BBMP: ಬಿಬಿಎಂಪಿ ಬಜೆಟ್ ವಿಚಾರವಾಗಿ ಅಧಿಕಾರಿಗಳನ್ನು ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡ ಶಾಸಕರು
ಸಚಿವರಿಗೆ ಕಾಂಗ್ರೆಸ್ ಶಾಸಕರು ಕೂಡ ಬೆಂಬಲ ಸೂಚಿಸಿದ್ದಾರೆ. ಬಿಬಿಎಂಪಿ ಬಜೆಟ್‌ಗೆ ಸಲಹೆ ನೀಡುವಂತೆ ಕರೆದಿದ್ದ ಸಭೆಯಲ್ಲಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರು: ಬಿಬಿಎಂಪಿ ಬಜೆಟ್ ವಿಚಾರವಾಗಿ ಶಾಸಕರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ತರಾಟೆ ತೆಗೆದುಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಬಿಬಿಎಂಪಿ ಏನೂ ಮಾಡಿಲ್ಲ. ಕೊವಿಡ್ ನೆಪವಿಟ್ಟುಕೊಂಡು ಅನುದಾನವನ್ನು ನೀಡಿಲ್ಲ. ವಾರ್ಡ್‌ಗೆ ನೀಡಬೇಕಿದ್ದ 2 ಕೋಟಿ ರೂಪಾಯಿ ನೀಡಿಲ್ಲ. ಈಗ ಬಿಬಿಎಂಪಿಗೆ ಮೇಯರ್, ಕಾರ್ಪೊರೇಟರ್‌ಗಳಿಲ್ಲ. ಪಾಲಿಕೆಗೆ ಬಂದ ಆದಾಯವನ್ನ ಸರಿಯಾಗಿ ತೋರಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಳ್ಳಲಾಗಿದೆ.
ರಾಜ್ಯ ಸರ್ಕಾರ ಪಾಲಿಕೆಗೆ ಹಣವನ್ನು ನೀಡಿದೆ. ಇಷ್ಟಿದ್ದರೂ ವಾರ್ಡ್ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಕಿಡಿಕಾರಿದ್ದಾರೆ. ಜನಪ್ರತಿನಿಧಿಗಳು ಹೇಳಿದ್ದನ್ನು ಅಧಿಕಾರಿಗಳು ಕೇಳೋದಿಲ್ಲ. ಈಗ ನೋಡಿದರೆ ಬಜೆಟ್ ಮಾಡುತ್ತೀವಿ ಅಂತೀರಾ. ಎಲ್ಲವನ್ನೂ ನೀವೇ ಸಿದ್ಧಮಾಡಿಕೊಂಡು ಬಂದು, ಈಗ ನಮಗೆ ಸಲಹೆ ಕೊಡಿ ಎಂದರೆ ಹೇಗೆಂದು ಕಿಡಿಕಾರಿದ್ದಾರೆ. ನೀವು ಈಗ ಅಂಕಿಅಂಶ ಕೊಟ್ಟಿದ್ದೀರಾ. ಆದರೆ ಇದು ತಳ ಮಟ್ಟದಲ್ಲಿ ಎಷ್ಟು ಜಾರಿ ಆಗಿದೆ? ಎಂದು ಸಚಿವ ಮುನಿರತ್ನ ಮಾತಿಗೆ ಗೋಪಾಲಯ್ಯ ಬೆಂಬಲ ಸೂಚಿಸಿದ್ದಾರೆ.
ಸಚಿವರಿಗೆ ಕಾಂಗ್ರೆಸ್ ಶಾಸಕರು ಕೂಡ ಬೆಂಬಲ ಸೂಚಿಸಿದ್ದಾರೆ. ಬಿಬಿಎಂಪಿ ಬಜೆಟ್‌ಗೆ ಸಲಹೆ ನೀಡುವಂತೆ ಕರೆದಿದ್ದ ಸಭೆಯಲ್ಲಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ; ಮಹತ್ವದ ವಿಚಾರಗಳ ಚರ್ಚೆ ಸಾಧ್ಯತೆ
ಇತ್ತ ಇಂದು (ಮಾರ್ಚ್ 18) ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆಯಲಿದೆ. ಸಿಎಂ, ವಿಪಕ್ಷ ನಾಯಕ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ನ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ಅಂತರ್ ರಾಜ್ಯ ಜಲ ವಿವಾದಗಳ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ಲಭಿಸಿದೆ.
ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಕುರಿತು ಮಹತ್ವದ ನಿರ್ಣಯ ಸಾಧ್ಯತೆ ಇದೆ. ಅದಷ್ಟು ಬೇಗ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವಂತೆ ಸರ್ಕಾರಕ್ಕೆ ಕಾಂಗ್ರೆಸ್, ಜೆಡಿಎಸ್ ನಾಯಕರು ಒತ್ತಾಯ ಮಾಡಲಿದ್ದಾರೆ. ಯೋಜನೆಗೆ ಇರುವಂಥ ಕಾನೂನು ತೊಡಕುಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಲಗಿ ಕೂಡ ಭಾಗಿ ಆಗಲಿದ್ದಾರೆ. ಮುಖ್ಯವಾಗಿ ಪರ್ಮಿಷನ್ ಬೇಕಾಗಿರೋದು ಪರಿಸರ ಇಲಾಖೆಯಿಂದ, ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಕೇಂದ್ರಕ್ಕೆ ಆಲ್ ಪಾರ್ಟಿ ಸದಸ್ಯರ ನಿಯೋಗ ಕರೆದೊಯ್ಯಬೇಕು ಎಂದು ವಿಪಕ್ಷ ನಾಯಕರು ಒತ್ತಾಯಸಲಿದ್ದಾರೆ.
ಇದೇ ವೇಳೆ ಮಹದಾಯಿ ಯೋಜನೆ ಬಗ್ಗೆಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒತ್ತಾಯಿಸಲಿದ್ದಾರೆ. ಗೋವಾ ಸೇರಿದಂತೆ ತ್ರಿಬಲ್ ಇಂಜಿನ್ ಸರ್ಕಾರ ಇದೆ. ಅಲ್ಲಿರುವ ಕಾನೂನು ತೊಡಕುಗಳ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ, ರಾಜ್ಯ, ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಯೋಜನೆಗಿರುವ ತೊಡಕುಗಳನ್ನು ಶೀಘ್ರವೇ ಬಗೆಹರಿಸಬೇಕು ಅಂತಾ ಒತ್ತಾಯ ಕೇಳಿಬರಲಿದೆ. ಸಭೆಯಲ್ಲಿ ಫ್ಲೋರ್ ಲೀಡರ್ಸ್ ಭಾಗಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: BMRCL Recruitment 2022: ಬೆಂಗಳೂರು ಮೆಟ್ರೋದಲ್ಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ: ಬಜೆಟ್ ಮೇಲಿನ ಚರ್ಚೆಗೆ ಬೊಮ್ಮಾಯಿ ಉತ್ತರ: ಕಿರು ಉದ್ಯಮಿಗಳಿಗೆ ಸಹಾಯಧನ, ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ
Published On - 3:27 pm, Fri, 18 March 22