ಬೆಂಗಳೂರು: ನಾಡಿನೆಲ್ಲೇಡೆ ಇಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಂತೆ ಈ ಸಂಭ್ರಮಾಚರಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದಾರೆ. ಬಿಡದಿ ತೋಟದ ಮನೆಯಲ್ಲಿ ಕುಮಾರಸ್ವಾಮಿ ಗಣೇಶ ಹಬ್ಬ ಆಚರಣೆ ಮಾಡುತ್ತಿದ್ದು, ಗಣೇಶ ಹಬ್ಬ(Ganesha Chaturthi 2021) ಹಿನ್ನೆಲೆ ಗಣಪತಿ ವೇಷಧರಿಸಿ ಬಾಲಕ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಆಗಮಿಸಿದ್ದಾನೆ. ಗಣೇಶ ವೇಷಧಾರಿ ಬಾಲಕನ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಕೆಲ ಕಾಲ ಮಾತನಾಡಿದ್ದಾರೆ.
ಗಣೇಶ ಹಬ್ಬದ ಹಿನ್ನಲೆ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ
ಹಬ್ಬಕ್ಕೆ ಹೂವು, ಹಣ್ಣು ಸೇರಿದಂತೆ ಇತರೆ ವಸ್ತುಗಳ ದರ ಏರಿಕೆಯಾಗಿದೆ. ದರ ಏರಿಕೆ ಮಧ್ಯೆಯೂ ಅಗತ್ಯ ವಸ್ತುಗಳ ಖರೀದಿಗೆ ಜನ ಮುಂದಾಗಿದ್ದಾರೆ. ಇಂದು ಕೆ. ಆರ್. ಮಾರುಕಟ್ಟೆಯಲ್ಲಿನ ಹೂವಿನ ಬೆಲೆ ಹೀಗಿವೆ.
ಸೇವಂತಿಗೆ (ಒಂದು ಮಾರು)70-90 ರೂ.
ಸುಗಂಧರಾಜ ಹಾರ 130-170 ರೂ.
ಮಲ್ಲಿಗೆ ಹೂವು (ಮೊಳ) 40-50 ರೂ.
ಮಾವಿನ ಸೊಪ್ಪು (1 ಕಟ್ಟು) 20-25 ರೂ.
ಬಾಳೆ ಕಂದು ಜೋಡಿ 50-80 ರೂ.
ಹಾಸನ: ಕೊವಿಡ್ ನಿಯಮ ಮರೆತು ಹಬ್ಬದ ಖರೀದಿಗೆ ಮುಗಿಬಿದ್ದ ಜನರು
ಹಾಸನದಲ್ಲಿ ಗಣೇಶ ಚತುರ್ಥಿ ಸಡಗರ ಜೋರಾಗಿದ್ದು, ಕೊವಿಡ್ ನಿಯಮ ಮರೆತು ಹಬ್ಬದ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಯಲ್ಲಿ ಭಾಗಿಯಾಗಿದ್ದಾರೆ. ಕೊರೊನಾ ನಿಯಮ ಪಾಲಿಸಿ ಹಬ್ಬ ಆಚರಣೆಗೆ ಅನುಮತಿ ನೀಡಿರುವ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ.
ಬೆಳಗಾವಿಯಲ್ಲಿ ಹೂವು ಖರೀದಿಗೆ ಮುಗಿಬಿದ್ದಿರುವ ಜನ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನೆಹರು ನಗರದಲ್ಲಿರುವ ಪುಷ್ಪ ಖರೀದಿ ಮಾರುಕಟ್ಟೆಯಲ್ಲಿ ಜನಸಾಗರ ನಿರ್ಮಾಣವಾಗಿದೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಜನರು ನಿರ್ಲಕ್ಷ್ಯ ತೋರಿದ್ದಾರೆ. ವ್ಯಾಪಾರಸ್ಥರು ಕೂಡ ಕೊವಿಡ್ ನಿಯಮ ಮರೆತು ವಹಿವಾಟು ನಡೆಸುತ್ತಿದ್ದಾರೆ. ಆದರೆ ಮಾರುಕಟ್ಟೆಯತ್ತ ಪೊಲೀಸರು, ಮಹಾನಗರ ಪಾಲಿಕೆ ಸಿಬ್ಬಂದಿಗಳು ಮಾತ್ರ ಭೇಟಿ ನೀಡಿಲ್ಲ.
ಜೆಪಿ ನಗರದ ಸತ್ಯಗಣಪತಿ ದೇವಸ್ಥಾನದಲ್ಲಿ ವಿಶೇಷ ಆಲಂಕಾರ ಹಾಗೂ ಪೂಜೆ
ಇವತ್ತು ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ಜೆಪಿ ನಗರದ ಸತ್ಯಗಣಪತಿ ದೇವಸ್ಥಾನದಲ್ಲಿ ವಿಶೇಷ ಆಲಂಕಾರ ಹಾಗೂ ಪೂಜೆ ನಡೆಸಲಾಗಿದೆ. ಶ್ರೀಸತ್ಯ ಗಣಪತಿ ದೇವಸ್ಥಾನದಲ್ಲಿ ಮುಸುಕಿನ ಜೋಳ, ಸೊಪ್ಪುಗಳನ್ನು ಹಾಗೂ ಹೂವುಗಳನ್ನು ಬಳಸಿ ಗಣೇಶನಿಗೆ ಅಲಂಕಾರ ಮಾಡಲಾಗಿದೆ. ದೇವರ ದರ್ಶನಕ್ಕೆ ಭಕ್ತ ಸಮೂಹ ಆಗಮಿಸುತ್ತಿದ್ದು, ಭಕ್ತಾಧಿಗಳ ಮನಸೆಳೆಯಲು ದೇವಾಲಯ ಸಜ್ಜಾಗಿದೆ.
ಇದನ್ನೂ ಓದಿ:
ಗಣೇಶ ಹಬ್ಬದ ಮಾರ್ಗಸೂಚಿಗೆ ಅಸಮಾಧಾನ; ಬಿಬಿಎಂಪಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ
Published On - 8:38 am, Fri, 10 September 21