AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧದಿಂದ ಬಸವಳಿದ ವನ್ಯಜೀವಿಗಳು; ಉಕ್ರೇನ್​ ಬಿಟ್ಟು ಎರಡು ದಿನ ಪ್ರಯಾಣಿಸಿ ಪೋಲ್ಯಾಂಡ್ ಸೇರಿಕೊಂಡ ಸಿಂಹ, ಹುಲಿಗಳು​

ಕೀವ್​​ನಿಂದ ಪೋಲ್ಯಾಂಡ್​ಗೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ತುಂಬ ದೂರದ ದಾರಿ. ಮೊದಲೊಮ್ಮೆ ಪ್ರಾಣಿಗಳನ್ನು ಹೊತ್ತ ಟ್ರಕ್​​​ನ್ನು​ ಅರ್ಧ ದಾರಿ ಸಾಗಿದ್ದ ಮೇಲೆ ರಷ್ಯಾದ ಯುದ್ಧ ಟ್ಯಾಂಕ್​ಗಳು ತಡೆದಿದ್ದವು.

ಯುದ್ಧದಿಂದ ಬಸವಳಿದ ವನ್ಯಜೀವಿಗಳು; ಉಕ್ರೇನ್​ ಬಿಟ್ಟು ಎರಡು ದಿನ ಪ್ರಯಾಣಿಸಿ ಪೋಲ್ಯಾಂಡ್ ಸೇರಿಕೊಂಡ ಸಿಂಹ, ಹುಲಿಗಳು​
ಉಕ್ರೇನ್​ ಬಿಟ್ಟು ಪೋಲ್ಯಾಂಡ್ ಸೇರಿಕೊಂಡ ಹುಲಿ, ಸಿಂಹಗಳು
TV9 Web
| Edited By: |

Updated on:Mar 06, 2022 | 2:14 PM

Share

ಯುದ್ಧಭೂಮಿಯಾಗಿರುವ ಉಕ್ರೇನ್​​ನಿಂದ (Ukraine) ಬರೀ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿಗಳನ್ನೂ ಸ್ಥಳಾಂತರ ಮಾಡಲಾಗುತ್ತಿದೆ. ಉಕ್ರೇನ್​ ರಾಜಧಾನಿ, ರಷ್ಯಾದ ತೀವ್ರ ದಾಳಿಗೆ ತುತ್ತಾಗಿರುವ ಕೀವ್​​ನ (Kyiv) ಪೂರ್ವದಲ್ಲಿರುವ  ಒಂದು ಅಭಯಾರಣ್ಯದಿಂದ ಗುರುವಾರ ಆರು ಸಿಂಹಗಳು, ಆರು ಹುಲಿಗಳು, ಒಂದು ಆಫ್ರಿಕನ್ ಕಾಡು ನಾಯಿ, ಎರಡು ಕ್ಯಾರಕಲ್ಸ್​ (ಒಂದು ಜಾತಿಯ ಕಾಡು ಬೆಕ್ಕು)ಗಳನ್ನು  ಒಂದು ಟ್ರಕ್​​ನಲ್ಲಿ ಕರೆದುಕೊಂಡು ಹೋಗಿ ಪೋಲ್ಯಾಂಡ್​ಗೆ ಬಿಡಲಾಗಿದೆ.  ಹೀಗೆ ಕೀವ್​ನಿಂದ ಪೋಲ್ಯಾಂಡ್​ಗೆ ಹೋಗಲು ಟ್ರಕ್​​ಗೆ ಎರಡು ದಿನ ಬೇಕಾಯಿತು ಎಂದೂ ಪೋಲಿಶ್​ ಪ್ರಾಣಿ ಸಂಗ್ರಹಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಷ್ಯಾ ಕೀವ್​​ನಲ್ಲಿ ತೀವ್ರವಾಗಿ ದಾಳಿ ನಡೆಸುತ್ತಿದೆ. ಹೀಗಾಗಿ ಕೀವ್​​ನ ಈ ಅಭಯಾರಣ್ಯದ ಮಾಲೀಕರಿಗೆ ಅಲ್ಲಿರುವ ಪ್ರಾಣಿಗಳ ಬಗ್ಗೆ ತೀವ್ರ ಆತಂಕ ಶುರುವಾಗಿತ್ತು. ಅವುಗಳ ರಕ್ಷಣೆಗಾಗಿ ಸಹಾಯ ಮಾಡುವಂತೆ ಮಾಲೀಕರು ಪೋಲ್ಯಾಂಡ್​ನ ಪಶ್ಚಿಮದಲ್ಲಿರುವ ಪೋಜ್ನಾನ್​ ಪ್ರಾಣಿಸಂಗ್ರಹಾಲಯದ ಆಡಳಿತಕ್ಕೆ ಮನವಿ ಮನವಿ ಮಾಡಿದ್ದರು. ಅದರಂತೆ ಈಗ ಪ್ರಾಣಿಗಳನ್ನು ಸಾಗಣೆ ಮಾಡಲಾಗಿದೆ.

ಪ್ರಾಣಿಗಳನ್ನು ಯುದ್ಧ ನಡೆಯುತ್ತಿರುವ ಝೈಟೋಮಿರ್​ ಮತ್ತು ಇತರ ಬಾಂಬ್​ ದಾಳಿಯಾಗುತ್ತಿರುವ ವಲಯಗಳಿಂದ ತಪ್ಪಿಸಲು ಕೀವ್ ಅಭಯಾರಣ್ಯದ ಅಧಿಕಾರಿಗಳು ತುಂಬ ಪ್ರಯತ್ನ ಪಟ್ಟರು. ಸುಮಾರು ದೂರ ಅವುಗಳನ್ನು ಕರೆದುಕೊಂಡು ಹೋದರೂ ಎಲ್ಲ ಕಡೆ ಬಾಂಬ್​, ಶೆಲ್​ ದಾಳಿ ಆಗುತ್ತಿದ್ದರಿಂದ ವಾಪಸ್​ ಬಂದರು. ಯಾವ ದಿಕ್ಕಿನಲ್ಲಿ ಹೋದರೂ ಆ ರಸ್ತೆಗಳಲ್ಲೆಲ್ಲ ಸ್ಫೋಟ, ಗುಂಡಿನ ಶಬ್ದವೇ ಕೇಳುತ್ತಿತ್ತು. ಎಲ್ಲಿ ನೋಡಿದರೂ ರಸ್ತೆ ತಡೆಯಾಗಿದೆ. ಹೀಗಾಗಿ ಬೇರೆ ದಾರಿ ಕಾಣದೆ ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ ಎಂದು ಪೋಜ್ನಾನ್​ ಪ್ರಾಣಿಸಂಗ್ರಹಾಲಯದ ವಕ್ತಾರೆ ಮಾಲ್ಗೊರ್ಜಾಟಾ ಚೊಡಿಲಾ ತಿಳಿಸಿದ್ದಾರೆ.

ಕೀವ್​​ನಿಂದ ಪೋಲ್ಯಾಂಡ್​ಗೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ತುಂಬ ದೂರದ ದಾರಿ. ಮೊದಲೊಮ್ಮೆ ಪ್ರಾಣಿಗಳನ್ನು ಹೊತ್ತ ಟ್ರಕ್​​​ನ್ನು​ ಅರ್ಧ ದಾರಿ ಸಾಗಿದ್ದ ಮೇಲೆ ರಷ್ಯಾದ ಯುದ್ಧ ಟ್ಯಾಂಕ್​ಗಳು ತಡೆದಿದ್ದವು. ಎರಡನೇ ಪ್ರಯತ್ನದಲ್ಲಿ ಬಂದು ತಲುಪಿದ್ದಾರೆ. ಹೀಗೆ ಬಂದ ಪ್ರಾಣಿಗಳಿಗೆ ಪುಟ್ಟ ಮರಿಗಳೂ ಇವೆ. ಎರಡು ದಿನಗಳ ಕಾಲ ಟ್ರಕ್​​ನಲ್ಲೇ ಇದ್ದು ಬದುಕುಳಿದಿದ್ದು ನಿಜಕ್ಕೂ ಸಮಾಧಾನ ತಂದ ಸಂಗತಿ. ಅದರಲ್ಲೂ 17ವರ್ಷದ ಹುಲಿಯೊಂದು ತುಂಬ ಬಸವಳಿದುಬಿಟ್ಟಿದೆ.  ಹೀಗೆ ಇವುಗಳನ್ನು ಈ ಪ್ರಾಣಿ ಸಂಗ್ರಹಾಲಯಕ್ಕೆ ಮುಟ್ಟಿಸಿದ ಮೂವರು ಚಾಲಕರು ಮತ್ತೆ ಕೀವ್​ಗೆ ಮರಳಿದ್ದಾರೆ. ತಮ್ಮ ನಗರವನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳುತ್ತಲೇ ಹೋದರು. ಹಾಗೇ, ಈ ಪ್ರಾಣಿಗಳು ನಮ್ಮ ಪ್ರಾಣಿ ಸಂಗ್ರಹಾಲಯದಲ್ಲೇ ಉಳಿಯುವುದಿಲ್ಲ. ಇಲ್ಲಿ ಸ್ವಲ್ಪ ದಿನ ಇದ್ದು, ಇಲ್ಲಿಂದ ಪಶ್ಚಿಮಕ್ಕೆ ಇರುವ ಒಂದು ಅಭಯಾರಣ್ಯಕ್ಕೆ ಹೋಗಲಿವೆ ಎಂದು  ಚೊಡಿಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ- ಬಾಂಗ್ಲಾದ ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಗೆ ಹೊಸ ತಲೆಬಿಸಿ; ಹೆಚ್ಚಾದ ಮಾನವ ಕೂದಲು ಕಳ್ಳಸಾಗಣೆ!

Published On - 10:39 am, Sun, 6 March 22

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ