ಬೆಂಗಳೂರು, ಮೇ.31: ಮಳೆಗಾಲ ಬಂತು ಅಂದ್ರೆ ಸಿಲಿಕಾನ್ ಸಿಟಿ ಜನರಿಗೆ ಆತಂಕ ಶುರುವಾಗಿಬಿಡುತ್ತೆ. ಯಾವ ರಸ್ತೆಯಲ್ಲಿ ನೀರು ನುಗ್ಗುತ್ತೋ, ಎಲ್ಲಿ ಮರ ಬೀಳುತ್ತೋ ಅನ್ನೋ ಭಯದಲ್ಲೇ ಜನರು ಸಂಚಾರ ಮಾಡಬೇಕಾಗುತ್ತೆ. ಆದರೆ ಸದ್ಯ ಇದೇ ಸ್ಥಿತಿ ಬೆಂಗಳೂರು ಜ್ಞಾನಭಾರತಿ ಯೂನಿವರ್ಸಿಟಿಯಲ್ಲಿ (Bangalore University) ಶುರುವಾಗಿದೆ. ವಿದ್ಯಾರ್ಥಿಗಳು ಹಾಗೂ ಕ್ಯಾಂಪಸ್ ನಲ್ಲಿ ಸಂಚಾರ ಮಾಡುವ ವಿದ್ಯಾರ್ಥಿಗಳು ಭಯದಲ್ಲಿಯೇ ಸಂಚಾರ ಮಾಡಬೇಕಿದೆ. ಮಳೆಗಾಲ ಶುರುವಾದ್ರೂ ಬೆಂಗಳೂರು ವಿವಿ ಎಚ್ಚೆತ್ತುಗೊಂಡಿಲ್ಲ. ಕ್ಯಾಂಪಸ್ ನಲ್ಲಿ ಸಾಕಷ್ಟು ಮರಗಳು ಅಪಾಯಕ್ಕೆ ಅವಕಾಶ ಮಾಡಿಕೊಂಡುವಂತೆ ಇವೆ. ಕ್ಯಾಂಪನ್ ಹಲವು ಕಡೆ ಮರದ ಕೊಂಬೆಗಳು ಕೆಲ ಗಿಡಗಳು ಒಣಗಿ ಈಗಲೋ ಆಗಲೋ ಬೀಳುವಂತೆ ಇವೆ.
ನಿತ್ಯ ಕ್ಯಾಂಪಸ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಓಡಾಡ್ತಿರ್ತಾರೆ. ವಾಹನ ಸವಾರರು ಸಂಚಾರ ಮಾಡ್ತಾರೆ. ಈ ಒಣಗಿದ ಮರಗಳು ಬೀಳುವಂತಿವೆ ಅಪಾಯಕ್ಕೆ ಅವಕಾಶ ಮಾಡಿಕೊಡುವಂತಿವೆ. ಈ ಬಗ್ಗೆ ವಿವಿಗೆ ಸಾಕಷ್ಟು ದೂರುಗಳು ನೀಡಲಾಗಿದೆ. ಯೂನಿವರ್ಸಿಟಿ ವಿಸಿಗೆ ಮೇಲ್ ಕೂಡಾ ಹಾಕಲಾಗಿದೆ. ಇಷ್ಟಾದ್ರೂ ವಿವಿ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಬೆಂಗಳೂರು ಯೂನಿವರ್ಸಿಟಿ ಕೇಂದ್ರ ಕಚೇರಿ ಕಡೆಯಿಂದ ನಾಗರಬಾವಿ ವೃತ್ತದ ಕಡೆ ಬರುವ ಮಾರ್ಗದಲ್ಲಿ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಕಾಂಪೌಂಡ್ ಪಕ್ಕದಲ್ಲಿ ಒಣಗಿ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಮರದ ಬುಡ. ವಾಹನ ಸವಾರರು ಹಾಗೂ ದಾರಿಹೋಕರಿಗೆ ಅಪಾಯಕ್ಕೆ ಅವಕಾಶ ಮಾಡಿಕೊಡುವಂತಿದೆ.
ಇದನ್ನೂ ಓದಿ: No Tobacco Day 2024 : ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ದೂರವಿರುವುದು ಹೇಗೆ? ಇಲ್ಲಿದೆ ಸಿಂಪಲ್ ಮನೆ ಮದ್ದು
ಒಂದೆಡೆ ವಿದ್ಯಾರ್ಥಿಗಳು, ಹಾಗೂ ವಾಹನ ಸವಾರರು ಆತಂಕದಲ್ಲಿದ್ರೆ. ಮತ್ತೊಂದೆಡೆ ಈ ಬಗ್ಗೆ ಯೂನಿವರ್ಸಿಟಿ ಆಡಳಿತ ಮಂಡಳಿ ಮಾತ್ರ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ವಿಸಿ ಅನೇಕ ದೂರುಗಳು ನಮಗೆ ಬಂದಿವೆ. ಈಗಾಗಲೇ ಅನೇಕ ಕಡೆಗಳಲ್ಲಿ ಒಣಗಿದ ಮರ ಹಾಗೂ ಅದರ ಕೊಂಬೆಗಳನ್ನ ಕತ್ತರಿಸಲು ಹೇಳಿದ್ದೇವೆ. ಸ್ವಲ್ಪ ದಿನದಲ್ಲೇ ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದು ನಿರ್ಲಕ್ಷ್ಯದ ಉತ್ತರ ನೀಡ್ತಾರೆ.
ಹವಾಮಾನ ಇಲಾಖೆ ರಾಜ್ಯದಲ್ಲಿ ಮಾನ್ಸೂನ್ ಪ್ರವೇಶದ ಎಚ್ಚರಿಕೆ ನೀಡಿದೆ ಜೂನ್ 2 ರಂದು ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾಗದಲ್ಲಿ ಮಾನ್ಸೂನ್ ಪ್ರವೇಶವಾಗಲಿದೆ ಜೂನ್ 2 ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಅಂತಾ ಹೇಳಿದೆ. ಸದ್ಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಸಾವಿರಾರು ಮರಗಳಿದ್ದು ಅದರಲ್ಲಿಯೂ ಸಾಕಷ್ಟು ಮರಗಳು ಹಾಗೂ ಕೊಂಬೆಗಳು ಒಣಗಿ ಅಗಲೋ ಇಗಲೋ ಗಾಳಿಗೆ ಬೀಳವಂತಿದ್ದು ಅಪಾಯಕ್ಕೆ ಅವಕಾಶ ಮಾಡಿಕೊಡುವಂತಿವೆ ಇನ್ನಾದ್ರೂ ಬೆಂಗಳೂರು ವಿವಿ ಎಚ್ಚೆತ್ತು ಒಣಗಿದ ಅಪಾಯಕ್ಕೆ ಅವಕಾಶ ನೀಡುವ ಮರಗಳನ್ನ ತಗೆದು ಹಾಕಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ