ಬೆಂಗಳೂರು, ಸೆ.15: ಕಳೆದ ವರ್ಷ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ (Education Department)ಇಲಾಖೆ ಪ್ರತಿ ವಿದ್ಯಾರ್ಥಿಯಿಂದ 50 ರೂಪಾಯಿ ಸಂಗ್ರಹಿಸಿ ವಿರೋಧಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧದ ಬಳಿಕ ಶುಲ್ಕ ಕೈಬಿಟ್ಟು ಸರ್ಕಾರವೇ (Karnataka Government)ಹಣ ನೀಡಿತ್ತು. ಈಗ ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಪರೀಕ್ಷ ಮಂಡಳಿಯೇ ಪ್ರಶ್ನೆಯ ಪತ್ರಿಕ ನೀಡುತ್ತಿದ್ದು ಶುಲ್ಕ ಪಡೆಯಲು ಮುಂದಾಗಿದೆ. ಈ ನಿರ್ಧಾರಕ್ಕೆ ಪೋಷಕರ ಸಮನ್ವಯ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮಂಡಳಿಗೆ ಪತ್ರ ಬರೆದು ಮನವಿ ಮಾಡಿದೆ.
ಪ್ರಥಮ ಹಾಗೂ ದ್ವಿತೀಯ PUC ಮಧ್ಯ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಕ್ಕೆ ಪರೀಕ್ಷಾ ಮಂಡಳಿ ಮುಂದಾಗಿದೆ. 2024 -25ನೇ ಸಾಲಿನಲ್ಲಿ ಪಿಯುಸಿ ಪ್ರಥಮ ಹಾಗೂ ಎರಡನೇ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದಶನದಂತೆ ಜಿಲ್ಲಾ ನಿರ್ದೇಶಕ ಹಾಗೂ ಉಪನಿರ್ದೇಶಕರ ಹಂತದಲ್ಲಿ ಮಧ್ಯ ವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಮುಂದಾಗಿದೆ. ಇದನ್ನ ಪ್ರಿಂಟ್ ಮಾಡಿ ಆಯಾ ವ್ಯಾಪ್ತಿಯ ಕಾಲೇಜುಗಳು ಪರೀಕ್ಷೆಗೆ ಏಕಕಾಲಕ್ಕೆ ಮಕ್ಕಳಿಗೆ ನೀಡಬೇಕಿದೆ. ಇದಕ್ಕೆ ತಗುಲುವ ವೆಚ್ಚವನ್ನ ಶಾಲಾ ಶಿಕ್ಷಣ ಇಲಾಖೆ ಶುಲ್ಕ ರೂಪದಲ್ಲಿ ವಿದ್ಯಾರ್ಥಿಗಳಿಂದಲೇ ವಸೂಲಿಗೆ ಮುಂದಾಗಿದೆ.
ಇದನ್ನೂ ಓದಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ; ಮಾನವ ಸರಪಳಿಯಲ್ಲಿ ನವ ಜೋಡಿ ಭಾಗಿ
ಒಬ್ಬ ವಿದ್ಯಾರ್ಥಿಯಿಂದ 40 ರಿಂದ 50 ಪಡೆಯಲು ಮುಂದಾಗಿದೆ. ಇದಕ್ಕೆ ಯಾವುದೇ ಸೂತ್ತೋಲೆಯನ್ನು ಹೊರಡಿಸದೇ ಕಾಲೇಜು ಹಂತದಲ್ಲಿಯೇ ಶುಲ್ಕ ಸಂಗ್ರಹ ಮಾಡಲು ಇಲಾಖೆ ಮುಂದಾಗಿದೆ. ಈ ಶುಲ್ಕ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯಾಗಿದೆ. ಕೆಲ ಜಿಲ್ಲೆಗಳಲ್ಲಿ ಪರೀಕ್ಷೆ ನೆಪದಲ್ಲಿ ಸುಲಿಗೆಯಾಗ್ತೀರೊ ಬಗ್ಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು ಮಂಡಳಿಗೆ ಪತ್ರ ಬರೆದಿದ್ದಾರೆ. ಏಕರೂಪದ ಶುಲ್ಕ ನಿಗದಿ ಮಾಡಿ ಅಥವಾ ಉಚಿತವಾಗಿ ಸರ್ಕಾರದ ಹಂತದಲ್ಲಿ ಪ್ರಶ್ನೆ ಪತ್ರಿಕೆ ನೀಡಿ ಅಂತಾ ಒತ್ತಾಯ ಮಾಡ್ತೀದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯ ಬಳಿಕ ಈಗ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗಳಿಗೂ ಶುಲ್ಕ ಸಂಗ್ರಹಕ್ಕೆ ಪೋಷಕರ ಒಲಯದಲ್ಲಿ ವಿರೋಧ ಕೇಳಿ ಬರ್ತಿದೆ. ಆದ್ರೆ ಶಿಕ್ಷಣ ಸಚಿವರು ಇದು ತುಂಬಾ ಸಣ್ಣ ಹಣ ಅಧಿಕಾರಿಗಳ ಹಂತದಲ್ಲಿಯೇ ನಿರ್ಧಾರ ತೀರ್ಮಾನಕ್ಕೆ ಬಿಟ್ಟಿದ್ದೀನಿ ಎಂದು ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಒಟ್ನಲ್ಲಿ 24 ರಿಂದ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ಶುರುವಾಗಿತಿದ್ದು ಸರ್ಕಾರ ಮಕ್ಕಳಿಗೆ ಪ್ರಶ್ನೆ ಪತ್ರಿಕೆಗೆ ಹಣ ಪಡಿಯುವಷ್ಟು ಬಡವಾಗಿದ್ಯಾ ಅಂತಾ ಪೋಷಕರು ವಾದ ಶುರು ಮಾಡಿದ್ದು ಸರ್ಕಾರ ಯಾವ ಕ್ರಮಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ