ಬೆಂಗಳೂರು: ಬೀದಿನಾಯಿ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ FIR ದಾಖಲಾಗಿದೆ. ನಾಯಿಯನ್ನು ಕಲ್ಲಿಂದ ಹೊಡೆದಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಮಲ್ಲೇಶ್ವರಂ ಆರ್.ವಿ.ಎನ್ ಕ್ಲೇವ್ ಅಪಾರ್ಟ್ ಮೆಂಟ್ನಲ್ಲಿ ವಾಸ ಮಾಡ್ತಿರುವ ಅನುರಾಧ ಎಂಬುವವರು ಹಲವು ವರ್ಷಗಳಿಂದ ಬೀದಿ ನಾಯಿಗೆ ಊಟ ಹಾಕ್ತಿದ್ದಾರೆ. ಅನುರಾಧಾ ಮತ್ತು ಆಕೆಯ ಪತಿ ಶ್ರೀನಿವಾಸ್ ಬೀದಿನಾಯಿ ಸಾಕಿದ್ದಾರೆ. ಆದ್ರೆ ಮೃದಲಾ, ಪ್ರಭಾಕರ್ ಎಂಬುವವರು ಆ ನಾಯಿಯನ್ನು ಕಲ್ಲಿನಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಅನುರಾಧಾ ದೂರು ನೀಡಿದ್ದಾರೆ. ಅದಕ್ಕೆ ಅನುರಾಧಾ ವಿರುದ್ಧ ಸರೋಜಾ ಎಂಬುವವರು ಪ್ರತಿ ದೂರು ದಾಖಲಿಸಿದ್ದಾರೆ.
ಅನುರಾಧ ಮತ್ತು ಪತಿ ಶ್ರೀನಿವಾಸ್ ಬೀದಿನಾಯಿಯನ್ನು ಸಾಕಿದ್ದಾರೆ. ಆ ಬೀದಿ ನಾಯಿಗೆ ಊಟ ಹಾಕಿ ಸುತ್ತ ಮುತ್ತ ಇರುವ ಜನರಿಗೆ ತೊಂದರೆ ನೀಡ್ತಿದ್ದಾರೆ. ಅದೇ ನಾಯಿ ಹಲವಾರು ಬಾರಿ ಸ್ಥಳೀಯರಿಗೆ ಕಚ್ಚಲು ಬಂದಿದೆ. ಹೀಗಾಗಿ ಅದನ್ನು ಚೀಲದಿಂದ ಹೆದರಿಸಿ ಓಡಿಸಿದ್ದೇವೆ. ಈ ಬಗ್ಗೆ ಹೇಳಲು ಅನುರಾಧಾರ ಮನೆಗೆ ಹೋದರೆ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಮಲ್ಲೇಶ್ವರಂ ಠಾಣೆಯಲ್ಲಿ ಸರೋಜ ದೂರು ದಾಖಲಿಸಿದ್ದಾರೆ. ಸದ್ಯ ಬೀದಿ ಬಾಯಿಯಿಂದಾಗಿ ಎರಡು ಕುಟುಂಬಗಳ ನಡುವೆ ಬೀದಿ ಜಗಳ ಶುರುವಾಗಿದ್ದು ಒಬ್ಬರನೊಬ್ಬರು ಆರೋಪ-ಪ್ರತಿ ಆರೋಪ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲು 2 ಕುಟುಂಬಗಳ ನಡುವೆ ಬೀದಿ ಜಗಳ, ಗುದ್ದಲಿ, ದೊಣ್ಣೆ ಹಿಡಿದು ಹೊಡೆದಾಟ
ಶಿವಮೊಗ್ಗ: ಮೂಕ ಪ್ರಾಣಿಗಳ ಮಾರಣಹೋಮ; 150ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ