Teachers Recruitment: ಹೈದರಾಬಾದ್-ಕರ್ನಾಟಕಕ್ಕೆ 5000 ಶಾಲಾ ಶಿಕ್ಷಕರ ನೇಮಕ, ವಿವರ ನೀಡಿದ ಶಿಕ್ಷಣ ಸಚಿವ ನಾಗೇಶ್
ನಿರುದ್ಯೋಗಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂಪರ್ ಗಿಫ್ಟ್ ಇದಾಗಿದೆ. ಶಿಕ್ಷಣ ಗುಣಮಟ್ಟ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿದೆ. ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ನೇಮಕಕ್ಕೆ ಇಲಾಖೆಯು ಮುಂದಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.
ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರವಾಗಿ 15,000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನಿರುದ್ಯೋಗಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂಪರ್ ಗಿಫ್ಟ್ ಇದಾಗಿದೆ. ಶಿಕ್ಷಣ ಗುಣಮಟ್ಟ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿದೆ. ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ನೇಮಕಕ್ಕೆ ಇಲಾಖೆಯು ಮುಂದಾಗಿದೆ. ಅದರ ಅಂಗವಾಗಿ ಹೈದರಾಬಾದ್-ಕರ್ನಾಟಕಕ್ಕೆ ಐದು ಸಾವಿರ ಹುದ್ದೆಗಳು ಮೀಸಲು ಇಡಲಾಗಿದೆ. ಉಳಿದ ಕಡೆಗಳಿಗೆ 10 ಸಾವಿರ ಶಿಕ್ಷಕರ ನೇಮಕವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ (School Teachers Recruitment).
ಎಪ್ರಿಲ್ 22 ಅರ್ಜಿ ಹಾಕಲು ಕೊನೆಯ ದಿನ: ಇನ್ನು, ಗಣಿತ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. 21 ಸಾವಿರ ಗಣಿತ ಶಿಕ್ಷಕರ ಹುದ್ದೆಗಳ ಕೊರತೆ ಬಿದ್ದಿದೆ. ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿಗೆ ಅವಕಾಶವಿದೆ. ಮಾರ್ಚ್ 23 ರಿಂದ ಅರ್ಜಿ ಹಾಕಬಹುದಾಗಿದೆ. ಎಪ್ರಿಲ್ 22 ಅರ್ಜಿ ಹಾಕಲು ಕೊನೆಯ ಅವಕಾಶ. ಮೇ 21 ಮತ್ತು 22 ರಂದು ಶಿಕ್ಷಕರ ಹುದ್ಧೆಗೆ ಎಕ್ಸಾಂ ನಿಗದಿಯಾಗಿದೆ.
ಇನ್ನು, 1 ರಿಂದ 8ನೇ ತರಗತಿ ಶಾಲೆಗಳಲ್ಲಿ ಸುಮಾರು 36 ಸಾವಿರ ಶಿಕ್ಷಕರ ಕೊರತೆ ಇದೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಉಳಿದ ಕಡೆ 10 ಸಾವಿರ ಶಿಕ್ಷಕರ ನೇಮಕವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಪರೀಕ್ಷೆ ವಿವರ ಹೀಗಿದೆ: ಒಟ್ಟು 400 ಮಾರ್ಕ್ಸ್ ಗೆ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆ ಜನರಲ್ ಪೇಪರ್ ಆಗಿದ್ದು 150 ಅಂಕ ನಿಗದಿಯಾಗಿದೆ. 2ನೇ ಪತ್ರಿಕೆಗಾಗಿ 150 ಮಾರ್ಕ್ ಇರುತ್ತೆ. ವಿಷಯವಾರು ಪರೀಕ್ಷೆ ಇದಾಗಿರುತ್ತದೆ. ಪಾಸ್ ಆಗಲು 45 ಮಾರ್ಕ್ ಕಡ್ಡಾಯವಾಗಿರುತ್ತದೆ. 3 ನೇ ಪತ್ರಿಕೆ ಭಾಷಾವಾರು ಪರೀಕ್ಷೆಯಾಗಿದ್ದು, 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪಾಸ್ ಆಗಲು 50 ಮಾರ್ಕ್ಸ್ ಕಡ್ಡಾಯವಾಗಿದೆ.
ಎಂಜಿನಿಯರಿಂಗ್ ಪದವೀಧರರೂ ಗಣಿತ ಶಿಕ್ಷಕ ಪರೀಕ್ಷೆಗೆ ಅರ್ಹರು ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಕೂಡ ಈ ಬಾರಿ ಗಣಿತ ಶಿಕ್ಷಕ ನೇಮಕಾತಿ ಪರೀಕ್ಷೆ ಬರೆಯಬಹುದು. ಈ ಬಾರಿ ವಯೋಮಿತಿ 2 ವರ್ಷ ಸಡಲಿಕೆ ಮಾಡಲಾಗಿದೆ. 45 ವರ್ಷದಿಂದ 47 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದು SC, ST ಮತ್ತು ಅಂಗವಿಕಲರಿಗೆ ಅನ್ವಯ. ಮಂಗಳಮುಖಿಯರಿಗೆ ವಿಶೇಷವಾಗಿ ಶೇ.1ರಷ್ಟು ಮೀಸಲು ಇಡಲಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಮಾಹಿತಿ ನೀಡಿದ್ದಾರೆ.
Published On - 2:17 pm, Fri, 18 March 22