ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್, ವಿಮಾನದ ಟಾಯ್ಲೆಟ್ ನಲ್ಲಿ ಸಿಕ್ಕ ಟಿಶ್ಯೂ ಪೇಪರ್ ಮೇಲೆ ಗೀಚಿದ ಬರಹದಿಂದ ಅವಾಂತರ!
ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನ ಹೊತ್ತು ತಂದಿದ್ದ ಇಂಡಿಗೋ ವಿಮಾನದ ಟಾಯ್ಲೆಟ್ ನ ಟಿಶ್ಯೂ ಪೇಪರ್ ಮೇಲೆ ಗೀಚಿದ ಅನಾಮದೇಯ ಬರಹವೊಂದು ಸಿಕ್ಕಿತ್ತು. ಅದರಲ್ಲಿ "ಲ್ಯಾಂಡ್ ನಾ ಕರ್ನಾ, ಇಸ್ ಫ್ಲೈಟ್ ಮೇ ಬಾಂಬ್ ಹೈ" ಎಂದು ಹಿಂದಿ ಭಾಷೆಯಲ್ಲಿ ಬರೆದಿದ್ದರು.
ಬೆಂಗಳೂರು: ಕೆಂಪೇಗೌಡ ವಿಮಾನ(Kempegowda Airport) ನಿಲ್ದಾಣದಲ್ಲಿ ಲ್ಯಾಂಡ್ ಆದ ಇಂಡಿಗೋ ಫ್ಲೈಟ್( Indigo Flight) ನಲ್ಲಿ ಹುಸಿ ಬಾಂಬ್ ಇರುವುದಾಗಿ ಬೆದರಿಕೆ ಸಂದೇಶ ಸಿಕ್ಕಿದೆ. ನಿನ್ನೆ ರಾತ್ರಿ 9:30ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನ ಹೊತ್ತು ತಂದಿದ್ದ ಇಂಡಿಗೋ ವಿಮಾನದ ಟಾಯ್ಲೆಟ್ ನ ಟಿಶ್ಯೂ ಪೇಪರ್ ಮೇಲೆ ಗೀಚಿದ ಅನಾಮದೇಯ ಬರಹವೊಂದು ಸಿಕ್ಕಿತ್ತು. ಅದರಲ್ಲಿ “ಲ್ಯಾಂಡ್ ನಾ ಕರ್ನಾ, ಇಸ್ ಫ್ಲೈಟ್ ಮೇ ಬಾಂಬ್ ಹೈ” ಎಂದು ಹಿಂದಿ ಭಾಷೆಯಲ್ಲಿ ಬರೆದಿದ್ದರು. ಇದು ವಿಮಾನದ ಪೈಲಟ್ ಗಮನಕ್ಕೆ ಬಂದ ಕೂಡಲೇ ಕೆಐಎಎಲ್ಎ ಭದ್ರತಾ ಏಜೆನ್ಸಿ ಸಂಪರ್ಕಿಸಿ, ಅನುಮತಿ ಬಳಿಕ ಫ್ಲೈಟ್ ಲ್ಯಾಂಡ್ ಮಾಡಲಾಗಿದೆ. ಕೂಡಲೇ CISF ಮತ್ತು ವಾಯು ಸಂಚಾರ ನಿಯಂತ್ರಣ ಘಟಕ ಸಿಬ್ಬಂದಿ ಸಂಪರ್ಕಿಸಿ ವಿಷಯ ತಿಳಿಸಿದ್ದು ಪ್ರತ್ಯೇಕ ಸ್ಥಳಕ್ಕೆ ಫ್ಲೈಟ್ ಸ್ಥಳಾಂತರ ಮಾಡಿ ತೀವ್ರ ತಪಾಸಣೆ ನಡೆಸಲಾಗಿದೆ.
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, CISF ನಿಂದ ತಪಾಸಣೆ ನಡೆಸಿ ಪ್ರತಿಯೊಬ್ಬ ಪ್ರಯಾಣಿಕರ ಕೈಬರಹ ಮಾದರಿ ಸಂಗ್ರಹಿಸಲಾಗಿದೆ. ಹುಸಿ ಬಾಂಬ್ ಕರೆ ಹಿನ್ನಲೆ 3 ಗಂಟೆ ತಡವಾಗಿ ವಿಮಾನ ಜೈಪುರಕ್ಕೆ ಪ್ರಯಾಣಿಕರನ್ನು ಹೊತ್ತೊಯ್ದಿದೆ. ಘಟನೆ ಸಂಬಂಧ ಕೆಐಎಬಿ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:04 pm, Mon, 8 August 22