ಮಾ.28 ರಿಂದ ಏ.11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಪ್ರಯಾಣಕ್ಕೆ ಅವಕಾಶ

| Updated By: preethi shettigar

Updated on: Mar 18, 2022 | 7:17 PM

ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದ್ದು, ಪರೀಕ್ಷಾ ಕೇಂದ್ರದವರೆಗೆ ನಿಗಮದ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಮಾ.28 ರಿಂದ ಏ.11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಪ್ರಯಾಣಕ್ಕೆ ಅವಕಾಶ
ಕೆಎಸ್​ಆರ್​ಟಿಸಿ ಬಸ್
Follow us on

ಬೆಂಗಳೂರು: 2021-22ನೇ ಸಾಲಿನ ಎಸ್​ಎಸ್​ಎಲ್​ಸಿ(SSLC) ಪರೀಕ್ಷೆ ಮಾರ್ಚ್​ 28ರಿಂದ ಏಪ್ರಿಲ್​ 11ರವರೆಗೆ ನಡೆಯಲಿದ್ದು, ಪರೀಕ್ಷೆ(Exam) ಬರೆಯುವ ವಿದ್ಯಾರ್ಥಿಗಳ(Students) ಹಿತದೃಷ್ಟಿಯಿಂದ  ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಅವಕಾಶ ಮಾಡಿಕೊಟ್ಟಿದೆ. ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದ್ದು, ಪರೀಕ್ಷಾ ಕೇಂದ್ರದವರೆಗೆ ನಿಗಮದ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಹೋಗುವಾಗ ಹಾಗೂ ಹಿಂತಿರುಗುವಾಗ ಕಡ್ಡಾಯವಾಗಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ. ಹೊರವಲಯ ಸಾಮಾನ್ಯ ಹಾಗೂ ವೇಗದೂತ ಬಸ್​ಗಳಲ್ಲು ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರದ ಬಳಿ ಬಸ್ ಹತ್ತಲು ಹಾಗೂ ಇಳಿಯಲು ಕೂಡ ಅವಕಾಶ ಮಾಡಲಾಗುವುದು. ಈಗಾಗಲೇ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಬಸ್ ಚಾಲಕ ನಿರ್ವಾಹಕರುಗಳಿಗೆ ಸೂಚಿಸಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರದ ಬಳಿಯೇ ನಿಲುಗಡೆಗೆ ಸೂಚಿಸಲಾಗಿದೆ ಎಂದು ಕೆಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ

ಎಸ್ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜ.6 ಸಂಜೆ ಪ್ರಕಟಿಸಿತ್ತು. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್​​ 28ರಿಂದ ಏಪ್ರಿಲ್​ 11ರವರೆಗೆ ಪರೀಕ್ಷೆ ನಡೆಯಲಿದೆ. ಜನವರಿ 14ರೊಳಗೆ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮಾರ್ಚ್​ 28ರಂದು ಪ್ರಥಮ ಭಾಷೆ, ಮಾರ್ಚ್ 30ರಂದು ದ್ವಿತೀಯ ಭಾಷೆ, ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್, ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6 ಸಮಾಜ ವಿಜ್ಞಾನ, ಏಪ್ರಿಲ್ 6 ತೃತೀಯ ಭಾಷೆ, ಏಪ್ರಿಲ್ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ / ಹಿಂದೂಸ್ತಾನಿ ಸಂಗೀತದ ಪರೀಕ್ಷೆಗಳು ನಡೆಯಲಿವೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೂ ಪ್ರಶ್ನಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ. ವೇಳಾಪಟ್ಟಿಗೆ ಅಭ್ಯರ್ಥಿಗಳು / ಪೋಷಕರು ಆಕ್ಷೇಪಣೆ ಸಲ್ಲಿಸಲು ಜನವರಿ 6- 14 ರವರೆಗೆ ಅವಕಾಶ ಇದೆ. ಆಕ್ಷೇಪಣೆಗಳಿದ್ದಲ್ಲಿ ಮಂಡಳಿಯ ವೆಬ್​ಸೈಟ್​ನಲ್ಲಿ ಸಲ್ಲಿಸಬಹುದು.

ಇದನ್ನೂ ಓದಿ:
IGM Recruitment 2022: ಐಜಿಎಂ ಹುದ್ದೆಗಳ ನೇಮಕಾತಿ: ಎಸ್​ಎಸ್​ಎಲ್​ಸಿ ಪಾಸಾದವರಿಗೂ ಅವಕಾಶ

ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯೇ ಅಂತಿಮವಾಗುವ ಸಾಧ್ಯತೆ!

Published On - 6:35 pm, Fri, 18 March 22