No Tobacco Day 2024 : ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ದೂರವಿರುವುದು ಹೇಗೆ? ಇಲ್ಲಿದೆ ಸಿಂಪಲ್ ಮನೆ ಮದ್ದು
ಜಾಗತಿಕ ಮಟ್ಟದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.
ಧೂಮಪಾನ ಹಾಗೂ ತಂಬಾಕು ಸೇವನೆಯ ದುರಾಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಗ್ಗೆ ಅರಿವಿದ್ದರೂ ಈ ಚಟಕ್ಕೆ ದಾಸರಾ ಗುತ್ತಿರುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಇದರಿಂದಾಗುವ ಆರೋಗ್ಯ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನವನ್ನು ವಿಶ್ವದಾದಂತ್ಯ ಆಚರಿಸಲಾಗುತ್ತಿದೆ.
ವಿಶ್ವ ತಂಬಾಕು ರಹಿತ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ ಹೇಗೆ
ಆರೋಗ್ಯದ ದೃಷ್ಟಿಯಿಂದಾಗಿ ತಂಬಾಕು ಸೇವನೆಯನ್ನು ತಡೆಯಲು ವಿಶ್ವ ಸಂಸ್ಥೆ ಮೇ 1988 ರಂದು ವಿಶ್ವ ತಂಬಾಕು ರಹಿತ ದಿನವನ್ನು ಜಾರಿಗೆ ತಂದಿತು. ವಿಶ್ವ ಆರೋಗ್ಯ ಸಂಸ್ಥೆ 2008ರಲ್ಲಿ ತಂಬಾಕಿನ ಕುರಿತಾದ ಜಾಹಿರಾತುಗಳನ್ನು ನಿಷೇಧಿಸಿತು. ಅದಲ್ಲದೇ ಆರೊಗ್ಯಕ್ಕೆ ದುಷ್ಪರಿಣಾಮ ಬೀರುವ ತಂಬಾಕು ಮತ್ತು ಸಿಗರೇಟ್ ಸೇವನೆಯ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತದೆ. ಈ ದಿನದಂದು ಜಾಗೃತಿ ಅಭಿಯಾನಗಳು, ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಹಲವು ಆರೋಗ್ಯ ಸಮಸ್ಯೆಗೆ ಬಲು ಉಪಕಾರಿ ಉಮ್ಮತ್ತಿ ಸಸ್ಯ , ಇಲ್ಲಿದೆ ಸರಳ ಮನೆ ಮದ್ದು
ಧೂಮಪಾನ ಚಟದಿಂದ ಮುಕ್ತರಾಗಲು ಇಲ್ಲಿದೆ ಸರಳ ಮನೆ ಮದ್ದು
* ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಸಿಗರೇಟ್ ಹಾಗೂ ತಂಬಾಕು ಸೇವನೆಯನ್ನು ಬಿಡಲು ಸಾಧ್ಯ.
* ಧೂಮಪಾನ ಹಾಗೂ ತಂಬಾಕು ಸೇವಿಸಬೇಕೆನಿಸಿದರೆ ಒಂದು ಚಮಚ ತುರಿದ ಮೂಲಂಗಿಯನ್ನು ಅಗಿಯಬಹುದು. ಇಲ್ಲವಾದರೆ ಚಾಕಲೇಟ್ ತಿನ್ನುವ ಮೂಲಕ ಬೇರೆ ಕಡೆ ಗಮನವನ್ನು ಕೇಂದ್ರಿಕರಿಸಿ.
* ಒಂದು ಲೋಟ ನೀರಿಗೆ ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಧೂಮಪಾನದಂತಹ ಚಟದಿಂದ ಮುಕ್ತರಾಗಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: