Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 14,366 ಜನರಿಗೆ ಕೊರೊನಾ ದೃಢ; 58 ಮಂದಿ ಸಾವು
ಬೆಂಗಳೂರಿನಲ್ಲಿ ಇಂದು ಒಂದೇ ದಿನ 6,685 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 17,27,575 ಕ್ಕೆ ಏರಿಕೆಯಾಗಿದೆ. 17,27,575 ಸೋಂಕಿತರ ಪೈಕಿ 16,05,847 ಜನರು ಗುಣಮುಖರಾಗಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಫೆಬ್ರವರಿ 1) ಹೊಸದಾಗಿ 14,366 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 38,23,833 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 35,87,022 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 58 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 39,056 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 1,97,725 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 6,685 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 17,27,575 ಕ್ಕೆ ಏರಿಕೆಯಾಗಿದೆ. 17,27,575 ಸೋಂಕಿತರ ಪೈಕಿ 16,05,847 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,602 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 1,05,125 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 165, ಬಳ್ಳಾರಿ 437, ಬೆಳಗಾವಿ 1081, ಬೆಂಗಳೂರು ಗ್ರಾಮಾಂತರ 117, ಬೆಂಗಳೂರು ನಗರ 6685, ಬೀದರ್ 115, ಚಾಮರಾಜನಗರ 87, ಚಿಕ್ಕಬಳ್ಳಾಪುರ 126, ಚಿಕ್ಕಮಗಳೂರು 154, ಚಿತ್ರದುರ್ಗ 252, ದಕ್ಷಿಣ ಕನ್ನಡ 322, ದಾವಣಗೆರೆ 126, ಧಾರವಾಡ 633, ಗದಗ 73, ಹಾಸನ 337, ಹಾವೇರಿ 130, ಕಲಬುರಗಿ 135, ಕೊಡಗು 205, ಕೋಲಾರ 169, ಕೊಪ್ಪಳ 99, ಮಂಡ್ಯ 211, ಮೈಸೂರು 777, ರಾಯಚೂರು 38, ರಾಮನಗರ 58, ಶಿವಮೊಗ್ಗ 325, ತುಮಕೂರು 573, ಉಡುಪಿ 230, ಉತ್ತರ ಕನ್ನಡ 551, ವಿಜಯಪುರ 81, ಯಾದಗಿರಿ ಜಿಲ್ಲೆಯಲ್ಲಿ 74 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಇಂದಿನ 01/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/H7ENvLjEqZ @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/nTlq2SfSgB
— K’taka Health Dept (@DHFWKA) February 1, 2022
ಕೊರೊನಾದಿಂದ ಮೃತಪಟ್ಟವರ ವಿವರ
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 9 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಲ್ಲಿ 7, ಮಂಡ್ಯ ಜಿಲ್ಲೆಯಲ್ಲಿ 5, ಉಡುಪಿ ಜಿಲ್ಲೆಯಲ್ಲಿ 4, ಶಿವಮೊಗ್ಗ ಜಿಲ್ಲೆಯಲ್ಲಿ 3, ಬಾಗಲಕೋಟೆ, ದಾವಣಗೆರೆ, ಹಾಸನ, ಕಲಬುರಗಿ, ಕೋಲಾರ, ರಾಯಚೂರು, ರಾಮನಗರ ಜಿಲ್ಲೆಯಲ್ಲಿ 2, ಬಳ್ಳಾರಿ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಕೊಪ್ಪಳ, ತುಮಕೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ 1 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Budget 2022: ಪೂರ್ವ ಕೊವಿಡ್ ಮಟ್ಟಕ್ಕಿಂತ ಹೆಚ್ಚಿದ ಕೆಲಸದ ಬೇಡಿಕೆ; ಆದರೂ ಹೆಚ್ಚಿಸಿಲ್ಲ ಮನರೇಗಾ ಯೋಜನೆಗೆ ಅನುದಾನ