Namma Metro: ಮಂದಗತಿಯಲ್ಲಿ ಸಾಗುತ್ತಿರುವ ನಮ್ಮ ಮೆಟ್ರೋ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಗೋವಿಂದರಾಜು ಮನವಿ

ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಚುರುಕು ನೀಡುವಂತೆ ಗೋವಿಂದರಾಜು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಷತ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದು, ಸಾಕಷ್ಟು ಸವಾಲುಗಳೊಂದಿಗೆ ಕೆಲಸ ಮಾಡಬೇಕಿದೆ.

Namma Metro: ಮಂದಗತಿಯಲ್ಲಿ ಸಾಗುತ್ತಿರುವ ನಮ್ಮ ಮೆಟ್ರೋ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಗೋವಿಂದರಾಜು ಮನವಿ
Namma Metro
Follow us
TV9 Web
| Updated By: ನಯನಾ ರಾಜೀವ್

Updated on:Dec 29, 2022 | 12:10 PM

ಬೆಂಗಳೂರಿನ ನಮ್ಮ ಮೆಟ್ರೋ (Namma Metro)ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಚುರುಕು ನೀಡುವಂತೆ ವಿಧಾನಪರಿಷತ್ ಸದಸ್ಯ ಕೆ ಗೋವಿಂದರಾಜು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಷತ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದು, ಸಾಕಷ್ಟು ಸವಾಲುಗಳೊಂದಿಗೆ ಕೆಲಸ ಮಾಡಬೇಕಿದೆ. ಇನ್ನೊಂದು ವರ್ಷದಲ್ಲಿ ಏರ್​ಪೋರ್ಟ್​ಗೆ ಮೆಟ್ರೋ ಸಂಪರ್ಕ ದೊರೆಯಲಿದೆ. ನಿಗದಿತ ಸಮಯದಲ್ಲಿ ಮೆಟ್ರೋ ಕಾಮಗಾರಿ ಮುಗಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಮೆಟ್ರೋ ಕಾಮಗಾರಿ ಬೆಂಗಳೂರಿನಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ, ಬೇಗ ಕಾಮಗಾರಿ ಮುಗಿಸುವಂತೆ ಕೆ. ಗೋವಿಂದರಾಜು ವಿಧಾನಪರಿಷತ್​ನಲ್ಲಿ ಒತ್ತಾಯಿಸಿದ್ದರು.

ಬೆಂಗಳೂರಿನ ಮಧ್ಯೆ ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ, ಹೈ ಡೆನ್ಸಿಟಿ ಪಾಪ್ಯೂಲೇಶನ್ ಕವರ್ ಮಾಡುವ ಉದ್ದೇಶದಿಂದ ಮಾಡುತ್ತಿದ್ದೇವೆ. ಸಾಕಷ್ಟು ಸವಾಲುಗಳಿಂದ ಕೆಲಸ ಮಾಡಬೇಕಿದೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಬಳಕೆದಾರರಿಗೆ ಗುಡ್ ನ್ಯೂಸ್: Paytm ಮತ್ತು Yaatraದಲ್ಲಿ ಟಿಕೆಟ್ ಸೇವೆ ಆರಂಭ

ಮರ ಟ್ರಾನ್ಸಫ್ಲಾಂಟ್ ಮಾಡಬೇಕು, ಭೂ ಸ್ವಾಧೀನ ಮಾಡಬೇಕು, ಅಂಡರ್ ಗ್ರೌಂಡ್ ಕಾಮಗಾರಿ ಮಾಡಬೇಕು. ಆದರೆ ನಾನು ಬಂದಮೇಲೆ ವೇಗ ಕೊಟ್ಟಿದ್ದೇನೆ, ಇನ್ನೊಂದು ವರ್ಷದಲ್ಲಿ ಏರ್ ಪೋರ್ಟ್ ಗೆ ಮೆಟ್ರೋಗೆ ಕನೆಕ್ಟಿವಿಟಿ ಕೊಡುತ್ತೇವೆ.

ನಿಮ್ಮ ಕಾಳಜಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ, ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Thu, 29 December 22