ಈ ವಾರಾಂತ್ಯದಲ್ಲಿ ಬೆಂಗಳೂರು ನಗರದಲ್ಲಿ ಏನೇನು ವಿಶೇಷ ಕಾರ್ಯಕ್ರಮಗಳಿವೆ? ಇಲ್ಲಿದೆ ವಿವರ
ನೀವು ಭಕ್ತಿ ಭಾವದಲ್ಲಿ ಮಿಂದೇಳುವವರಾಗಿದ್ದರೆ, ದಹೀ ಹಂಡಿ (ಮೊಸರು ಕುಡಿಕೆ)ಯ ಸಂಭ್ರಮವನ್ನು ಆಸ್ವಾದಿಸುವುದಾಗಿದ್ದರೆ, ಸಂಗೀತ ನೃತ್ಯ ನೋಡುವ ಆಸಕ್ತಿ ಇದ್ದರೆ ಶುಕ್ರವಾರ...
ಹಬ್ಬಗಳ ಆಚರಣೆಗೆ ಶುರುವಾಗುತ್ತಿದ್ದಂತೆ ಬೆಂಗಳೂರು (Bangalore) ನಗರದಲ್ಲಿ ವಾರಾಂತ್ಯದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯತ್ತಿವೆ. ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳು ಒಂದೆಡೆಯಾದರೆ, ಸಂಗೀತ, ನೃತ್ಯ, ಫೋಟೊಗ್ರಫಿ ಪ್ರದರ್ಶನಗಳು ನಡೆಯುತ್ತಿವೆ. ಈ ವಾರಾಂತ್ಯದಲ್ಲಿ ನಗರದಲ್ಲಿ ಏನೇನು ನಡೆಯುತ್ತಿದೆ? ಇಲ್ಲಿದೆ ವಿವರಗಳ ಪಟ್ಟಿ ಇಸ್ಕಾನ್ ನಲ್ಲಿ ಜನ್ಮಾಷ್ಟಮಿ ಆಚರಣೆ: ನೀವು ಭಕ್ತಿ ಭಾವದಲ್ಲಿ ಮಿಂದೇಳುವವರಾಗಿದ್ದರೆ, ದಹೀ ಹಂಡಿ (ಮೊಸರು ಕುಡಿಕೆ)ಯ ಸಂಭ್ರಮವನ್ನು ಆಸ್ವಾದಿಸುವುದಾಗಿದ್ದರೆ, ಸಂಗೀತ ನೃತ್ಯ ನೋಡುವ ಆಸಕ್ತಿ ಇದ್ದರೆ ಶುಕ್ರವಾರ ಕೋರಮಂಗಲದ ಇಸ್ಕಾನ್ ಸೆಂಟರ್ ನಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಳ್ಳಿ. ಮಕ್ಕಳ ಛದ್ಮವೇಷ ಸ್ಪರ್ಧೆಯಲ್ಲಿಯೂ ಭಾಗವಹಿಸಬಹುದು.
ಫೇರ್ವಲ್ ಬೆಂಗಳೂರು: ಗಾಯಕ, ಸಂಗೀತ ನಿರ್ದೇಶಕರಾದ ಮ್ಯಾರಿ ಹೇಗನ್ ಅವರು ಬೆಂಗಳೂರು ನಗರಕ್ಕೆ ವಿದಾಯ ಹೇಳುವ ಕಾರ್ಯಕ್ರಮ ಇದಾಗಿದೆ. ಬೆಂಗಳೂರನ್ನೇ ಸಂಗೀತದ ಮನೆಯಾಗಿಸಿದ ಮ್ಯಾರಿ ಆಗಸ್ಟ್ ತಿಂಗಳಾಂತ್ಯದಲ್ಲಿ ಯುರೋಪ್ ಹೋಗುವ ಮುನ್ನ ನೀಡುವ ಕೊನೆಯ ಪ್ರದರ್ಶನ ಇದಾಗಿದೆ.
ದಿ ಬೆಂಗಳೂರು ಆರ್ಟ್ಸ್ ಆಂಡ್ ಕ್ರಾಫ್ಟ್ಸ್ ಮೇಳ: ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುವ ಈ ಮೇಳ ಶುಕ್ರವಾರ ಆರಂಭವಾಗಿ ಆಗಸ್ಟ್ 28ರವರೆಗೆ ನಡೆಯಲಿದೆ. ಎಲ್ಲ ರೀತಿಯ ಶಾಪಿಂಗ್ ಮಾಡಲು ಬಯಸುವವರು ಇಲ್ಲಿ ಬರಬಹುದು. ಕಲೆ, ಕರಕುಶಲ ವಸ್ತುಗಳು, ಬಟ್ಟೆ, ಆಭರಣ,ಗೃಹಾಲಂಕಾರದ ವಸ್ತುಗಳು ಹೀಗೆ ಹಲವು ವಿಧದ ವಸ್ತುಗಳನ್ನು ಮಾರಾಟ ಮಾಡುವ 100ಕ್ಕಿಂತವೂ ಹೆಚ್ಚು ಸ್ಟಾಲ್ ಗಳು ಇಲ್ಲಿರುತ್ತವೆ.
ಆಟೋ ಆಂಡ್ ಆಟೋಮೋಟಿವ್ ಎಕ್ಸ್ ಪೋ 2022: ಆಟೋಮೊಬೈಲ್‌ಗಳು, ಬಿಡಿಭಾಗಗಳು, ಆಟೋ ಮೆಷಿನ್‌ಗಳು ಮತ್ತು ಹಲವಾರು ಇತರ ಸಲಕರಣೆಗಳ ಈ ಪ್ರೀಮಿಯರ್ ಶೋ ವಾರಾಂತ್ಯದ ಉದ್ದಕ್ಕೂ ನಡೆಯುತ್ತದೆ, ಶುಕ್ರವಾರ ಬೆಳಿಗ್ಗೆ 10:00 ರಿಂದ ಆರಂಭವಾಗಿ ಭಾನುವಾರದ ಸಂಜೆ 7 ಗಂಟೆವರೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಕರ್ನಾಟಕ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ ನಲ್ಲಿ ಈ ಎಕ್ಸ್ ಪೋ ನಡೆಯಲಿದೆ
ಛಾಯಾಗ್ರಹಣ ಕಾರ್ಯಾಗಾರ: ನೀವು ಹೊಸ ಕೌಶಲ್ಯವನ್ನು ಪಡೆಯಲು ಬಯಸುವುದಾದರೆ ಈ ಭಾನುವಾರ ನಿಮ್ಮ ಅವಕಾಶವನ್ನು ಪಡೆದುಕೊಳ್ಳಿ ಮತ್ತು URU Brewpark ಗೆ ಭೇಟಿ ನೀಡಿ. ಕಾರ್ಯಾಗಾರದಲ್ಲಿ, ಲೈಟಿಂಗ್ ಅನ್ನು ಹೇಗೆ ಬಳಸುವುದು, ಭಾವಚಿತ್ರಗಳನ್ನು ತೆಗೆದುಕೊಳ್ಳುವುದು, ಕ್ಯಾಂಡಿಡ್‌ಗಳು ಮತ್ತು ಹೆಚ್ಚಿನದನ್ನು ನಿಮಗೆ ಕಲಿಸಲಾಗುತ್ತದೆ. ಪ್ರವೇಶ ಶುಲ್ಕ ಒಬ್ಬರಿಗೆ ₹599
Published On - 1:03 pm, Fri, 19 August 22