ಅನಧಿಕೃತ ಫ್ಲೆಕ್ಸ್ ಮುಕ್ತ ಅಭಿಯಾನಕ್ಕೆ ಸಹಕರಿಸಲು ಬಿಬಿಎಂಪಿ ಮನವಿ, ಹಾಫ್ ಹೆಲ್ಮೆಟ್ ಧರಿಸದಂತೆ ಪೊಲೀಸರಿಂದ ಜಾಗೃತಿ
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ ಇನ್ನಿತರೆ ಜಾಹೀರಾತು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತು, ಬೃಹತ್ ಎಲ್ಇಡಿ ಜಾಹೀರಾತು, ಸೈಕಲ್ ಜಾಹೀರಾತು ಮುಕ್ತಗೊಳಿಸುವ ಅಭಿಯಾನಕ್ಕೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ.
ಬೆಂಗಳೂರು: ಅನಧಿಕೃತ ಫ್ಲೆಕ್ಸ್ ಮುಕ್ತಗೊಳಿಸುವ ಅಭಿಯಾನಕ್ಕೆ ಸಹಕರಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮನವಿ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ ಇನ್ನಿತರೆ ಜಾಹೀರಾತು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತು, ಬೃಹತ್ ಎಲ್ಇಡಿ ಜಾಹೀರಾತು, ಸೈಕಲ್ ಜಾಹೀರಾತು ಮುಕ್ತಗೊಳಿಸುವ ಅಭಿಯಾನಕ್ಕೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ. ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಸ್ ಹಾಗೂ ಸರ್ಕಾರೇತರ ಸಂಸ್ಥೆಗಳು, ಜನರಿಗೆ ಬಿಬಿಎಂಪಿ ಮನವಿ ಮಾಡಿದೆ.
ಹಾಫ್ ಹೆಲ್ಮೆಟ್ ಧರಿಸದಂತೆ ಬೈಕ್ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರಿಂದ ಜಾಗೃತಿ ಅಭಿಯಾನ
ಬೆಂಗಳೂರು ಸಂಚಾರಿ ಪೊಲೀಸರಿಂದ ಬೈಕ್ ಸವಾರರಿಗೆ ಜಾಗೃತಿ ಅಭಿಯಾನ ನಡೆಸಲಾಗಿದೆ. ಹಾಫ್ ಹೆಲ್ಮೆಟ್ ಹಾಕಿ ಓಡಾಡುವ ವಾಹನ ಸವಾರರಿಗೆ ಅರಿವು ಮೂಡಿಸಲಾಗಿದೆ. ಹಾಫ್ ಹೆಲ್ಮೆಟ್ನಿಂದ ಆಗುವ ಅನಾನುಕೂಲಗಳ ಬಗ್ಗೆ ಪೊಲೀಸರು ಅರಿವು ಹಾಗೂ ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸರಿಂದ ಅರಿವುಮೂಡಿಸುವ ಕಾರ್ಯ ನಡೆಸಲಾಗಿದೆ.
ಹಾಫ್ ಹೆಲ್ಮೆಟ್ ಹಾಕಿದ್ರೆ ಜೀವಕ್ಕೆ ಅಪಾಯ ಎಂದು ಜಾಗೃತಿ ಮೂಡಿಸಲಾಗಿದೆ. ಹೀಗಾಗಿ ಹಾಫ್ ಹೆಲ್ಮೆಟ್ ಬಳಸದಂತೆ ವಾಹನ ಸವಾರರಿಗೆ ಅರಿವು ಮೂಡಿಸಲಾಗಿದೆ. ವೈಟ್ ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಬೈಕ್ ಸವಾರರಿಗೆ ಜಾಗೃತಿ ಕಾರ್ಯ ನಡೆದಿದೆ. ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ಕೊಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಅಪಘಾತವಾದಾಗ ತಲೆಗೆ ಪೆಟ್ಟಗುವ ಸಾಧ್ಯತೆ ಹೆಚ್ಚು. ಐಎಸ್ಐ ಮಾರ್ಕ್ ಇರುವ ಪೂರ್ಣ ಹೆಲ್ಮೆಟ್ ಮಾತ್ರ ಬಳಸಿ ಎಂದು ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.
ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಗೃಹ ಸಚಿವರ ಸಭೆ
ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ನಾಳೆ (ಫೆಬ್ರವರಿ 2) ಸಂಜೆ ಸಭೆ ನಡೆಸಲಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಚಾರ ಸುಗಮತೆ, ಸಮಸ್ಯೆಗಳು ಹಾಗೂ ಟೋಯಿಂಗ್ ವಿಚಾರ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ಹಾಗೂ ಇತರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಯಲಿದೆ.
ಇದನ್ನೂ ಓದಿ: ‘ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ಇಲ್ಲ; ಸಾರ್ವಜನಿಕರು ಬೈಕ್ ಟ್ಯಾಕ್ಸಿ ಸೇವೆ ಪಡೆಯಬಾರದು’
ಇದನ್ನೂ ಓದಿ: ಟೋಯಿಂಗ್ ನೀತಿ ಪುನರ್ ಪರಿಶೀಲನೆ ಬಗ್ಗೆ ಚರ್ಚೆ; ರಾಂಗ್ ಪಾರ್ಕಿಂಗ್ಗೆ ಬೇರೆ ರೀತಿಯಲ್ಲಿ ಕ್ರಮ: ಕಮಲ್ ಪಂತ್ ಹೇಳಿಕೆ