ಬಿಬಿಎಂಪಿ ಕೇಂದ್ರ ಕಚೇರಿಗೆ ಆ್ಯಂಬುಲೆನ್ಸ್ ಬೇಕು: ನೌಕರರ ಸಂಘದ ಅಧ್ಯಕ್ಷ
ಇತ್ತೀಚೆಗೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿನ ಕಟ್ಟಣವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಜೀವಹಾನಿ ಸಂಭವಿಸಿತ್ತು. ಈ ವೇಳೆ ಸಕಾಲಕ್ಕೆ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಗಾಯಾಳು ನೌಕರರು ಪರದಾಡುವಂತಾಗಿತ್ತು. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ ರಾಜ್, ಬಿಬಿಎಂಪಿ ಕೇಂದ್ರ ಕಚೇರಿಗೆ ಆ್ಯಂಬುಲೆನ್ಸ್ ಬೇಕು ಎಂದರು.

ಬೆಂಗಳೂರು, ಸೆ.2: ಇತ್ತೀಚೆಗೆ ಬಿಬಿಎಂಪಿ (BBMP) ಕೇಂದ್ರ ಕಚೇರಿ ಆವರಣದಲ್ಲಿನ ಕಟ್ಟಣವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಜೀವಹಾನಿ ಸಂಭವಿಸಿತ್ತು. ಈ ವೇಳೆ ಸಕಾಲಕ್ಕೆ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಗಾಯಾಳು ನೌಕರರು ಪರದಾಡುವಂತಾಗಿತ್ತು. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ ರಾಜ್, ಬಿಬಿಎಂಪಿ ಕೇಂದ್ರ ಕಚೇರಿಗೆ ಆ್ಯಂಬುಲೆನ್ಸ್ ಬೇಕು ಎಂದರು.
ಬೆಂಕಿ ಪ್ರಕರಣದಲ್ಲಿ ಸಕಾಲಕ್ಕೆ ಆಂಬ್ಯುಲೆನ್ಸ್ ಇಲ್ಲದೇ ನೌಕರರು ಪರದಾಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳಿರುವ ಎರಡು ಆ್ಯಂಬ್ಯುಲೆನ್ಸ್ಗಳನ್ನು ನೌಕರರ ಸಂಘದಿಂದಲೇ ಖರೀದಿಸಿ ಬಿಬಿಎಂಪಿಗೆ ಹಸ್ತಾಂತರಿಸಲು ತೀರ್ಮಾನ ಮಾಡಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲೇ ಇವುಗಳು ಕಾರ್ಯನಿರ್ವಹಿಸಲಿವೆ ಎಂದರು.
ಇದನ್ನೂ ಓದಿ: ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಕರಡು ಪ್ರತಿಗೆ 1400 ಕ್ಕೂ ಹೆಚ್ಚು ಆಕ್ಷೇಪಣೆ; ಗಡುವು ವಿಸ್ತರಣೆ ಸಾಧ್ಯತೆ ಅನುಮಾನ
ಅಗ್ನಿ ಅವಘಡದಲ್ಲಿ ಮೃತಒಟ್ಟ ಶಿವಕುಮಾರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಒದಗಿಸುತ್ತೇವೆ ಎಂದು ಹೇಳಿದ ಅಮೃತ ರಾಜ್, ಬಿಬಿಎಂಪಿಯ ಕ್ಲಾಸ್ 1 ನೌಕರರಿಂದ ಹಿಡಿದು ಡಿ ದರ್ಜೆ ನೌಕರರು ಸೇರಿ ಪ್ರತಿಯೊಬ್ಬರೂ ಹಣ ಸಹಾಯ ಮಾಡಲಾಗುವುದು. ಎಲ್ಲಾ ನೌಕರರಿಂದ ಸರಿಸುಮಾರು 95 ಲಕ್ಷ ಹಣ ಸಂಗ್ರಹಿಸಿ ಶಿವಕುಮಾರ್ ಕುಟುಂಬಕ್ಕೆ ಹಸ್ತಾಂತರಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಸರ್ಕಾರಕ್ಕೆ ಪರಿಹಾರದ ಬಗ್ಗೆ ಪ್ರಸ್ತಾವನೆ
ಬೆಂಕಿ ಅವಘಡದಲ್ಲಿ ಮೃತ ಶಿವಕುಮಾರ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಸರ್ಕಾರಕ್ಕೆ ಪರಿಹಾರದ ಬಗ್ಗೆ ಪ್ರಸ್ತಾವನೆ ಕಳಿಸುತ್ತೇವೆ. ಮೃತರ ಪತ್ನಿಗೆ ಖಾಯಂ ಕೆಲಸದ ವಿಚಾರವಾಗಿಯೂ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.
ಬೆಂಕಿ ಪ್ರಕರಣದ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಬೆಂಕಿ ಪ್ರಕರಣದಲ್ಲಿ ಕೆಲ ಖಾಸಗಿ ಸಂಸ್ಥೆಯಿಂದ ಸಲಹೆ ಪಡೆಯಲಾಗುತ್ತಿದೆ. ಸೆಪ್ಟೆಂಬರ್ 15 ಕ್ಕೆ ವರದಿ ನೀಡುವುದಾಗಿ ಸಮಿತಿ ಹೇಳಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ