ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಖಂಡಿಸಿ ಕ್ರಾಂತಿ ಯಾತ್ರೆ ಮಾಡುತ್ತೇವೆ: ಈಶ್ವರ ಖಂಡ್ರೆ

ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ಕೂಡ ನೀಡುತ್ತಿಲ್ಲ. ಹೊರಗಿನವರಿಗೆ ನಮ್ಮ ಭಾಗದ ಸಮಸ್ಯೆ ಅರ್ಥ ಹೇಗೆ ಆಗುತ್ತೆ? ಒಂದು ಖಾತೆಯನ್ನೇ ನಿಭಾಯಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೇಗೆ ನೋಡಿಕೊಳ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಖಂಡಿಸಿ ಕ್ರಾಂತಿ ಯಾತ್ರೆ ಮಾಡುತ್ತೇವೆ: ಈಶ್ವರ ಖಂಡ್ರೆ
ಈಶ್ವರ ಖಂಡ್ರೆ
Updated By: ganapathi bhat

Updated on: Feb 01, 2022 | 6:48 PM

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ಯುಪಿಎ ಸರ್ಕಾರ ಇದ್ದಾಗ 371 ಜೆ ವಿಶೇಷ ಸ್ಥಾನ ಮಾನ ನೀಡಲಾಗಿತ್ತು. 2013-18 ರ ವರಗೆ 600 ರಿಂದ 1200 ಕೋಟಿ ರೂಪಾಯಿ ಅನುದಾನ ನೀಡಲಾಯ್ತು. 30 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಬಿಜೆಪಿ ಸರ್ಕಾರ ಬಂದು 31 ತಿಂಗಳಾಯ್ತು. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಆಗ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಂಗಳವಾರ ಹೇಳಿಕೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಮಂಡಳಿ ಮಾಡುತ್ತೇವೆ ಎಮದು ಸಿಎಂ ಭರವಸೆ ಕೊಟ್ಟಿದ್ರೂ ಈಡೇರಿಲ್ಲ. ಅನುದಾನ ನೀಡಿದ್ದರೂ ಕೂಡ ಅದು ಬಳಕೆಯಾಗ್ತಿಲ್ಲ. 1130 ಕೋಟಿಗೆ ಅನುದಾನ ಇಳಿಕೆ ಮಾಡಿದರು. ಕೊವಿಡ್ ಕಾರಣದಿಂದ ಶೇ.20 ಮಾತ್ರ ಅನುದಾನ ಬಳಕೆ ಮಾಡ್ತಿದ್ದಾರೆ. ಇಲ್ಲಿಯವರೆಗೆ ಬರೀ 250 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದವರನ್ನು ಎರಡನೇ ದರ್ಜೆಯ ನಾಗರೀಕರಂತೆ ನೋಡಲಾಗ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಳೆ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡ್ತೇವೆ. ಕಲ್ಯಾಣ ಕರ್ನಾಟಕಕ್ಕೆ ಮಾರಕ ಆಗುವ ಸುತ್ತೋಲೆ ರದ್ದಿಗೆ ಮನವಿ ಮಾಡುತ್ತೇವೆ. ನಮ್ಮ ಭಾಗದ ಯುವಕರಿಗೆ ಮಾರಕ ಆಗುವ ಸುತ್ತೋಲೆ ರದ್ದು ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಕ್ರಾಂತಿ ಯಾತ್ರೆ ಮಾಡುತ್ತೇವೆ. 41 ಕ್ಷೇತ್ರಗಳಲ್ಲಿ 82 ಕಡೆ ಪ್ರತಿಭಟನಾ ಸಮಾವೇಶ ಮಾಡ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ಕೂಡ ನೀಡುತ್ತಿಲ್ಲ. ಹೊರಗಿನವರಿಗೆ ನಮ್ಮ ಭಾಗದ ಸಮಸ್ಯೆ ಅರ್ಥ ಹೇಗೆ ಆಗುತ್ತೆ? ಒಂದು ಖಾತೆಯನ್ನೇ ನಿಭಾಯಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೇಗೆ ನೋಡಿಕೊಳ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಹೆಚ್ಚಾದ ಅಪೌಷ್ಟಿಕತೆ; ಶಾಲೆ ಆವರಣದಲ್ಲೇ ಕೈ ತೋಟ, ಹೊಸ ಪ್ರಯತ್ನದತ್ತ ತೋಟಗಾರಿಕೆ ಇಲಾಖೆ

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಿಗದ ಅನುದಾನ; 1127 ಕೋಟಿ ರೂ. ಬಿಡುಗಡೆಗೆ 3 ತಿಂಗಳಷ್ಟೇ ಬಾಕಿ