ಶಾಸಕ ಜಮೀರ್ ಅಹ್ಮದ್​ಗೆ ಇ.ಡಿ. ಬುಲಾವ್​; ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್​ ಶಾಸಕ

ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​ ಖಾನ್​ಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬುಲಾವ್ ನೋಟಿಸ್​​ ಬಂದಿರುವ ಹಿನ್ನೆಲೆ ಶಾಸಕ ಜಮೀರ್ ದೆಹಲಿಗೆ ತೆರಳಿದ್ದಾರೆ.

ಶಾಸಕ ಜಮೀರ್ ಅಹ್ಮದ್​ಗೆ ಇ.ಡಿ. ಬುಲಾವ್​; ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್​ ಶಾಸಕ
ಶಾಸಕ ಜಮೀರ್ ಅಹ್ಮದ್​ಗೆ ಇ.ಡಿ. ಬುಲಾವ್​; ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್​ ಶಾಸಕ
Updated By: ಸಾಧು ಶ್ರೀನಾಥ್​

Updated on: Aug 21, 2021 | 1:00 PM

ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​ ಖಾನ್​ಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬುಲಾವ್ ನೋಟಿಸ್​​ ಬಂದಿರುವ ಹಿನ್ನೆಲೆ ಶಾಸಕ ಜಮೀರ್ ದೆಹಲಿಗೆ ತೆರಳಿದ್ದಾರೆ. ಜಮೀರ್ ಅಹಮದ್ ಖಾನ್ ಗೆ ವಿಚಾರಣೆಗಾಗಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೆಂಪೇಗೌಡ ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದಾರೆ.

ಜಾರಿ ನಿರ್ದೇಶನಾಲಯ ಬುಲಾವ್ ನೀಡಿರುವ ವಿಚಾರವಾಗಿಯೇ ನಿನ್ನೆ ಡಿ ಕೆ ಶಿವಕುಮಾರ್ ಜೊತೆ ಶಾಸಕ ಜಮೀರ್ ಅಹಮದ್ ಚರ್ಚೆ ನಡೆಸಿದ್ದರು. ಶುಕ್ರವಾರ ತಡ ರಾತ್ರಿ ನಡೆದ ಭೇಟಿ ವೇಳೆ ಇ.ಡಿ. ವಿಚಾರಣೆ ಎದುರಿಸುವ ಬಗ್ಗೆ ಜಮೀರ್ ಅಹಮದ್ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ. ಹಿಂದಿನ ಘಟನಾವಳಿ ಬಗ್ಗೆ ಡಿಕೆಶಿಯಿಂದ ಜಮೀರ್ ಮಾಹಿತಿ ಪಡೆದರು. ಜಮೀರ್ ಗೆ ಇ.ಡಿ. ವಿಚಾರಣೆಯ ರೀತಿರಿವಾಜುಗಳ ಬಗ್ಗೆಯೂ ಡಿ ಕೆ ಶಿವಕುಮಾರ್ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.

ಇದೇ ತಿಂಗಳ 5 ರಂದು ನಡೆದಿದ್ದ ಇ.ಡಿ ಅಧಿಕಾರಿಗಳು ಶಾಸಕ ಜಮೀರ್​ಗೆ ಸೇರಿದ ಭವ್ಯ ಬಂಗಲೆ, ಮನೆಗಳು, ನ್ಯಾಷನಲ್ ಟ್ರಾವೆಲ್ಸ್​​ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಸತತ 24 ಗಂಟೆಗಳ ಕಾಲ ಇ.ಡಿ ದಾಳಿ ನಡೆದಿತ್ತು.

ಡಿ ಕೆ ಶಿವಕುಮಾರ್ ಜೊತೆ ಶಾಸಕ ಜಮೀರ್ ಅಹಮದ್ ಚರ್ಚೆ

Also read:
ಇ.ಡಿ ದಾಳಿಯ ಬೆನ್ನಲ್ಲೇ ದೇವರ ಮೊರೆ ಹೋದ ಶಾಸಕ ಜಮೀರ್ ಅಹ್ಮದ್, ಅಜ್ಮೇರ್ ಯಾತ್ರೆ ಮುಗಿಸಿ ವಾಪಾಸ್

(Enforcement directorate notice congress mla zameer ahmed leaves for delhi)

Published On - 12:29 pm, Sat, 21 August 21