ಬೆಂಗಳೂರಿನಲ್ಲಿ ದರೋಡೆ ಮಾಡುತ್ತಿದ್ದ 2 ರೌಡಿ ಗ್ಯಾಂಗ್ ಅರೆಸ್ಟ್!

ಆರೋಪಿಗಳು ಒಂಟಿಯಾಗಿ ತಿರುಗಾಡುವವರನ್ನು ಲಾಂಗ್ ಇಟ್ಟು ಹೆದರಿಸಿ ದರೋಡೆ ಮಾಡುತ್ತಿದ್ದರು. ಇಮ್ರಾನ್ 2020ರಲ್ಲಿ ನಡೆದಿದ್ದ ಪಾದರಾಯನಪುರ ಗಲಭೆಯ ಪ್ರಮುಖ ಅರೋಪಿ. ಗಲಭೆ ಬಳಿಕ ತಲೆಮರಿಸಿಕೊಂಡಿದ್ದ.

ಬೆಂಗಳೂರಿನಲ್ಲಿ ದರೋಡೆ ಮಾಡುತ್ತಿದ್ದ 2 ರೌಡಿ ಗ್ಯಾಂಗ್ ಅರೆಸ್ಟ್!
ರೌಡಿ ಗ್ಯಾಂಗ್ ಕಟ್ಟಿದ್ದ ನಿಶಾಂತ್ ಮತ್ತು ಇಮ್ರಾನ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ರೌಡಿ ಗ್ಯಾಂಗ್​ಗಳನ್ನು ಬಂಧಿಸಲಾಗಿದೆ. ಜೆ.ಜೆ.ನಗರದ ರೌಡಿಶೀಟರ್ ಇಮ್ರಾನ್ ಗ್ಯಾಂಗ್ ಮತ್ತು ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್​ನ ಅರೆಸ್ಟ್ ಮಾಡಿದ್ದಾರೆ. ರೌಡಿಜಂ, ರಾಬರಿ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ ಗ್ಯಾಂಗ್​ನ ನವಾಜ್, ಇರ್ಷಾದ್, ಇಮ್ರಾನ್ ಪಾಷಾ, ಮಹಮದ್ ಅಫ್ತಾಬ್ ಬಂಧನಕ್ಕೊಳಗಾಗಿದ್ದಾರೆ.

ಆರೋಪಿಗಳು ಒಂಟಿಯಾಗಿ ತಿರುಗಾಡುವವರನ್ನು ಲಾಂಗ್ ಇಟ್ಟು ಹೆದರಿಸಿ ದರೋಡೆ ಮಾಡುತ್ತಿದ್ದರು. ಇಮ್ರಾನ್ 2020ರಲ್ಲಿ ನಡೆದಿದ್ದ ಪಾದರಾಯನಪುರ ಗಲಭೆಯ ಪ್ರಮುಖ ಅರೋಪಿ. ಗಲಭೆ ಬಳಿಕ ತಲೆಮರಿಸಿಕೊಂಡಿದ್ದ. ನಂತರ ಅರೆಸ್ಟ್ ಮಾಡಲಾಗಿತ್ತು. ಆದರೆ ಬೇಲ್ ಪಡೆದು ಹೊರ ಬಂದು ಮತ್ತೆ ರೌಡಿಸಂ ಮಾಡುತ್ತಿದ್ದ.

ಇನ್ನು ಅರೆಸ್ಟ್ ಆಗಿರುವ ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್ ಕಟ್ಟಿದ್ದ. ಏರಿಯಾದಲ್ಲಿನ ಸಿವಿಲ್ ವಿಚಾರಗಳಿಗೆ ಕೈ ಹಾಕಿ, ಸೆಟಲ್ ಮೆಂಟ್ ಮಾಡುವ ಕೆಲಸ ಮಾಡುತ್ತಿದ್ದ. ನಿಶಾಂತ್ ಗ್ಯಾಂಗ್ ಸಹಚರರಾದ ಶರತ್, ಅಜಯ್, ಯತೀಶ್ ಎಂಬುವವರನ್ನು ಸದ್ಯ ಬಂಧಿಸಲಾಗಿದೆ. ಸಿಸಿಬಿಯ ಒಸಿಡಬ್ಲೂ ವಿಭಾಗ ಅಧಿಕಾರಿಗಳು ಎರಡು ರೌಡಿ ಗ್ಯಾಂಗ್​ನ ಅರೆಸ್ಟ್ ಮಾಡಿದ್ದಾರೆ.

ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ
ನೆಲಮಂಗಲ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಘಟನೆ ನೆಲಮಂಗಲದ ಸದಾಶಿವನಗರದಲ್ಲಿ ನಡೆದಿದೆ. ಬೈಕ್ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೈಕ್ ಕಳ್ಳತನ ಹೆಚ್ಚಾದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಗಸ್ತು ಹೆಚ್ಚಳ ಮಾಡುವಂತೆ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ

ನಟಿ ಸುಧಾ ಚಂದ್ರನ್​ಗೆ ಏರ್​ಪೋರ್ಟ್​ನಲ್ಲಿ ಅವಮಾನ; ಕ್ಷಮೆ ಕೇಳಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)

ಅನ್ಯ ಕೋಮಿನ ಯುವತಿ ಜತೆಗೆ ಯುವಕನ ಪ್ರೀತಿ ಪ್ರೇಮ; ಪೋಷಕರು ವಾರ್ನ್ ಮಾಡಿದ ಬಳಿಕ ಯುವಕ ನಾಪತ್ತೆ

Click on your DTH Provider to Add TV9 Kannada