ಬೆಂಗಳೂರು: ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನ ಆರೋಪ ಹಿನ್ನೆಲೆ ಬೆಂಗಳೂರಿನಲ್ಲಿ ಆಂಧ್ರದ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಂಧ್ರ ಮೂಲದ ವಿಜಯ್, ಶೃತಿ, ನೆಲ್ಸನ್ ವಿರುದ್ಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿ.ಎಸ್. ಗಾರ್ಡನ್ನಲ್ಲಿ ಹಿಂದೂಗಳಿಗೆ ತೆಲುಗು ಭಾಷೆಯಲ್ಲಿದ್ದ ಏಸುಕ್ರಿಸ್ತನ ಕರಪತ್ರ ಹಂಚಿ ಹಣದ ಆಮಿಷವೊಡ್ಡಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡಿ ಮತಾಂತರ ಮಾಡಲು ಯತ್ನ ನಡೆದಿದೆ. ಈ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಮುಖಂಡರಾದ ಎಮ್ಎಲ್ ಶಿವ ಕುಮಾರ್, ಪವನ್ ಮತ್ತು ಹರ್ಷ ಮುತಾಲಿಕ್ ಮುಂತದಾವರು ದೂರು ನೀಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮತಾಂತರಗೊಂಡಿದ್ದ ಕುಟುಂಬ ಘರ್ ವಾಪಸಿ; ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್
ತುಮಕೂರು: ಜಿಲ್ಲೆಯಲ್ಲಿ ವಿವಿಧ ಆಮಿಷಗಳನ್ನುವೊಡ್ಡಿ ಕ್ರೈಸ್ತ ಧರ್ಮ (Christianity)ಕ್ಕೆ ಮತಾಂತರ (Conversion) ಮಾಡಲು ಯತ್ನಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತದೆ, ಗಣೇಶ ಹಬ್ಬ ಸೇರಿದಂತೆ ಹಲವು ಹಿಂದೂ ಹಬ್ಬಗಳು (Hindu Festivals) ಮೂಡನಂಬಿಕೆಯಾಗಿದೆ ಎಂದು ಮತಾಂತರಿಗಳು ಹೇಳಿ ಹಿಂದೂ ದೇವಾನು ದೇವತೆಗಳನ್ನು ಅವಮಾನಿಸಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಮಕೂರಿನ ಮರಳೂರು ದಿಣ್ಣೆಯಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಜಾಲ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯಿಂದ ಮತಾಂತರ ಮಾಡಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ರವಿ ಎಂಬುವರ ಮನೆಗೆ ಬಂದ ಮತಾಂತರಿಗಳು ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತದೆ ಎಂದು ಆಮಿಷವೊಡ್ಡಿದ್ದಾರೆ.
ಅಷ್ಟೇ ಅಲ್ಲದೆ, ನಮ್ಮ ಧರ್ಮಕ್ಕೆ ಬಂದರೆ ಜೀವನದಲ್ಲಿ ಸದಾ ಆತ್ಮರಕ್ಷಣೆ ಹೊಂದುವಿರಿ ಅಂತಾ ಹೇಳಿ ಮೂವರು ಮತಾಂತರಿಗಳು ಹಿಂದೂಗಳ ಮನಸ್ಸನ್ನು ಪರಿವರ್ತನೆ ಮಾಡಲು ಯತ್ನಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಮತಾಂತರಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಗಣೇಶ ಹಬ್ಬ ಸೇರಿದಂತೆ ಹಲವು ಹಬ್ಬಗಳು ಮೂಡನಂಬಿಕೆಯಾಗಿದೆ. ದೇವರು ಒಬ್ಬನೇ 36 ಕೋಟಿ ದೇವರುಗಳು ಇಲ್ಲ ಎಂದು ಹೇಳಿ ಮತಾಂತರಕ್ಕೆ ಯತ್ನಿಸಿದ್ದಾರೆ. ಘಟನೆ ಸಂಬಂಧ ರವಿ ಎಂಬವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ