ಕೆನಡಾದ ಹಿಂದೂ ದೇವಾಲಯಗಳಲ್ಲಿ ಕಳ್ಳತನ; ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಎಲ್ಲಿಯವರು ಗೊತ್ತಾ?

ಕೆನಡಾದ ಹಿಂದೂ ದೇವಾಲಯಗಳಲ್ಲಿ ಕಳ್ಳತನ; ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಎಲ್ಲಿಯವರು ಗೊತ್ತಾ?
ಮಿಸಿಸೌಗಾದಲ್ಲಿರುವ

Canada: ಕೆನಡಾದ ಹಿಂದೂ ದೇವಾಲಯಗಳಲ್ಲಿ ಕಳ್ಳತನ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕನೆಯವನ ಪತ್ತೆಗಾಗಿ ಶೋಧ ಮುಂದುವರೆದಿದೆ.

TV9kannada Web Team

| Edited By: shivaprasad.hs

Mar 06, 2022 | 11:27 AM

ಕೆನಡಾದಲ್ಲಿ (Canada) ದೇವಾಲಯಗಳಲ್ಲಿ ಮುಖ್ಯವಾಗಿ ಹಿಂದೂ ದೇವಸ್ಥಾನಗಳನ್ನು (Hindu Temples) ಗುರಿಯಾಗಿಸಿ ಕಳ್ಳತನ ಹಾಗೂ ದರೋಡೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಕೆನಡಾದ ಕಾನೂನು ಜಾರಿ ಮಂಡಳಿಯು ಮೂರು ವ್ಯಕ್ತಿಗಳನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೆಯ ಆರೋಪಿಯನ್ನು ಹುಡುಕುತ್ತಿದೆ. ವಿಧ್ವಂಸಕ ಘಟನೆಗಳನ್ನೂ ಒಳಗೊಂಡಂತೆ ಈ ಮಾದರಿಯ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ಸಂಭವಿಸಿದ್ದವು. ಶುಕ್ರವಾರ ಪೀಲ್​ನ ಪ್ರಾದೇಶಿಕ ಪೊಲೀಸರು ಕಸ್ಟಡಿಯಲ್ಲಿರುವ ಮೂವರು ಆರೋಪಿಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ‘ನವೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ, ಆರೋಪಿಗಳು ದೇವಾಲಯ ಪ್ರವೇಶಿಸಿದ್ದಾರೆ. ಮತ್ತು ಆವರಣದೊಳಗಿನ ಕಾಣಿಕೆ ಪೆಟ್ಟಿಗೆಗಳಿಂದ ಹಣವನ್ನು ತೆಗೆದು ಪಲಾಯನ ಮಾಡಿದ್ದಾರೆ’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಚ್ಚರಿಯೆಂದರೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂರೂ ಜನರು ಭಾರತೀಯ ಮೂಲದವರೇ ಆಗಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಸ್ತುತ ಬಂಧಿಸಲಾಗಿರುವ ಮೂವರೂ ಕೂಡ ಭಾರತ ಮೂಲದವರಾಗಿದ್ದಾರೆ. ಬ್ರಾಂಪ್ಟನ್​ನಲ್ಲಿ ವಾಸವಾಗಿರುವ ಭಾರತ- ಕೆನಡಾ ನಿವಾಸಿಗಳಾಗಿರುವ ಜಗದೀಶ್ ಪಂಧೇರ್ (39), ಗುರ್ಶರ್ನ್‌ಜೀತ್ ಧಿಂಡ್ಸಾ (31) ಮತ್ತು ಪರ್ಮಿಂದರ್ ಗಿಲ್ (42) ಆರೋಪಿಗಳಾಗಿದ್ದಾರೆ. ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಬಾಗಿಲು ಮುರಿದು, ಕಳ್ಳತನ ಎಸಗಿದ ದೋಷಾರೋಪಣೆ ಮಾಡಲಾಗಿದೆ.

ಪೀಲ್ ಪೋಲೀಸ್ ವಕ್ತಾರರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಗಳು 13 ಕಡೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ಅವುಗಳಲ್ಲಿ ಒಂಬತ್ತು ಹಿಂದೂ ದೇವಾಲಯಗಳು, ತಲಾ ಎರಡು ಜೈನ ದೇವಾಲಯಗಳು ಮತ್ತು ಸಿಖ್ ಗುರುದ್ವಾರಗಳಿಗೆ ಸಂಬಂಧಿಸಿದೆ. ತನಿಖಾಧಿಕಾರಿಗಳು ನಾಲ್ಕನೇ ಶಂಕಿತ ಆರೋಪಿಗಾಗಿ ಹುಡುಕುತ್ತಿದ್ದಾರೆ. ‘ಈ ಅಪರಾಧಗಳು ದ್ವೇಷದಿಂದ ಪ್ರೇರೇಪಿಸಲ್ಪಟ್ಟಿವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ’ ಎಂದು ಹೇಳಿಕೆ ತಿಳಿಸಿದೆ. ಅದಾಗ್ಯೂ ಎಲ್ಲಾ ಸಂಭಾವ್ಯತೆ ಮುಂದಿಟ್ಟುಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಕಳ್ಳತನದ ಆರೋಪಿಗಳ ಬಂಧನದಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯ ನಿಟ್ಟುಸಿರು ಬಿಟ್ಟಿದೆ. ಕಳೆದ ಕೆಲವು ಸಮಯದಿಂದ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿ ಕಳ್ಳತನ ನಡೆಸಲಾಗಿತ್ತು. ಇದಲ್ಲದೇ ಇತರ ಕೆಲವು ಪ್ರದೇಶಗಳಲ್ಲಿಯೂ ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ ಹ್ಯಾಮಿಲ್ಟನ್ ಮತ್ತು ನಯಾಗರಾ ಫಾಲ್ಸ್ ಪ್ರದೇಶವೂ ಸೇರಿತ್ತು.

ವಕ್ತಾರರ ಪ್ರಕಾರ, ಪೊಲೀಸರು ದೇವಾಲಯದಲ್ಲಿ ಭದ್ರತೆಯನ್ನು ಹೆಚ್ಚಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಕೆಲಸಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:

ಭಾರತ- ಬಾಂಗ್ಲಾದ ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಗೆ ಹೊಸ ತಲೆಬಿಸಿ; ಹೆಚ್ಚಾದ ಮಾನವ ಕೂದಲು ಕಳ್ಳಸಾಗಣೆ!

ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿ ಅರೆಸ್ಟ್!

Follow us on

Related Stories

Most Read Stories

Click on your DTH Provider to Add TV9 Kannada