ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಕೇಸ್: ಚಿನ್ನದಂಗಡಿ ಮಾಲೀಕನಿಗೂ ಎದುರಾಯ್ತು ಸಂಕಷ್ಟ

ಹುಲಿ ಉಗುರಿನ ಲಾಕಟ್ ಧರಿಸಿದ ಆರೋಪದ ಮೇಲೆ ಪೊಲೀಸರು ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್​ನನ್ನು ಬಂಧಿಸಿದ್ದು, ತನಿಖೆ ವೇಳೆ ಹುಲಿ ಉಗುರು ಖರೀದಿ ಬಗ್ಗೆ ಸಂತೋಷ್ ಮಹತ್ವದ ಅಂಶ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಹೆಚ್ಚಿನ ಮಾಹಿತಿ ಕಲೆಹಾಕಲು ಹುಲಿ ಉಗುರು ಮೂಲ ಕೆದಕಲು ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಸಂತೋಷ್ ಆಪ್ತ ರಂಜಿತ್, ಚಿನ್ನ ಅಂಗಡಿ ಮಾಲೀಕನಿಗೆ ನೊಟೀಸ್ ನೀಡಿದೆ.

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಕೇಸ್: ಚಿನ್ನದಂಗಡಿ ಮಾಲೀಕನಿಗೂ ಎದುರಾಯ್ತು ಸಂಕಷ್ಟ
Updated By: Digi Tech Desk

Updated on: Oct 26, 2023 | 12:40 PM

ಬೆಂಗಳೂರು, (ಅಕ್ಟೋಬರ್ 24): ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್(Varthur Santhosh ) ಅವರು ಸುದ್ದಿಯಲ್ಲಿದ್ದಾರೆ. ಹುಲಿ ಉಗುರು(tiger claw) ಇರುವ ಲಾಕೆಟ್ ಧರಿಸಿದ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್​ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದ ಇನ್ನಿತರರು ಸಹ ಹುಲಿ ಲಾಕೆಟ್ ಧರಿಸಿದ್ದು, ಇದೀಗ ಅವರಿಗೂ ಭಯ ಶುರುವಾಗಿದೆ. ಇನ್ನು ವರ್ತೂರು ಸಂತೋಷ್​ಗೆ ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಇದೀಗ ಸಂಕಷ್ಟ ಎದುರಾಗಿದೆ.

ಹೌದು.. ತನಿಖೆ ವೇಳೆ ಹುಲಿ ಉಗುರು ಖರೀದಿ ಬಗ್ಗೆ ಸಂತೋಷ್ ಮಹತ್ವದ ಅಂಶ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಹೆಚ್ಚಿನ ಮಾಹಿತಿ ಕಲೆಹಾಕಲು ಹುಲಿ ಉಗುರು ಮೂಲ ಕೆದಕಲು ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಸಂತೋಷ್ ಆಪ್ತ ರಂಜಿತ್, ಚಿನ್ನ ಅಂಗಡಿ ಮಾಲೀಕನಿಗೆ ನೊಟೀಸ್ ನೀಡಿದೆ. ಹೀಗಾಗಿ ಲಾಕೇಟ್ ಮಾಡಿಕೊಟ್ಟ ವರ್ತೂರು ಮೂಲದ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ ಎದುರಾಗಿದ್ದು, ತನಿಖೆ ವೇಳೆ ಆರೋಪಗಳು ಸಾಬೀತಾದರೆ ಬಂಧನವಾಗು ಸಾಧ್ಯತೆಗಳಿವೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಎಷ್ಟು ಗ್ರಾಂ ಚಿನ್ನ ಧರಿಸುತ್ತಿದ್ದರು?

ಇನ್ನು ಪೊಲೀಸರು ಹುಲಿ ಉಗುರಿನ ಮೂಲ ಕೆದಕಲು ಮುಂದಾಗಿದ್ದು, ವರ್ತೂರ್ ಸಂತೋಷ್​ಗೆ ಈ ಹುಲಿ ಉಗುರು ಕೊಟ್ಟಿದ್ಯಾರು?  ಹುಲಿಯನ್ನು ಬೇಟೆಯಾಡಿ ಉಗುರು ತಂದು ಕೊಟ್ಟಿದ್ದಾರಾ? ಹುಲಿಯನ್ನು ಸಾಯಿಸಿ ಉಗುರು ಕಿತ್ತುಕೊಂಡು ಬಂದಿದ್ದಾರಾ? ಹೀಗೆ  ಹುಲಿ ಉಗುರಿನ ಮೂಲ ಕಂಡು ಹಿಡಿಯಲು ನಾನಾ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Published On - 9:57 am, Tue, 24 October 23