AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಸಿಟಿವಿಟಿ ರೇಟ್ 2% ಇರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ, 2 ದಿನ ಕಂಪ್ಲೀಟ್ ಲಾಕ್ ಮಾಡಲು ತಜ್ಞರ ಸಮಿತಿ ಶಿಫಾರಸ್ಸು

Corona Lockdown: ಪಾಸಿಟಿವಿಟಿ ರೇಟ್ 2% ಇರುವ ಜಿಲ್ಲೆಗಳಲ್ಲಿ ಬಾರ್, ಪಬ್, ಜಿಮ್, ಯೋಗಾ ಸೆಂಟರ್, ಸಿನಿಮಾ ಹಾಲ್, ದೇವಸ್ಥಾನ, ಕ್ಲಬ್ ಹೌಸ್ಗಳನ್ನ ಕ್ಲೋಸ್ ಮಾಡಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸೂಚನೆ ನೀಡಿದೆ.

ಪಾಸಿಟಿವಿಟಿ ರೇಟ್ 2% ಇರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ, 2 ದಿನ ಕಂಪ್ಲೀಟ್ ಲಾಕ್ ಮಾಡಲು ತಜ್ಞರ ಸಮಿತಿ ಶಿಫಾರಸ್ಸು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Aug 05, 2021 | 8:22 AM

ಬೆಂಗಳೂರು: ಕೆಲ ದಿನಗಳ ಕಾಲ ಸುಮ್ಮನಿದ್ದ ಕೊರೊನಾ ಈಗ ಮತ್ತೆ ತನ್ನ ಪ್ರಭಾವ ಹೆಚ್ಚಿಸುತ್ತಿದೆ. ರಾಜ್ಯದಲ್ಲಿ ಮೂರನೇ ಅಲೆ ಶುರುವಾಗಿದೆಯಾ ಎಂಬ ಅನುಮಾನ ಉಂಟು ಮಾಡಿದೆ. ಸದ್ಯ ಈಗ ಹೆಚ್ಚಾಗುತ್ತಿರುವ ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಬಿಗ್ ಶಾಕ್ ಸಿಕ್ಕಿದೆ. ಪಾಸಿಟಿವಿಟಿ ರೇಟ್ ಶೇ. 2 ಇರುವ ಜಿಲ್ಲೆಗಳು ಮತ್ತೆ ಲಾಕ್ ಆಗುವ ಸಾಧ್ಯತೆ ಇದೆ.

ಪಾಸಿಟಿವಿಟಿ ರೇಟ್ 2% ಇರುವ ಜಿಲ್ಲೆಗಳಲ್ಲಿ ಬಾರ್, ಪಬ್, ಜಿಮ್, ಯೋಗಾ ಸೆಂಟರ್, ಸಿನಿಮಾ ಹಾಲ್, ದೇವಸ್ಥಾನ, ಕ್ಲಬ್ ಹೌಸ್ಗಳನ್ನ ಕ್ಲೋಸ್ ಮಾಡಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸೂಚನೆ ನೀಡಿದೆ. ಜುಲೈ 30 ರಂದು ನಡೆದ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ತಜ್ಞರು ಈ ನಿರ್ಧಾರ ಕೈಗೊಂಡಿದ್ದು ಕೇರಳ ಆತಂಕ ಹೆಚ್ಚಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳ ಮೇಲೆ ಕಠಿಣ ರೂಲ್ಸ್ ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ.

ಪಾಸಿಟಿವಿಟಿ ರೇಟ್ 2% ಇರುವ ಜಿಲ್ಲೆಯಲ್ಲಿ ಕಠಿಣ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ. ರಾಜ್ಯದಲ್ಲಿ ಪಾಸಿಟಿವ್ ರೇಟ್ 2% ಇರುವ ಜಿಲ್ಲೆಗಳೆಂದರೆ, ದಕ್ಷಿಣ ಕನ್ನಡ ಜಿಲ್ಲೆ, ಕೊಡಗು, ಉಡುಪಿ, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 2% ಮೇಲಿದ್ದು ಸ್ಟ್ರೀಟ್ ರೂಲ್ಸ್ ಗೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.

ಕಳೆದ ಏಳು ದಿನದಿಂದ 6 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಳ ದಕ್ಷಿಣ ಕನ್ನಡ ಜಿಲ್ಲೆ ಪಾಸಿಟಿವಿಟಿ ರೇಟ್ -4.42% ಚಿಕ್ಕಮಗಳೂರು -3.67% ಕೊಡಗು -3.44% ಉಡುಪಿ -3.39% ಹಾಸನ -2.8% ಶಿವಮೊಗ್ಗ -2.3%

ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಿದರೆ ಹೊಸ ರೂಲ್ಸ್? ಬೆಳಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಮಾತ್ರ ಬಸ್‌ಗಳ ಸಂಚಾರ ಮಾಡಬೇಕು. ಸಂಜೆ 7ರಿಂದ ಬೆಳಗ್ಗೆ 6ರವರೆಗೆ ನೈಟ್‌ ಕರ್ಫ್ಯೂಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 6ರವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲು ಸಮಿತಿಯ ಶಿಫಾರಸು ಮಾಡಿದೆ. ಹಾಗೂ 2 ದಿನ ಕಂಪ್ಲೀಟ್ ಲಾಕ್ ಮಾಡಲು ಸೂಚನೆ ನೀಡಿದೆ.

ಇದನ್ನೂ ಓದಿ: Lady Finger: ಆಹಾರದಲ್ಲಿ ಬೆಂಡೆಕಾಯಿಯನ್ನು ಹೆಚ್ಚು ಸೇವಿಸಿ, ಇದು ಮಧುಮೇಹದಿಂದ ಮುಕ್ತಿ ನೀಡುತ್ತದೆ

Published On - 8:22 am, Thu, 5 August 21