ಫಾರ್ಮ್-7 ದುರ್ಬಳಕೆ ಆರೋಪ: ಬಿಜೆಪಿ ಶಾಸಕನ ಹೆಸರು ಉಲ್ಲೇಖಿಸಿ ಸೌಮ್ಯಾ ರೆಡ್ಡಿ ದೂರು
ಇವತ್ತು ಕೂಡಾ ರಾಜ್ಯದಲ್ಲಿ SIR VS FIR ವಾರ್ ಜೋರಾಗಿದೆ. ಇತ್ತ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ 5698 ಫಾರ್ಮ್-7 ಸಲ್ಲಿಕೆ ಶಂಕೆ ಹಿನ್ನೆಲೆ ಬಿಜೆಪಿ ಶಾಸಕನ ಹೆಸರು ಉಲ್ಲೇಖಿಸಿ ಸೌಮ್ಯಾ ರೆಡ್ಡಿ ದೂರು ನೀಡಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಸುಮಾರು 2372 ಅಲ್ಪಸಂಖ್ಯಾತ ಮತದಾರರ ಮತ ತೆಗೆಯಲು ಸಂಚು ಆರೋಪ ಹಿನ್ನೆಲೆ ಫಾರ್ಮ್-7 ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮಕೈ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದಿಂದ ಮನವಿ ಸಲ್ಲಿಸಲಾಗಿದೆ.

ಮುಖ್ಯಾಂಶಗಳು
- ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ
- ಚಿತ್ರದುರ್ಗದಲ್ಲಿ ಡಿಸಿ, ಎಸ್ಗೆ ಕಾಂಗ್ರೆಸ್ ಮುಖಂಡರಿಂದ ಕ್ರಮಕ್ಕೆ ಮನವಿ
- ಬಿಜೆಪಿ ಶಾಸಕನ ಹೆಸರು ಉಲ್ಲೇಖಿಸಿ ಸೌಮ್ಯಾ ರೆಡ್ಡಿ ದೂರು
ಚಿತ್ರದುರ್ಗ, ಅಕ್ಟೋಬರ್ 05: ರಾಜ್ಯದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆ ದೊಡ್ಡ ದಂಗಲ್‌ಗೆ ಕಾರಣವಾಗಿದೆ. ಫಾರ್ಮ್-7 ದುರ್ಬಳಕೆ ಮಾಡಿಕೊಂಡು ಭಾರೀ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಕುರಿತಾಗಿ ರಾಜ್ಯದ ಹಲವೆಡೆ ದೂರುಗಳು ದಾಖಲಾಗುತ್ತಿವೆ. ಇದೀಗ ಜಯನಗರ ಕ್ಷೇತ್ರದಲ್ಲಿ ಒಟ್ಟು 5698 ಫಾರ್ಮ್-7 ಸಲ್ಲಿಕೆ ಶಂಕೆ ಹಿನ್ನೆಲೆ ಬಿಜೆಪಿ ಶಾಸಕನ ಹೆಸರು ಉಲ್ಲೇಖಿಸಿ ಸೌಮ್ಯಾ ರೆಡ್ಡಿ ದೂರು ನೀಡಿದ್ದಾರೆ.
ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಒಟ್ಟು 5698 ಫಾರ್ಮ್-7 ಸಲ್ಲಿಕೆ ಶಂಕೆ ಹಿನ್ನೆಲೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಹೆಸರು ಉಲ್ಲೇಖಿಸಿ ದೂರು ನೀಡಿದ್ದು, ಅಕ್ರಮ ಎಸಗಿರುವ ಬಗ್ಗೆ ವಿಡಿಯೋ, ಫೋಟೋ ಸಾಕ್ಷ್ಯಗಳನ್ನೂ ನೀಡಿದ್ದಾರೆ. ಹಾಗಾಗಿ ದಾಖಲೆ ಪರಿಶೀಲಿಸಿ ಕಾನೂನು ಕ್ರಮಕ್ಕೆ ಪೊಲೀಸರಿಗೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಫಾರ್ಮ್-7 ಸಲ್ಲಿಸಿದ್ರೆ ಮತದಾರರನ್ನು ತಕ್ಷಣ ಕೈಬಿಡಲ್ಲ: ಫಾರ್ಮ್-7 ದುರ್ಬಳಕೆ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ
ಜಯನಗರ ಕ್ಷೇತ್ರದಲ್ಲಿ ಒಟ್ಟು 5,698 ಫಾರ್ಮ್-7 ಸಲ್ಲಿಕೆ ಕುರಿತು ಶಂಕೆ ವ್ಯಕ್ತವಾಗಿದ್ದು, ಗುರಪ್ಪನಪಾಳ್ಯ ವಾರ್ಡ್‌ನಲ್ಲೇ 4,327ಕ್ಕೂ ಹೆಚ್ಚು ಹೆಸರು ಡಿಲೀಟ್ ಆರೋಪ ಕೇಳಿಬಂದಿದೆ. BLO ಲೋಕೇಶ್ ಕೋರಿಕೆಯ ಮೇರೆಗೆ ಫಾರ್ಮ್-7 ಸಲ್ಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದಿಂದ ಮನವಿ
ಇನ್ನು ಚಿತ್ರದುರ್ಗದಲ್ಲಿ ಅಲ್ಪಸಂಖ್ಯಾತ ಮತದಾರರ ಮತ ತೆಗೆಯಲು ಸಂಚು ಆರೋಪ ಹಿನ್ನೆಲೆ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಮುಖಂಡರಿಂದ ಚುನಾವಣಾಧಿಕಾರಿ, ಡಿಸಿ ರಮ್ಯ ಮತ್ತು ಎಸ್ಪಿ ಕುಶಾಲ್ ಚೌಕ್ಸೆಗೆ ಮನವಿ ಪತ್ರ ನೀಡಲಾಗಿದೆ.
ಸುಮಾರು 2372 ಅಲ್ಪಸಂಖ್ಯಾತ ಮತದಾರರ ಮತ ತೆಗೆಯಲು ಸಂಚು ಆರೋಪ ಕೇಳಿಬಂದಿದ್ದು, ಫಾರ್ಮ್-7 ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದಿಂದ ಮನವಿ ಸಲ್ಲಿಸಲಾಗಿದೆ. ಈ ವೇಳೆ ಕಾಂಗ್ರೆಸ್ ಜಿಲ್ಲಾದ್ಯಕ್ಷ ಎಂ ಕೆ ತಾಜಪೀರ್, ಅಲ್ಪಸಂಖ್ಯಾತ ವಿಭಾಗದ ಸೈಯದ್ ಖುದ್ದೂಸ್ ಸೇರಿ ಹಲವು ಮುಖಂಡರು ಸಾಥ್ ನೀಡಿದರು.
ಮಂಗಳೂರಿನಲ್ಲಿ ಮುಸ್ಲಿಂರ ಮತ ಕೈಬಿಡಲು ಶಿಫಾರಸ್ಸು ಆರೋಪ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 16 ಮುಸ್ಲಿಂ ಮತದಾರರ ಹೆಸರನ್ನ ಪಟ್ಟಿಯಿಂದ ಕೈಬಿಡಲು ಬಿಜೆಪಿ ಲೇಟರ್ ಹೆಡ್‌ನಲ್ಲೇ ಶಿಫಾರಸ್ಸು ಮಾಡಲಾಗಿದೆ. ವಾಸ್ತವ್ಯ ಇದ್ರೂ ಕೂಡ ವಾಸ್ತವ್ಯ ಇಲ್ಲ ಅಂತಾ BLO ಗಳಿಂದ ಉಲ್ಲೇಖ ಆಗಿದೆ. ಹೀಗಾಗಿ ವಾಸ್ತವ್ಯ ಇರೋರನ್ನ ತಹಶೀಲ್ದಾರ್ ಮುಂದೆ ಹಾಜರು ಪಡಿಸಿರೋ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:10 pm, Mon, 5 October 26




