Bengaluru: ನಿರ್ಮಾಣ ಹಂತದ ಮಾಲ್ನಲ್ಲಿ ಬೆಂಕಿ, ರಸ್ತೆಯೂ ಕಾಣದಷ್ಟು ದಟ್ಟ ಹೊಗೆ
ರಸ್ತೆಯೂ ಕಾಣದಷ್ಟು ದಟ್ಟ ಹೊಗೆ ಆವರಿಸಿಕೊಂಡಿದೆ. ದಟ್ಟ ಹೊಗೆ ಆವರಿಸಿದ ಹಿನ್ನೆಲೆ ವಾಹನ ಸವಾರರ ಪರದಾಟ ಉಂಟಾಗಿದೆ. ಘಟನಾ ಸ್ಥಳಕ್ಕೆ 3 ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ.
ಬೆಂಗಳೂರು: ನಿರ್ಮಾಣ ಹಂತದ ಮಾಲ್ನಲ್ಲಿ ಬೆಂಕಿ, ದಟ್ಟ ಹೊಗೆ ಪ್ರಕರಣಕ್ಕೆ ಸಂಬಂಧಿಸಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದಾರೆ. ಥಿಯೇಟರ್ ನಿರ್ಮಾಣಕ್ಕೆ ಥರ್ಮಾಕೋಲ್ ಬಳಸಿ ಕೆಲಸ ಮಾಡಲಾಗಿತ್ತು ಅದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮಾಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಮಾಲ್ ನಿರ್ಮಾಣವಾಗುತ್ತಿತ್ತು. 5 ಎಕರೆ ವಿಸ್ತೀರ್ಣದಲ್ಲಿ 2 ವರ್ಷಗಳಿಂದ ಮಾಲ್ ನಿರ್ಮಾಣ ಕೆಲಸ ನಡೆಯುತ್ತಿತ್ತು. ನಿರ್ಮಾಣ ಹಂತದ 12 ಅಂತಸ್ತಿನ ಮಾಲ್ ಕಟ್ಟಡ ಮಾರ್ಚ್ನಲ್ಲಿ ಮಾಲ್ ತೆರೆಯಲು ಸಿದ್ಧತೆ ನಡೆಸಲಾಗಿತ್ತು. ಇದೀಗ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿಯಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಸ್ತೆಯೂ ಕಾಣದಷ್ಟು ದಟ್ಟ ಹೊಗೆ ಆವರಿಸಿಕೊಂಡಿದೆ. ದಟ್ಟ ಹೊಗೆ ಆವರಿಸಿದ ಹಿನ್ನೆಲೆ ವಾಹನ ಸವಾರರ ಪರದಾಟ ಉಂಟಾಗಿದೆ. ಘಟನಾ ಸ್ಥಳಕ್ಕೆ 3 ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ.
ಕಟ್ಟಡದಲ್ಲಿ ಒಂದು ಕೊಠಡಿ ಯಲ್ಲಿ ಸ್ಟೋರ್ ರೂಮ್ ರೀತಿ ಮಾಡಲಾಗಿತ್ತು. ಸ್ಟೈರೊ ಫೋಮ್ (ಥರ್ಮಾಕೋಲ್) ಇಡಲಾಗಿತ್ತು. ಇದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡತೆ ಆಗಿದೆ. ಸ್ಟೈರೊ ಫೋಮ್ ಇದ್ದ ಕಾರಣ ಹೊಗೆ ದಟ್ಟವಾಗಿ ಆವರಿಸಿದೆ. ನಂತರ ಬೆಂಕಿಯನ್ನು ಕಂಟ್ರೋಲ್ ಮಾಡಲಾಗಿದೆ. ಸದ್ಯ ಗೋಡನ್ ಗೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿ ಸಂಪೂರ್ಣವಾಗಿ ಕಂಟ್ರೋಲ್ ಮಾಡಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿಕೆ ನೀಡಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಇಬ್ಬರಿಗೆ ಗಾಯ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಇಬ್ಬರಿಗೆ ಗಾಯವಾದ ಘಟನೆ ಬೆಂಗಳೂರಿನ ಮೂಡಲಪಾಳ್ಯದ ಮನೆಯೊಂದರಲ್ಲಿ ನಡೆದಿದೆ. ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸೋರಿಕೆಯಾಗಿ ಬೆಂಕಿ ತಗುಲಿದೆ. ಮನೆಯಲ್ಲಿ ಹತ್ತಾರು ಸಿಲಿಂಡರ್ಗಳನ್ನು ಒಂದೇ ಕಡೆ ಸಂಗ್ರಹ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮೂಡಲಪಾಳ್ಯದಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ವೇಳೆ ಗ್ಯಾಸ್ ಲೀಕ್ ಸ್ಫೋಟ, ತಪ್ಪಿದ ಭಾರಿ ಅನಾಹುತ
ಇದನ್ನೂ ಓದಿ: Bengaluru: ಸಿಲಿಂಡರ್ ಸ್ಫೋಟವಾಗಿ 7 ಜನರಿಗೆ ಗಾಯ; ಬೆಂಕಿ ನಂದಿಸುತ್ತಿರುವ 9ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ