ಮಾಜಿ ಸಚಿವ ಹಾಲಪ್ಪ ಆಚಾರ್ ಗನ್​ಮ್ಯಾನ್​ನಿಂದ ಲಕ್ಷಾಂತರ ರೂ. ವಂಚನೆ, ಪ್ರಕರಣ ದಾಖಲು

| Updated By: Rakesh Nayak Manchi

Updated on: Sep 02, 2023 | 10:16 AM

ಟೆಂಡರ್ ಕೊಡಿಸುತ್ತೇನೆ ಎಂದು ಹೇಳಿ ಹಣ ಪಡೆದು ವ್ಯಕ್ತಿಯೊಬ್ಬರಿಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್ ಮ್ಯಾನ್​ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 30 ಕೋಟಿ ವೆಚ್ಚದ ಟೆಂಡರ್​ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದ ಗನ್​ಮ್ಯಾನ್, ಅಡ್ವಾನ್ಸ್ ಆಗಿ 10 ಲಕ್ಷ ರೂ. ಪಡೆದುಕೊಂಡಿದ್ದಾಗಿ ಆರೋಪಿಸಲಾಗಿದೆ.

ಮಾಜಿ ಸಚಿವ ಹಾಲಪ್ಪ ಆಚಾರ್ ಗನ್​ಮ್ಯಾನ್​ನಿಂದ ಲಕ್ಷಾಂತರ ರೂ. ವಂಚನೆ, ಪ್ರಕರಣ ದಾಖಲು
ವಂಚನೆ ಆರೋಪ ಸಂಬಂಧ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್​ಮ್ಯಾನ್ ವಿರುದ್ಧ ಎಫ್​ಐಆರ್ ದಾಖಲು
Follow us on

ಬೆಂಗಳೂರು, ಸೆ.2: ಮಾಜಿ ಸಚಿವ ಹಾಲಪ್ಪ ಆಚಾರ್ (Halappa Achar) ಗನ್​ಮ್ಯಾನ್​ನಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಸಂಬಂಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಯಕೊಂಡ ಗ್ರಾ.ಪಂ. ಟೆಂಡರ್ ಕೊಡಿಸುತ್ತೇನೆ ಅಂತಾ ನಂಬಿಸಿ 30 ಕೋಟಿ ವೆಚ್ಚದ ಟೆಂಡರ್​ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದ ಗನ್ ಮ್ಯಾನ್ ಅಡ್ವಾನ್ಸ್ 10 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾಗಿ ದೂರು ದಾಖಲಿಸಲಾಗಿದೆ.

ಹಾಲಪ್ಪ ಆಚಾರ್ ಗನ್​ಮ್ಯಾನ್​ ರಾಘವೇಂದ್ರ ಎಂಬವರು ಮಾಯಕೊಂಡ ಗ್ರಾಮ ಪಂಚಾಯತ್ ಟೆಂಡರ್ ಕೊಡಿಸುತ್ತೇನೆ ಅಂತಾ ಹೇಳಿ ಹೆಚ್.ರಾಜು ನಾಯ್ಕ್ ಅವರಿಗೆ ನಂಬಿಸಿದ್ದಾರೆ. ಅಲ್ಲದೆ, 30 ಕೋಟಿ ವೆಚ್ಚದ ಟೆಂಡರ್​ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದ ರಾಘವೇಂದ್ರ, ರಾಜು ನಾಯ್ಕ್ ಅವರಿಂದ ಅಡ್ವಾನ್ಸ್ ಆಗಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.

ಇದನ್ನೂ ಓದಿ: ಬ್ಯಾಂಕ್ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ

ಬಳಿಕ ಟೆಂಡರ್ ಕೊಡಿಸದೆ ಸತಾಯಿಸ್ತಿದ್ದ ಹಾಲಪ್ಪ ಆಚಾರ್ ಗನ್​ಮ್ಯಾನ್ ರಾಘವೇಂದ್ರ, ಹಣ ವಾಪಸ್ ಕೇಳಿದ್ದಕ್ಕೆ ಕೇವಲ 4 ಲಕ್ಷ ಅಷ್ಟೇ ನೀಡಿದ್ದಾರೆ. ಇನ್ನುಳಿದ 6 ಲಕ್ಷ ಹಣ ನೀಡದೇ ವಂಚಿಸಿರುವ ಗನ್​ಮ್ಯಾನ್ ರಾಘವೇಂದ್ರ ವಿರುದ್ಧ ರಾಜು ನಾಯ್ಕ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್​ಐಆರ್ ದಾಲಿಸಿಕೊಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Sat, 2 September 23