AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುಕೋಟಿ ರೂಪಾಯಿ ಅವ್ಯವಹಾರ ಆರೋಪ; ಚೀನಾ ಮೂಲದ ಖಾಸಗಿ ಕಂಪೆನಿ ನಿರ್ದೇಶಕನನ್ನು ಬಂಧಿಸಿದ ಇಡಿ

2009ರಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸ್​ಟಿಸಿಎಲ್ ಕಂಪನಿಗೆ ನಷ್ಟವಾಗಿದ್ದಾಗಿ ಆರೋಪ ಇತ್ತು. 249.572 US ಡಾಲರ್ ನಷ್ಟವಾಗಿದ್ದಾಗಿ ಆರೋಪವಿತ್ತು. 2019ರಲ್ಲಿ ಪ್ರಕರಣ ದಾಖಲಿಸಿಕೊಂಡು ಇಡಿಯಿಂದ ತನಿಖೆ ನಡೆಸಲಾಗಿತ್ತು.

ಬಹುಕೋಟಿ ರೂಪಾಯಿ ಅವ್ಯವಹಾರ ಆರೋಪ; ಚೀನಾ ಮೂಲದ ಖಾಸಗಿ ಕಂಪೆನಿ ನಿರ್ದೇಶಕನನ್ನು ಬಂಧಿಸಿದ ಇಡಿ
ಸಾಂಕೇತಿಕ ಚಿತ್ರ
TV9 Web
| Updated By: ganapathi bhat|

Updated on: Jan 12, 2022 | 11:06 PM

Share

ಬೆಂಗಳೂರು: ಬಹುಕೋಟಿ ರೂಪಾಯಿ ಅವ್ಯವಹಾರದ ಆರೋಪ ಹಿನ್ನೆಲೆ ಚೀನಾ ಮೂಲದ ಖಾಸಗಿ ಕಂಪನಿ ನಿರ್ದೇಶಕ ಅನೂಪ್ ನಾಗರಾಜಲು ಎಂಬಾತನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಚೀನಾ ಮೂಲದ ಖಾಸಗಿ ಕಂಪನಿ ಹೋವೆಲೈ ಜಿನ್ಸು, ಹಾಂಗ್​​​​ಕಾಂಗ್, ಎಸ್ಎಆರ್, ಕಂಪನಿ ನಿರ್ದೇಶಕ ಸ್ಪೈಸ್ ಟ್ರೇಡಿಂಗ್ ಕಂಪನಿಯಿಂದ ಉತ್ಪನ್ನ ಖರೀದಿಸಿ ಉತ್ಪನ್ನಗಳಿಗೆ ಹಣ ಹಿಂತಿರುಗಿಸದೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ. 2009ರಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸ್​ಟಿಸಿಎಲ್ ಕಂಪನಿಗೆ ನಷ್ಟವಾಗಿದ್ದಾಗಿ ಆರೋಪ ಇತ್ತು. 249.572 US ಡಾಲರ್ ನಷ್ಟವಾಗಿದ್ದಾಗಿ ಆರೋಪವಿತ್ತು. 2019ರಲ್ಲಿ ಪ್ರಕರಣ ದಾಖಲಿಸಿಕೊಂಡು ಇಡಿಯಿಂದ ತನಿಖೆ ನಡೆಸಲಾಗಿತ್ತು.

ಅನೂಪ್ ಸಂಸ್ಥೆಗೆ ಸೇರಿದ ಬಳ್ಳಾರಿ, ಬೆಂಗಳೂರು, ದೆಹಲಿ, ಪಂಜಾಬ್, ಮಹಾರಾಷ್ಟ್ರ, ಗುಜರಾತ್​ನಲ್ಲಿದ್ದ ಕಂಪನಿ ಆಸ್ತಿ ಜಪ್ತಿ ಮಾಡಲಾಗಿದೆ. 187.67 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿತ್ತು. ಪ್ರಕರಣ ಸಂಬಂಧ ಸಿಬಿಐ ಕೂಡ ಅನೂಪ್​ನನ್ನ ಬಂಧಿಸಿತ್ತು. ಜಾಮೀನಿನ‌ ಮೇಲೆ ಹೊರಗೆ ಬಂದು ತಲೆಮರೆಸಿಕೊಂಡಿದ್ದ ಅನೂಪ್ ಬಳಿಕ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. PMNL ವಿಶೇಷ ನ್ಯಾಯಾಲಯ​ ಆರೋಪಿ ಅನೂಪ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಸದ್ಯ ಅನೂಪ್ ಬಂಧಿಸಿರುವ ಇಡಿ ವಿಚಾರಣೆ ಮುಂದುವರಿಸಿದೆ.

ದೇವಸ್ಥಾನದ ಆಸ್ತಿ ವಿಚಾರವಾಗಿ 2 ಗುಂಪುಗಳ ನಡುವೆ ಘರ್ಷಣೆ

ದೇವಸ್ಥಾನದ ಆಸ್ತಿ ವಿಚಾರವಾಗಿ 2 ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ದಂಡಗುಂಡದಲ್ಲಿ ನಡೆದಿದೆ. ದಂಡಗುಂಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಡಿದಾಟ ನಡೆದಿದೆ. ಕಳೆದ 2 ದಿನಗಳ ಹಿಂದೆ ನಡೆದ ಗಲಾಟೆ ವಿಡಿಯೋ ವೈರಲ್​​ ಆಗಿದೆ. ಗಲಾಟೆ ನಂತರ ಜನರು ರಾಜಿ ಪಂಚಾಯಿತಿ ಮಾಡಿಕೊಂಡಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ದಂಡಗುಂಡ ಗ್ರಾಮಸ್ಥರು ಯಾವುದೇ ದೂರು ನೀಡಿಲ್ಲ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ತಾ.ಪಂ. ಮಾಜಿ ಉಪಾಧ್ಯಕ್ಷನ ಸಹೋದರನ ಬರ್ಬರ ಹತ್ಯೆ

ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷನ ಸಹೋದರನ ಬರ್ಬರ ಹತ್ಯೆಯಾದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್​ ಬಳಿ ನಡೆದಿದೆ. ತಾ.ಪಂ. ಮಾಜಿ ಉಪಾಧ್ಯಕ್ಷ ಶಿವರಾಜ್​ ಸಹೋದರ 37 ವರ್ಷದ ಭೀಮಣ್ಣ ಬರ್ಬರ ಹತ್ಯೆಯಾದ ದುರ್ದೈವಿ. ಭೀಮಣ್ಣ, ದೇವದುರ್ಗ ತಾಲೂಕಿನ ಗಲಗ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ವಿವಾಹಿತೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದನೆಂದು ಆರೋಪ ಕೇಳಿಬಂದಿದೆ. ಇತ್ತೀಚೆಗೆ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದ ಭೀಮಣ್ಣನನ್ನು ಹಿಂದಿರುಗಿದ ಕೆಲ ದಿನಗಳ ನಂತರ ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆ ಭೀಮಣ್ಣ ಕೊಚ್ಚಿ ಕೊಲೆಗೈದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

5ನೇ ಮದುವೆಗೆ ಅಡ್ಡಿಯಾಗುತ್ತಿದ್ದ 4ನೇ ಪತ್ನಿ ಹತ್ಯೆಗೆ ಪತಿ ಯತ್ನ

5ನೇ ಮದುವೆಗೆ ಅಡ್ಡಿಯಾಗುತ್ತಿದ್ದ 4ನೇ ಪತ್ನಿ ಹತ್ಯೆಗೆ ಪತಿ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಪಟ್ಟಣದಲ್ಲಿ ನಡೆದಿದೆ. ಪತ್ನಿ ಕ್ಷೇತ್ರಾ(35)ಳನ್ನು ಹಿಂಬದಿಯಿಂದ ಮಚ್ಚಿನಿಂದ ಪತಿ ಕೊಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಪತಿ ಸುಗುಣ ವಿರುದ್ಧ ಪತ್ನಿ ಕ್ಷೇತ್ರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಗಾಂಜಾ ಮಾರಾಟ; ದೆಹಲಿ ಮೂಲದ ವ್ಯಕ್ತಿ ಬಂಧನ

ಉತ್ತರ ತಾಲೂಕಿನ ಮೇದರಹಳ್ಳಿಯಲ್ಲಿ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಗಾಂಜಾ ಮಾರುತ್ತಿದ್ದ ದೆಹಲಿ ಮೂಲದ ಅರ್ಜುನ್ ಸಿಂಗ್​ನನ್ನ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿತನಿಂದ 1 ಕೆಜಿಗೂ ಹೆಚ್ಚು ಗಾಂಜಾ ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆ: ಬ್ಯಾರಲ್ ಸ್ಫೋಟಗೊಂಡು ಮೂವರು ಕಾರ್ಮಿಕರಿಗೆ ಗಾಯ

ಬ್ಯಾರಲ್ ಸ್ಫೋಟಗೊಂಡು ಮೂವರು ಕಾರ್ಮಿಕರಿಗೆ ಗಾಯವಾದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಸಮೀಪ ಇರುವ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಕೇದಾರನಾಥ ಸಕ್ಕರೆ ಕಾರ್ಖಾನೆ ನೀರಿನ ಘಟಕದಲ್ಲಿ ಘಟನೆ‌‌ ನಡೆದಿದೆ. ಬ್ಯಾರಲ್​ನಲ್ಲಿ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವಾಗ ಸ್ಫೋಟವಾಗಿದೆ. ಈ ವೇಳೆ ಮೂವರು ಕಾರ್ಮಿಕರಿಗೆ ದಿಢೀರ್ ಬೆಂಕಿ ತಗುಲಿದೆ. ಗಾಯಾಳುಗಳು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಚಿವ ಮುರುಗೇಶ್ ನಿರಾಣಿಗೆ ಸೇರಿದ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ನಡೆದಿದೆ.

ಇತರ ಅಪರಾಧ, ಅಪಘಾತ ಪ್ರಕರಣಗಳು

ಹಾವೇರಿ: ರಾಣೆಬೆನ್ನೂರು ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿ ವಿದ್ಯುತ್ ತಂತಿ ಹರಿದು ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ಬಸವನಗೌಡ ಕಲ್ಲಪ್ಪಗೌಡರ ಎಂಬ ರೈತನಿಗೆ ಸೇರಿದ ನಾಲ್ಕು ಎಕರೆಯಲ್ಲಿದ್ದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ.

ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಹರಿದು ರಮೇಜಾ ನದಾಫ್(40) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಾಬಾದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಬೀದರ್: ಮೊಬೈಲ್ ಡಿಸ್‌ಪ್ಲೇ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 15 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಡಿಸ್​ಪ್ಲೇ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಲೇಡಿಯ ಬಂಧನ

ಇದನ್ನೂ ಓದಿ: ವಿಶ್ವದಲ್ಲಿ ಒಮಿಕ್ರಾನ್​​ನಿಂದ ಈವರೆಗೆ 115 ಜನ ಸಾವು, ಭಾರತದಲ್ಲಿ ಒಂದು ಸಾವು ಸಂಭವಿಸಿದೆ: ಕೇಂದ್ರ ಆರೋಗ್ಯ ಸಚಿವಾಲಯ