ರಾಷ್ಟ್ರ ಪ್ರಶಸ್ತಿ ಪದಕವನ್ನು ಕಳ್ಳತನ ಮಾಡಿದ ಖದೀಮರು; ಕರಕುಶಲ ಕಲೆಗೆ ನೀಡುವ ಅತ್ಯುನ್ನತ ‘ಶಿಲ್ಪಗುರು’ ಕಳವು
22 ಗ್ರಾಂ ತೂಕದ ಚಿನ್ನದ ಪದಕದ ಜೊತೆಗೆ ಚಿನ್ನಾಭರಣ, 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ. ಕಳ್ಳತನವಾಗಿರುವುದು ಬೆಳಕಿಗೆ ಬಂದ ನಂತರ, ಕಲೆಯಲ್ಲಿನ ಸಾಧನೆಗೆ ನೀಡಿದ್ದ ಪದಕ ಕಳೆದುಕೊಂಡು ಕಂಗಾಲಾಗಿದ್ದಾರೆ.
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪದಕವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಸುಪ್ರಜಾನಗರದಲ್ಲಿ ನಡೆದಿದೆ. 22 ಗ್ರಾಂ ತೂಕದ ಚಿನ್ನದ(Gold) ಪದಕ ಇದಾಗಿದ್ದು, ಕರಕುಶಲ ಕಲೆಗೆ ನೀಡುವ ಅತ್ಯುನ್ನತ ‘ಶಿಲ್ಪಗುರು'(shilpa guru award) ಪ್ರಶಸ್ತಿ ಪದಕ ಸೇರಿ ಇನ್ನಿತರ ಪ್ರಶಸ್ತಿ ಕಳ್ಳತನ(Theft) ಮಾಡಲಾಗಿದೆ. ಕಳೆದ 35 ವರ್ಷಗಳಿಂದ ಕರಕುಶಲ ಕ್ಷೇತ್ರದಲ್ಲಿನ ಸಾಧನೆಗಾಗಿ ಶಿಲ್ಪಗುರು ಪ್ರಶಸ್ತಿ ಪದಕವನ್ನು ಹೇಮಾ ಚಂದ್ರಶೇಖರಯ್ಯ ಅವರಿಗೆ ನೀಡಲಾಗಿತ್ತು. ಆದರೆ ಪ್ರಶಸ್ತಿಯಾಗಿ ಪಡೆದುಕೊಂಡಿದ್ದ ಪದಕಗಳನ್ನ ಕಳ್ಳರು ದೋಚಿದ್ದಾರೆ.
ಹೇಮಾ ಚಂದ್ರಶೇಖರಯ್ಯಾ ಅವರ ಸಾಧನೆ ಗಮನಿಸಿ 2002ರಲ್ಲಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದ್ದರು. 2014 ರಲ್ಲಿ ಶಿಲ್ಪಗುರು ಪ್ರಶಸ್ತಿ ಹೇಮಾ ಚಂದ್ರಶೇಖರಯ್ಯಾ ಪಡೆದಿದ್ದರು. ಇದೇ ತಿಂಗಳು 5ರಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ತೆರಳಿದ್ದ ದಂಪತಿ ವಾಪಾಸ್ ಮನೆಗೆ ಮಾರ್ಚ್ 15 ರಂದು ಮರಳಿದ್ದಾರೆ. ಆದರೆ ಇವರು ಬರುವುದರೊಳಗೆ ಕಳ್ಳರು ಮನೆಯಲ್ಲಿದ್ದ ಚಿನ್ನದ ಪದಕಗಳನ್ನು ದೋಚಿ ಪರಾರಿಯಾಗಿದ್ದಾರೆ.
22 ಗ್ರಾಂ ತೂಕದ ಚಿನ್ನದ ಪದಕದ ಜೊತೆಗೆ ಚಿನ್ನಾಭರಣ, 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ. ಕಳ್ಳತನವಾಗಿರುವುದು ಬೆಳಕಿಗೆ ಬಂದ ನಂತರ, ಕಲೆಯಲ್ಲಿನ ಸಾಧನೆಗೆ ನೀಡಿದ್ದ ಪದಕ ಕಳೆದುಕೊಂಡು ಕಂಗಾಲಾಗಿದ್ದಾರೆ. ಸದ್ಯ ಹೇಮಾ ಚಂದ್ರಶೇಖರಯ್ಯಾ ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಕಲಬುರಗಿ: ವ್ಯಕ್ತಿಯನ್ನು ಕೊಂದು ಶವ ಸುಡಲಾಗಿದೆ
ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿ ಶವ ಸುಟ್ಟಿರುವ ಘಟನೆ ಕಲಬುರಗಿ ತಾಲೂಕಿನ ತಾಜಸುಲ್ತಾನಪುರದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಶವ ಸುಟ್ಟು ಹಾಕಲಾಗಿದೆ. ಜೋಳದ ಕಣಿಕೆಯಲ್ಲಿ ಶವ ಸುಡಲಾಗಿದೆ. ತಾಲಸುಲ್ತಾನಪುರ ಗ್ರಾಮದ ನಿವಾಸಿ ಮನೋಹರ್ ರುದ್ರಕರ್ (36) ಕೊಲೆಯಾದ ವ್ಯಕ್ತಿ. ಕಳೆದ ಕೆಲ ವರ್ಷಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿದ್ದ ಮನೋಹರ್, ಎರಡು ದಿನದ ಹಿಂದಷ್ಟೇ ತನ್ನೂರಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಮನೆಯಿಂದ ಹೊರಹೋಗಿದ್ದ ಮನೋಹರ್ ಕೊಲೆ ಮಾಡಲಾಗಿದೆ. ಮನೋಹರನನ್ನು ಕೊಲೆ ಮಾಡಿ, ನಂತರ ಶವ ಸುಟ್ಟು ಹಾಕಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಾಸನ: ಸಕಲೇಶಪುರದಲ್ಲಿ ಹಾಡುಹಗಲೇ ಯುವಕನಿಗೆ ಚೂರಿ ಇರಿದು ಹತ್ಯೆ
ಸಕಲೇಶಪುರದಲ್ಲಿ ನಿನ್ನೆ (ಮಾರ್ಚ್ 17) ಹಾಡುಹಗಲೇ ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಯುವಕನನ್ನ ಅಡ್ಡಗಟ್ಟಿ ಅಟ್ಟಾಡಿಸಿ ಇರಿದು ಕೊಲ್ಲುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಸಕಲೇಶಪುರ ಪಟ್ಟಣದ ಅಜಾದ್ ರಸ್ತೆಯಲ್ಲಿ ನಿನ್ನೆ ಮದ್ಯಾಹ್ನ ಘಟನೆ ನಡೆದಿತ್ತು. ಸಕಲೇಶಪುರ ಕುಶಾಲನಗರ ಬಡಾವಣೆಯ ಅಪ್ಸರ್ (27) ಎಂಬಾತನನ್ನು ಇರಿದು ಹತ್ಯೆ ಮಾಡಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಅಕ್ಕ ಪಕ್ಕದವರ ಮನೆಯವರ ನಡುವೆ ಗಲಾಟೆ ಉಂಟಾಗಿತ್ತು. ಇದೇ ವಿಚಾರವಾಗಿ ಐಸಾನ್ ಖುರೇಷಿ ಕತ್ತು ಇತರೆ ಮೂವರಿಂದ ಯುವಕನ ಬರ್ಬರ ಕೊಲೆ ನಡೆದಿದೆ. ಕೊಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಕ್ಯಾಮರಾ ದೃಶ್ಯ ಆದರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು: ಮನೆ ಮುಂದೆ ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಥಾಮಸ್ ಕೊಲೆ; 6 ಆರೋಪಿಗಳ ಬಂಧನ
ಮನೆ ಮುಂದೆ ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಥಾಮಸ್ ಎಂಬವರನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಆರೋಪಿಗಳಾದ ಸೂರ್ಯ, ಚಂದನ್, ಪ್ರಮೋದ್, ಯಶವಂತ್, ಚೇತನ್ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Crime News: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೆನಡಾದ ಹಿಂದೂ ದೇವಾಲಯಗಳಲ್ಲಿ ಕಳ್ಳತನ; ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಎಲ್ಲಿಯವರು ಗೊತ್ತಾ?
Published On - 3:08 pm, Fri, 18 March 22