ಬೆಂಗಳೂರು: ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಪದಕ ಶಿಫಾರಸ್ಸಿಗೆ ಇನ್ನು ಮುಂದೆ ಫಿಟ್‌ನೆಸ್ ಕಡ್ಡಾಯವಾಗಿದೆ. ಆ ಮೂಲಕ ಶಿಸ್ತಿಗೆ ಹೆಸರಾದ ಖಾಕಿ ಪಡೆಯಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಕೆಎಸ್‌ಆರ್‌ಪಿಯಲ್ಲಿ (KSRP) ಉತ್ತಮ ಕೆಲಸ, ಕಾರ್ಯಕ್ಷಮತೆಯ ಜೊತೆಗೆ ಫಿಟ್‌ನೆಸ್ ಕೂಡ ಕಡ್ಡಾಯವಾಗಿದೆ. ಫಿಟ್‌ನೆಸ್ ಪೊಲೀಸರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಹೀಗಾಗಿ ಕೆಎಸ್‌ಆರ್‌ಪಿಯಲ್ಲಿ ಫಿಟ್ನೆಸ್ ಕಡ್ಡಾಯ ಎಂದು ಎಡಿಪಿ ಅಲೋಕ್ ಕುಮಾರ್ ಈ ನಿಯಮ ಜಾರಿಗೆ ಬೆಂಬಲ ನೀಡಿದ್ದಾರೆ.
ಕೆಎಸ್‌ಆರ್‌ಪಿಯಲ್ಲಿ 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಈ ಪೈಕಿ ಕಳೆದ ವರ್ಷದಲ್ಲಿ 3 ಸಾವಿರ ಫಿಟ್‌ನೆಸ್ ಇಲ್ಲದ ಸಿಬ್ಬಂದಿಯ ಹೆಸರು ಪಟ್ಟಿ ಮಾಡಲಾಗಿತ್ತು. ಇದೀಗ ಈ ಪಟ್ಟಿಯಲ್ಲಿರುವ 2,300 ಸಿಬ್ಬಂದಿಗಳು 10 ಕೆಜಿ ತೂಕವನ್ನು ಇಳಿಸಿದ್ದಾರೆ. ನಿತ್ಯ ವರ್ಕೌಟ್‌ನಿಂದ ಹೊಟ್ಟೆ ಕರಗಿಸಿದ್ದಾರೆ. ಸದ್ಯ ಇನ್ನೂ 680 ಸಿಬ್ಬಂದಿ ಅಧಿಕ ತೂಕ ಹೊಂದಿದ್ದಾರೆ ಎಂದು ಎಡಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ತೂಕ ಇಳಿಕೆಯಿಂದ ಸಿಬ್ಬಂದಿಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ. ಅನಾರೋಗ್ಯದಿಂದ ಮೃತಪಡುವ ಪೊಲೀಸರ ಸಂಖ್ಯೆ ಕಡಿಮೆಯಾಗುತ್ತದೆ. ಕೆಎಸ್ಆರ್ಪಿ ಸಿಬ್ಬಂದಿ ಸಾಥ್ ನೀಡಿದ ಹಿನ್ನೆಲೆ ದಾಖಲೆಯ ಸಾಧನೆ ಮಾಡಲು ಸಾಧ್ಯವಾಗಿದೆ. ರಾಷ್ಟ್ರದಲ್ಲೇ ಇದೇ ಮೊದಲ ಬಾರಿಗೆ ದಾಖಲೆಯ ಸಾಧನೆಯಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಫಿಟ್‌ನೆಸ್ ಮಂತ್ರಕ್ಕೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:
6ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷಾರ್ಹ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆ ಕಡ್ಡಾಯಗೊಳಿಸಲು ಚಿಂತನೆ: ಅಮಿತ್ ಶಾ
ಪದವಿ ತರಗತಿಗಳಲ್ಲಿ ಕನ್ನಡ ವಿಷಯ ಅಧ್ಯಯನ ಕಡ್ಡಾಯ ಆದೇಶ; ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ
Published On - 9:00 am, Sat, 23 October 21