AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಮ್-7 ಸಲ್ಲಿಸಿದ್ರೆ ಮತದಾರರನ್ನು ತಕ್ಷಣ ಕೈಬಿಡಲ್ಲ: ಫಾರ್ಮ್​-7 ದುರ್ಬಳಕೆ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ

ವೋಟ್ ಡಿಲೀಟ್ ದಂಗಲ್ ದೇಶಾದ್ಯಂತ ಕಿಚ್ಚು ಹಚ್ಚಿದೆ. ರಾಜ್ಯ ರಾಜಕಾರಣದಲ್ಲಂತೂ ಫಾರ್ಮ್​-7 ದುರ್ಬಳಕೆ ಆರೋಪ ಜೋರಾಗಿದೆ. ಬಲ್ಕ್ ಆಗಿ ಫಾರ್ಮ್​ 7 ಹಂಚೋ ಮೂಲಕ ಬಿಜೆಪಿ, ಜೆಡಿಎಸ್​ನವರು ವೋಟ್ ಡಿಲೀಟ್ ಮಾಡಿದ್ದಾರೆ ಅಂತಾ ಕಾಂಗ್ರೆಸ್​​ ಗಂಭೀರ ಆರೋಪ ಮಾಡಿದ್ದಾರೆ. ಮೊನ್ನೆಯಷ್ಟೆ ಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಆಯೋಗಕ್ಕೆ ದೂರು ಕೊಡಲಾಗಿತ್ತು. ಇದೀಗ ಕಾಂಗ್ರೆಸ್​ ಆರೋಪಕ್ಕೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ಕೊಟ್ಟಿದೆ. ಇಂದು ಸುದ್ದಿಗೋಷ್ಠಿ ಮಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಫಾರ್ಮ್​ 7 ಸೇರಿದಂತೆ ಪ್ರತಿಯೊಂದಕ್ಕೂ ದಾಖಲೆ ಸಮೇತ ಸ್ಪಷ್ಟನೆ ಕೊಟ್ಟಿದ್ದಾರೆ.

ಫಾರ್ಮ್-7 ಸಲ್ಲಿಸಿದ್ರೆ ಮತದಾರರನ್ನು ತಕ್ಷಣ ಕೈಬಿಡಲ್ಲ: ಫಾರ್ಮ್​-7 ದುರ್ಬಳಕೆ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ
ವಿ. ಅನ್ಬುಕುಮಾರ್ Image Credit source: tv9 kannada
ಅರುಣ್ ಕುಮಾರ್​ ಆರ್​.
| Edited By: |

Updated on: Oct 05, 2026 | 4:18 PM

Share

ಮುಖ್ಯಾಂಶಗಳು

  • ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ
  • ಕಾಂಗ್ರೆಸ್​ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ
  • ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ ಜಾರಿ

ಬೆಂಗಳೂರು, ಅಕ್ಟೋಬರ್​​ 05: ರಾಜ್ಯ ರಾಜಕಾರಣದಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ಬಿರುಗಾಳಿ ಎಬ್ಬಿಸಿದೆ. ಬಲ್ಕ್ ಆಗಿ ಫಾರ್ಮ್​ 7 ಹಂಚುವ ಮೂಲಕ ಬಿಜೆಪಿ, ಜೆಡಿಎಸ್​ನವರು ವೋಟ್ ಡಿಲೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಗಂಭೀರ ಆರೋಪ ಮಾಡಿದ್ದರು. ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್​ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ಕೂಡ ಮಾಡಿದ್ದರು. ಕಾಂಗ್ರೆಸ್​ನ ಆರೋಪಗಳಿಗೆ ಇದೀಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್​ ಆರೋಪದ ಬಗ್ಗೆ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟನೆ 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ‘ಒಂದು ದಿನಕ್ಕೆ 10 ಫಾರ್ಮ್ ಕೊಡಬಹುದು. ಬಿಎಲ್​ಎಗಳು ಒಟ್ಟು 50 ಫಾರ್ಮ್ ಕೊಡಬಹುದು. ಇದಕ್ಕೂ ಮೀರಿ ಫಾರ್ಮ್ ಬಂದರೆ ಇಆರ್​ಒ ನಿರ್ಧಾರ ಮಾಡುತ್ತಾರೆ. ಅದಕ್ಕಿಂತ ಹೆಚ್ಚು ಫಾರ್ಮ್ ಕೊಟ್ಟರೇ ಅಥವಾ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದರೆ ಕ್ರಮ ಕೈಗೊಳ್ಳಬಹುದು. ಆದರೆ ಫಾರ್ಮ್-7 ಸಂಬಂಧ ಈವರೆಗೆ ಯಾವುದೇ ಕೇಸ್​ ದಾಖಲಾಗಿಲ್ಲ. ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದರೆ ಮೊದಲಿಗೆ ನೋಟಿಸ್ ನೀಡಲಾಗುತ್ತದೆ. ಬಳಿಕ ವಿಚಾರಣೆ ನಡೆಸಿದ ನಂತರ ಪಟ್ಟಿಯಿಂದ ಕೈಬಿಡಲಾಗುವುದು’ ಎಂದರು. ಆ ಮೂಲಕ ಫಾರ್ಮ್​​-7 ದುರ್ಬಳಕೆ ಕುರಿತಾಗಿ ಕಾಂಗ್ರೆಸ್​ ಆರೋಪದ ಬಗ್ಗೆ ಅವರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲೂ SIR ಫಾರ್ಮ್-7 ವಿವಾದ: ಮಲ್ಲೇಶ್ವರಂನಲ್ಲಿ ಅಕ್ರಮ ಆರೋಪ, ಇಬ್ಬರ ವಿರುದ್ಧ ಎಫ್​​ಐಆರ್​​

ಇನ್ನು ‘ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ ಜಾರಿ ಆಗಿದೆ. ಈ ಪೈಕಿ 43,55,818 ನೋಟಿಸ್‌ಗಳು ವಿತರಣೆ ಆಗಿದೆ. ಇನ್ನೂ 26,495 ನೋಟಿಸ್‌ಗಳು ವಿತರಣೆ ಬಾಕಿ ಇದೆ. ವಿತರಿಸಿದ ನೋಟಿಸ್‌ ಪೈಕಿ 36,89,063 ಕೇಸ್​​ಗಳ​ವಿಚಾರಣೆ ಪೂರ್ಣಗೊಂಡಿವೆ. ಆಕ್ಷೇಪಣೆ ವಿಲೇವಾರಿಗೆ ಅಕ್ಟೋಬರ್​ 22ರಂದು ಕೊನೆಯ ದಿನಾಂಕ’ ಎಂದು ಅವರು ತಿಳಿಸಿದರು.

LIVE TV

SIR ಮುಗಿದ ಬಳಿಕ ವಿಶೇಷ ಅಭಿಯಾನ ಆರಂಭ

‘ಅರ್ಹರನ್ನು ಮತ್ತೊಮ್ಮೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತೇವೆ. ಈ ಬಗ್ಗೆ ವಿಶೇಷ ಜಾಗೃತಿ ಅಭಿಯಾನ ಮಾಡುತ್ತೇವೆ. ಅರ್ಹ ಮತದಾರರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲ್ಲ. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಕೆಲಸ ಆರಂಭವಾಗಲಿದೆ. ಫಾರ್ಮ್​ ನಂಬರ್ 6ನಲ್ಲಿ ಅಪ್ಲಿಕೇಶನ್ ಹಾಕಬಹುದು’ ಎಂದು ಅವರು ಮಾಹಿತಿ ನೀಡಿದರು.

ಫಾರ್ಮ್ ಸಲ್ಲಿಸಿರುವ ಮಾಹಿತಿ ಹೀಗಿದೆ 

  • ಬೆಂಗಳೂರಿನಲ್ಲಿ 1 ಲಕ್ಷ 10 ಸಾವಿರದ 594 ಫಾರ್ಮ್ 6 ಸಲ್ಲಿಸಲಾಗಿದೆ.
  • ಬೆಂಗಳೂರು ಉತ್ತರ 57111 ಹಾಗೂ ಬೆಂಗಳೂರು ದಕ್ಷಿಣ 40050
  • ಬೆಂಗಳೂರು ಕೇಂದ್ರದಲ್ಲಿ 42 ಸಾವಿರದ 83 ಫಾರ್ಮ್ 6 ಸಲ್ಲಿಸಲಾಗಿದೆ.
  • ಬೆಂಗಳೂರು ನಗರದಲ್ಲಿ ಈವರೆಗೆ 1401 ಫಾರ್ಮ್ 6A ಸಲ್ಲಿಸಲಾಗಿದೆ.
  • ಬೆಂಗಳೂರು ಉತ್ತರ 790 ಮತ್ತು ಬೆಂಗಳೂರು ದಕ್ಷಿಣದಲ್ಲಿ 380 ಫಾರ್ಮ್ 6A ಸಲ್ಲಿಸಲಾಗಿದೆ.
  • ಬೆಂಗಳೂರು ಕೇಂದ್ರದಲ್ಲಿ ಈವರೆಗೆ 360 ಫಾರ್ಮ್ 6A ಸಲ್ಲಿಸಲಾಗಿದೆ.
  • ಬೆಂಗಳೂರು ನಗರದಲ್ಲಿ ಈವರೆಗೂ ಒಟ್ಟು 3365 ಫಾರ್ಮ್ 7 ಸಲ್ಲಿಕೆ ಆಗಿದೆ.
  • ಬೆಂಗಳೂರು ಉತ್ತರ 1842 ಮತ್ತು ಬೆಂಗಳೂರು ದಕ್ಷಿಣ 1707 ಫಾರ್ಮ್ 7 ಸಲ್ಲಿಕೆ.
  • ಬೆಂಗಳೂರು ಕೇಂದ್ರದಲ್ಲಿ ಈವರೆಗೂ 1659 ಫಾರ್ಮ್ 7 ಸಲ್ಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅರುಣ್ ಕುಮಾರ್​ ಆರ್​.
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More