡಲಿದೆ. ಬೆಸ್ಕಾಂ ಪ್ರಸ್ತಾವನೆಗೆ KERC ಒಪ್ಪಿಗೆ ಕೊಟ್ಟರೆ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ.
ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು? 2009 ರಲ್ಲಿ ಪ್ರತಿ ಯೂನಿಟ್ಗೆ 34 ಪೈಸೆ ಹೆಚ್ಚಳ 2010 ರಲ್ಲಿ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಳ 2011 ರಲ್ಲಿ ಪ್ರತಿ ಯೂನಿಟ್ಗೆ 28 ಪೈಸೆ ಹೆಚ್ಚಳ 2012 ರಲ್ಲಿ ಪ್ರತಿ ಯೂನಿಟ್ಗೆ 13 ಪೈಸೆ ಹೆಚ್ಚಳ 2013 ರಲ್ಲಿ ಪ್ರತಿ ಯೂನಿಟ್ಗೆ 13 ಪೈಸೆ ಹೆಚ್ಚಳ 2017 ರಲ್ಲಿ ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ 2019 ರಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ 2020 ರಲ್ಲಿ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಳ
ಇದನ್ನೂ ಓದಿ: ಮನೆಯಲ್ಲೇ ಚಿಕನ್ ರೋಲ್ನ ಸುಲಭವಾಗಿ ಮಾಡಬಹುದು; ವಿಧಾನ ಇಲ್ಲಿದೆ