AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ಆರೋಗ್ಯ ಸಮಸ್ಯೆಗೆ ಬಲು ಉಪಕಾರಿ ಉಮ್ಮತ್ತಿ ಸಸ್ಯ , ಇಲ್ಲಿದೆ ಸರಳ ಮನೆ ಮದ್ದು

ನಮ್ಮ ಸುತ್ತಲಿನಲ್ಲಿ ಕಾಣಸಿಗುವ ಪ್ರತಿಯೊಂದು ಸಸ್ಯಗಳು ಹಲವಾರು ಔಷಧೀಯ ಗುಣವನ್ನು ಹೊಂದಿದೆ. ಅಂತಹ ಸಸ್ಯಗಳಲ್ಲಿ ಹಳ್ಳಿ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಉಮ್ಮತ್ತಿ ಗಿಡವೂ ಒಂದು. ಇದರ ಎಲೆಗಳು, ಹೂವುಗಳಲ್ಲಿ ಔಷಧೀಯ ಗುಣವೂ ಹೇರಳವಾಗಿದ್ದು, ಮನೆ ಮದ್ದು ತಯಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹಲವು ಆರೋಗ್ಯ ಸಮಸ್ಯೆಗೆ ಬಲು ಉಪಕಾರಿ ಉಮ್ಮತ್ತಿ ಸಸ್ಯ , ಇಲ್ಲಿದೆ ಸರಳ ಮನೆ ಮದ್ದು
ಸಾಯಿನಂದಾ
| Edited By: |

Updated on: May 30, 2024 | 6:01 PM

Share

ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಈ ಉಮ್ಮತ್ತಿ ಗಿಡ ಅಥವಾ ದತ್ತೂರಿ ಗಿಡವನ್ನು ಔಷಧವಾಗಿ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಎಲ್ಲೆಂದರಲ್ಲಿ ಬೆಳೆಯುವ ಈ ಸಸ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಗಿಡವೂ ಔಷಧೀಯ ಗುಣಗಳ ಅಗರವಾಗಿದ್ದರೂ ಇದರ ಕಾಯಿಗಳು ಚೆಂಡಿನಾಕಾರದಲ್ಲಿದ್ದು ಮುಳ್ಳಿನಿಂದ ಕೂಡಿದ್ದು, ಇದು ಬಹಳಷ್ಟು ವಿಷಕಾರಿಯಾಗಿದೆ. ಆದರೆ, ಈ ಸಸ್ಯವನ್ನು ಚರ್ಮದಿಂದ ಹಿಡಿದು ತಲೆನೋವಿನ ಸಮಸ್ಯೆಗೆ ಮನೆ ಮದ್ದಾಗಿ ಬಳಕೆ ಮಾಡಲಾಗುತ್ತದೆ.

  • ಕಾಲು ನೋವು, ಕೀಲು ನೋವಿನಂತಹ ಸಮಸ್ಯೆಗೆ ಉಮ್ಮತ್ತಿ ಎಲೆಗೆ ಎಳ್ಳೆಣ್ಣೆ ಹಚ್ಚಿ ಸ್ವಲ್ಪ ಬಿಸಿ ಮಾಡಿ ನೋವು ಇರುವಲ್ಲಿ ಇಟ್ಟುಕೊಂಡರೆ ನೋವು ಶಮನವಾಗುತ್ತದೆ.
  • ತಲೆನೋವು ಮತ್ತು ಮೈಗ್ರೇನ್ ತಲೆನೋವಿಗೆ ಈ ಎಲೆಗಳನ್ನು ಎಳ್ಳೆಣ್ಣೆಯೊಂದಿಗೆ ಬಿಸಿ ಮಾಡಿ ಹಣೆಯ ಮೇಲೆ ಇಟ್ಟುಕೊಂಡರೆ ನೋವು ನಿವಾರಣೆಯಾಗುತ್ತದೆ.
  • ಉಮ್ಮತ್ತಿ ಎಲೆಗಳ ರಸವನ್ನು ತುರಿಕೆ ಮತ್ತು ಹುಣ್ಣುಗಳ ಮೇಲೆ ಹಚ್ಚಿದರೆ ಬೇಗನೇ ಗುಣವಾಗುತ್ತದೆ.
  • ಮಂಗನ ಬಾವು ಕಾಯಿಲೆಗೆ ಉಮ್ಮತ್ತಿ ಎಲೆಯನ್ನು ಚೆನ್ನಾಗಿ ಅರೆದು ಬಾವು ಅದಲ್ಲಿಗೆ ಹಚ್ಚಿದರೆ ಗುಣಮುಖವಾಗುತ್ತದೆ.
  • ಆಕಳಲ್ಲಿ ಕಾಣುವ ಕೆಚ್ಚಲು ಬಾವು ಸಮಸ್ಯೆಗೆ ಈ ಸಸ್ಯದ ಎಲೆಯನ್ನು ಶುದ್ಧ ಹಸುವಿನ ಹಾಲು ಹಾಗೂ ಜೀರಿಗೆ ಹಾಕಿ ಅರೆದು ಕೆಚ್ಚಲಿಗೆ ಹಚ್ಚುವುದರಿಂದಬಾವು ಕಡಿಮೆಯಾಗುತ್ತದೆ.
  • ತಲೆಯಲ್ಲಿ ಹೇನು, ಹುಣ್ಣು ಇರುವವರು ಈ ಎಲೆಗಳ ರಸವನ್ನು ಆಲದ ಎಣ್ಣೆಗೆ ಬೆರೆಸಿ ಹಚ್ಚಿದರೆ ಈ ಸಮಸ್ಯೆಗಳು ದೂರವಾಗುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ