ಬೆಂಗಳೂರಿನಲ್ಲಿ ಸ್ಕೈ ಲೈನ್​​ ನಿರ್ಮಿಸಲು ಉತ್ಸುಕನಾಗಿದ್ದೇನೆ: ನ್ಯೂಯಾರ್ಕ್​​ನ “ದ ಎಡ್ಜ್” ಸ್ಕೈ ಡೆಕ್ ವೀಕ್ಷಿಸಿದ ಡಿಕೆ ಶಿವಕುಮಾರ್

ಅಮೆರಿಕ ಪ್ರವಾಸದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್​ ಈ ವೇಳೆ ತಮ್ಮ ಪತ್ನಿ ಉಷಾ ಅವರ ಜತೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್ ನಲ್ಲಿರುವ "ದ ಎಡ್ಜ್" ಸ್ಕೈ ಡೆಕ್​ಗೆ ಭೇಟಿ ಮಾಡಿ ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲಿಸಿದ್ದಾರೆ.

| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2024 | 6:22 PM

ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡುವ ಕನಸು ಕಂಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್ ನಲ್ಲಿರುವ "ದ ಎಡ್ಜ್" ಸ್ಕೈ ಡೆಕ್​ಗೆ ಭೇಟಿ ಮಾಡಿ ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲಿಸಿದ್ದಾರೆ.  

1 / 5
ಪತ್ನಿ ಉಷಾ ಅವರ ಜತೆ ಸ್ಕೈ ಡೆಕ್ ವೀಕ್ಷಿಸಿದ ಡಿಕೆ ಶಿವಕುಮಾರ್ ಅವರು ಅದರ ಮನೋಹರ ನೋಟವನ್ನು ಕಣ್ತುಂಬಿಕೊಂಡಿದ್ದಾರೆ. ಹಡ್ಸನ್ ಯಾರ್ಡ್ಸ್ 30 ವೆಸ್ಟರ್ನ್ ಹೆಮಿಸ್ಫರ್​ನಲ್ಲಿರುವ ಕಟ್ಟಡದ 100 ನೇ ಮಹಡಿಯಲ್ಲಿ 7500 ಚದರಡಿಯ ಈ ಡೆಕ್ ಅನ್ನು ವೀಕ್ಷಣೆ ಮಾಡಿದ್ದಾರೆ. ಈ ಡೆಕ್ ಫ್ಲೋರ್​ನಿಂದ ಹಿಡಿದು ಸೀಲಿಂಗ್​ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದ್ದು, ಇದು ನ್ಯೂಯಾರ್ಕ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ.

2 / 5
ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಡಿಕೆ ಶಿವಕುಮಾರ್ ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಡಾ. ಬಾಬು ಕೀಲಾರ ಅವರೊಂದಿಗೆ ಚರ್ಚಿಸಿದರು. ಈ ಪ್ರವಾಸದಲ್ಲಿ ಅವರು ಕೀಲಾರ ಅವರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಣೆ ಮಾಡಿದ್ದಾರೆ.

3 / 5
ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಹೆಚ್ಓಕೆಯ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಜತೆ ಡಿಸಿಎಂ ಚರ್ಚೆ ಮಾಡಿದ್ದಾರೆ. 

4 / 5
ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ "ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಆಲೋಚನೆಗಳನ್ನು ಒಟ್ಟುಗೂಡಿಸಿದರೆ ಬೆಂಗಳೂರಿನ ಸ್ಕೈ ಲೈನ್​ಗೆ ಹೊಸ ವ್ಯಾಖ್ಯಾನ ನೀಡುವುದರ ಜೊತೆಗೆ ನಗರಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

5 / 5
Follow us