ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ; ಕೆಹೆಚ್ಡಿಸಿ ಹಿಂದಿನ ವ್ಯವಸ್ಥಾಪಕ ಸೇರಿ ಮೂವರ ಮೇಲೆ ಎಫ್ಐಆರ್
School Uniform Scam: ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ ಹಿನ್ನೆಲೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಈ ಹಗರಣ ನಡೆದಿದ್ದು ಹಿಂದಿನ ವ್ಯವಸ್ಥಾಪಕ ಮುದ್ದಯ್ಯ ಎಸ್, ಶ್ರೀಧರ್ ಹಾಗೂ ಲಕ್ಷ್ಮಣ್ ಬಿ ವಿರುದ್ಧ ಐಪಿಸಿ ಸೆಕ್ಷನ್ 406, 420ಯಡಿ ಕೇಸ್ ದಾಖಲಾಗಿದೆ.
ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಒಟ್ಟೆ ಕೊಟ್ಟು ಕೋಟಿ ಕೋಟಿ ಹಣ ಲೋಟಿ ಮಾಡಲಾಗುತ್ತಿದೆ(School Uniform Poor Quality) ಎಂದು ಆರೋಪಿಸಿ ಜವಳಿ ಆಯುಕ್ತರ ಪಿಎ ಬಿ ಶ್ರೀಧರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ದೂರಿನ ಅನ್ವಯ ಶೇಷಾದ್ರಿಪುರಂ ಪೊಲೀಸರು( ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮವಸ್ತ್ರ ಹಗರಣ ನಡೆದಿದೆ ಎನ್ನಲಾಗಿದ್ದು, ಗುಣಮಟ್ಟದ ಸಮವಸ್ತ್ರ ಬಟ್ಟೆ ನೀಡದೆ ಹಣ ನುಂಗಿದ್ದಾರೆ ಎಂದು ಕೇಸ್ ದಾಖಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಈ ಹಗರಣ ನಡೆದಿದ್ದು ಹಿಂದಿನ ವ್ಯವಸ್ಥಾಪಕ ಮುದ್ದಯ್ಯ ಎಸ್, ಶ್ರೀಧರ್ ಹಾಗೂ ಲಕ್ಷ್ಮಣ್ ಬಿ ವಿರುದ್ಧ ಐಪಿಸಿ ಸೆಕ್ಷನ್ 406, 420ಯಡಿ ಕೇಸ್ ದಾಖಲಾಗಿದೆ.
2021 -22 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡಲು ರಾಜ್ಯಾದ್ಯಂತ 1,34,05,729(ಒಂದು ಕೋಟಿ ಮೂವತ್ತನಾಲ್ಕು ಲಕ್ಷದ ಐದು ಸಾವಿರದ ಏಳುನೂರ ಇಪತ್ತೊಂಬತ್ತು) ಮೀಟರ್ ಬಟ್ಟೆಯನ್ನು ನೀಡಲಾಗಿತ್ತು. ಒಂದರಿಂದ 10ನೇ ತರಗತಿವರೆಗಿನ ಗಂಡು ಮಕ್ಕಳಿಗೆ ಮತ್ತು ಒಂದರಿಂದ ಏಳನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಸಮವಸ್ತ್ರ ನೀಡಲಾಗಿದೆ. ಅದರಲ್ಲಿ ಎಂಟರಿಂದ 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್ ಸೇರಿ ಎರಡು ಜೊತೆ ಸಮವಸ್ತ್ರ ನೀಡಲಾಗಿದೆ. ಈ ಕೆಲಸವನ್ನು ಸರ್ಕಾರ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಿತ್ತು. ಆದ್ರೆ ಮೊದಲು ಹೇಳಿದ್ದಷ್ಟು ಒಳ್ಳೆಯ ಗುಣಮಟ್ಟದ ಬಟ್ಟೆ ನೀಡಿಲ್ಲಾ ಎಂದು ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಪಿಎಸ್ಐ ಹಗರಣದಲ್ಲಿ ಸುಮ್ಮನೇ ನನ್ನ ಹೆಸರು ತೇಲಿಬಿಟ್ಟಿದ್ದಾರೆ, ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿ; ಬಿವೈ ವಿಜಯೇಂದ್ರ ಸವಾಲು
ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದ್ದು. ಕಳಪೆ ಗುಣಮಟ್ಟದ ಬಟ್ಟೆ ನೀಡಿ ಕೋಟಿ ಕೋಟಿ ಹಣ ಲೋಟಿ ಮಾಡಲಾಗಿದೆ ಎಂದು ಜವಳಿ ಆಯುಕ್ತರ ಪಿಎ ಬಿ ಶ್ರೀಧರ್ ಆರೋಪಿಸಿದ್ದಾರೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಹಿಂದಿನ ವ್ಯವಸ್ಥಾಪಕ ಮುದ್ದಯ್ಯ ಎಸ್, ಶ್ರೀಧರ್, ಲಕ್ಷ್ಮಣ್ ಬಿ ವಿರುದ್ಧ ಐಪಿಸಿ ಸೆಕ್ಷನ್ 406, 420ಯಡಿ ಕೇಸ್ ದಾಖಲಾಗಿದೆ.
ಮತ್ತೊಂದು ಕಡೆ ಪೀಣ್ಯ ಬಳಿಯ ಎರಡು ಎಕ್ಕರೆ ಮೂವತ್ತನಾಲ್ಕು ಗುಂಟೆ ವಿಸ್ತೀರ್ಣದಲ್ಲಿ ಇರುವ ಏಳು ಕೈಗಾರಿಕಾ ಶೆಡ್ ಬಾಡಿಗೆ ನೀಡುವಲ್ಲಿಯೂ ಅವ್ಯವಹಾರ ನಡೆದಿದೆ. ಕಡಿಮೆ ಬೆಲೆಗೆ 22 ವರ್ಷಕ್ಕೆ ನೋಟಿಫಿಕೇಷನ್ ಮಾಡಿ ನೀಡಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಾಗಿದೆ. ಒಂದೇ ಎಫ್ಐಆರ್ನಲ್ಲಿ ಈ ಎರಡೂ ವಿಚಾರಗಳನ್ನು ನಮೂದಿಸಿ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ