AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ವತಿಯಿಂದ ಯುವಕ-ಯುವತಿಯರಿಗೆ ಉಚಿತ ಡ್ರೈವಿಂಗ್ ಕ್ಲಾಸ್, ನೂರಾರು ಜನರಿಗೆ ಸಹಾಯಕವಾಯ್ತು ಈ ಯೋಜನೆ

ಇತ್ತೀಚೆಗೆ ಡ್ರೈವಿಂಗ್ ಸ್ಕೂಲ್ ಗಳು ಡ್ರೈವಿಂಗ್ ಹೇಳಿಕೊಡಲು ಒನ್ ಟೂ ಡಬಲ್ ದರ ಪೀಕುತ್ತಿದ್ದಾರೆ. ಇದರಿಂದ ಕಂಗಲಾಗಿದ್ದ ಯುವಕ ಯುವತಿಯರಿಗೆ ಸರ್ಕಾರ ಉಚಿತವಾಗಿ ಡ್ರೈವಿಂಗ್ ಹೇಳಿಕೊಡಲು ಮುಂದಾಗಿದೆ. ಅದು ಬಸ್ಸು ಮತ್ತು ಕಾರುಗಳನ್ನು ಓಡಿಸಲು ಟ್ರೈನಿಂಗ್ ನೀಡಲು ಮುಂದಾಗಿದೆ.

ಬಿಎಂಟಿಸಿ ವತಿಯಿಂದ ಯುವಕ-ಯುವತಿಯರಿಗೆ ಉಚಿತ ಡ್ರೈವಿಂಗ್ ಕ್ಲಾಸ್, ನೂರಾರು ಜನರಿಗೆ ಸಹಾಯಕವಾಯ್ತು ಈ ಯೋಜನೆ
ಬಿಎಂಟಿಸಿ ವತಿಯಿಂದ ಉಚಿತ ಡ್ರೈವಿಂಗ್ ಕ್ಲಾಸ್
Kiran Surya
| Edited By: |

Updated on: Feb 15, 2024 | 1:48 PM

Share

ಬೆಂಗಳೂರು, ಫೆ.15: ಖಾಸಗಿ ಡ್ರೈವಿಂಗ್ ಸ್ಕೂಲ್ (Free Driving Class) ಗಳಿಗೆ ಸೆಡ್ಡು ಹೊಡೆಯಲು ಸಾರಿಗೆ ಇಲಾಖೆ ಮುಂದಾಗಿದ್ದು ಬಿಎಂಟಿಸಿಯಿಂದ (BMTC) ಯುವಕ ಯುವತಿಯರಿಗೆ ಉಚಿತ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ಕ್ಲಾಸ್ ನಡೆಸಲು ಮುಂದಾಗಿದೆ. ಮೂವತ್ತು ದಿನ ಉಚಿತವಾಗಿ ಕಾರು, ಬಸ್ ಡ್ರೈವಿಂಗ್ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನ ವಡ್ಡರಹಳ್ಳಿಯ (Vaddarahalli) 22 ಎಕರೆ ಪ್ರದೇಶದಲ್ಲಿ ಈ ಕ್ಲಾಸ್‌ ನಡೆಯಲಿದೆ. ಬೇರೆ ಊರಿನಿಂದ ಬರುವವರಿಗೆ ಉಚಿತವಾಗಿ ಊಟ-ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ. ಮೂವತ್ತು ದಿನ ತರಬೇತಿ ಮುಗಿದ ನಂತರ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಡಲಾಗುತ್ತೆ.

ಬಡ ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ಜಾರಿ ಮಾಡಲಾಗಿದ್ದು, ಯುವತಿಯರಿಗೆ ಕೂಡ ಚಾಲನಾ ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಲು ಇಷ್ಟ ಇದ್ದರೆ ಅದಕ್ಕೂ ಕೂಡ ಚಿಂತನೆ ನಡೆದಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಯುವಕ, ಯುವತಿಯರು ತರಬೇತಿ ಪಡೆಯಬಹುದು ಎಂದು ಬಿಎಂಟಿಸಿಯ ಅಧಿಕಾರಿ ತಿಳಿಸಿದ್ದಾರೆ.

ಬಿಎಂಟಿಸಿಯ ವಡ್ಡರಹಳ್ಳಿಯ ವಾಹನ ತರಬೇತಿ ಕೇಂದ್ರದಲ್ಲಿ ಸರ್ಕಾರದ ಕೆಲ ಯೋಜನೆಗಳ ಅಡಿಯಲ್ಲಿ ಯುವಕ ಯುವತಿಯರಿಗೆ ಉಚಿತವಾಗಿ ಡ್ರೈವಿಂಗ್ ಕ್ಲಾಸ್ ಹೇಳಿಕೊಡಲಾಗ್ತಿದೆ. ಮೂವತ್ತು ದಿನಗಳ ಕಾಲ ಹೆವಿ ಪ್ಯಾಸೆಂಜರ್ ವೆಹಿಕಲ್ ಮತ್ತು ಲೈಟ್ ಮೋಟಾರು ವೆಹಿಕಲ್ ಗಳ ಡ್ರೈವಿಂಗ್ ಹೇಳಿ ಕೊಡಲಾಗುತ್ತದೆ. ನೆಲಮಂಗಲ ಆರ್ಟಿಓ ದಲ್ಲಿ ಡಿಎಲ್ ಮಾಡಿಸಿಕೊಡಲಾಗುತ್ತದೆ. ರಾಜ್ಯದ ಯಾವುದೇ ಸ್ಥಳದ ಯುವಕ ಯುವತಿಯರು ಡ್ರೈವಿಂಗ್ ತರಬೇತಿ ಪಡೆಯಬಹುದು. ಮೊದಲ ಮತ್ತು ಎರಡನೇ ವಾರ ತರಬೇತಿ ಕೇಂದ್ರದಲ್ಲಿ, ಮೂರನೇ ವಾರ ವಿಲೇಜ್ ರೋಡ್ ನಲ್ಲಿ ಕೊನೆಯ ವಾರ ಹೈವೇ ಮತ್ತು ಟ್ರಾಫಿಕ್ ನಲ್ಲಿ ಟ್ರೈನಿಂಗ್ ನೀಡಲಾಗುತ್ತದೆ. ಮೂವತ್ತು ದಿನದೊಳಗೆ ಬಿಎಂಟಿಸಿಯಲ್ಲಿ 25 ವರ್ಷಗಳ ಅನುಭವವಿರುವ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಪಡೆದಿರುವ ಮಹಿಳಾ ಮತ್ತು ಪುರುಷ ಡ್ರೈವರ್ ಗಳಿಂದ ಯುವಕ ಯುವತಿಯರಿಗೆ ಡ್ರೈವಿಂಗ್ ಹೇಳಿಕೊಡಲಾಗುತ್ತದೆ.

ಇದನ್ನೂ ಓದಿ: ರಾಜ್ಯದ ರೈತರು ಪೊಲೀಸರ ವಶಕ್ಕೆ: ಮಧ್ಯಪ್ರದೇಶ ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ಡ್ರೈವಿಂಗ್ ಕ್ಲಾಸ್ ಸೇರೋದು ಹೇಗೆ?

ಕೇವಲ ಡ್ರೈವಿಂಗ್ ಕ್ಲಾಸ್ ಮಾತ್ರ ಹೇಳಿಕೊಡೋದಿಲ್ಲ ಟ್ರಾಫಿಕ್ ಪೋಲಿಸರು, ಆರ್ಟಿಓ ಅಧಿಕಾರಿಗಳಿಂದ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ತರಬೇತಿ, ಟ್ರಾಫಿಕ್ ಟಿಪ್ಸ್ ನೀಡಲಾಗುತ್ತೆ. ಈ ಡ್ರೈವಿಂಗ್ ಸ್ಕೂಲ್ ಸೇರಲು ಯುವಕ ಯುವತಿಯರು ಶಾಂತಿನಗರದ ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ರೆ ನಿಮಗೆ ತರಬೇತಿ ನೀಡಲಾಗುತ್ತದೆ. 2023 – 24 ನೇ ಸಾಲಿನಲ್ಲಿ 970 ಯುವಕ ಯುವತಿಯರಿಗೆ ಡ್ರೈವಿಂಗ್ ಕ್ಲಾಸ್ ಹೇಳಿಕೊಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮೊದಲ ಬ್ಯಾಚ್ ನಲ್ಲಿ ಜನವರಿಯಲ್ಲಿ 104 ಯುವಕ ಯುವತಿಯರು ಉಚಿತವಾಗಿ ತರಬೇತಿ ಪಡೆದು ಡಿಎಲ್ ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಬ್ಯಾಚ್ ನಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದಾರೆ.

ಒಟ್ನಲ್ಲಿ ಡ್ರೈವಿಂಗ್ ಕಳಿತು ಕೆಎಸ್ಆರ್ಟಿಸಿ ಗೋ ಬಿಎಂಟಿಸಿಗೋ ಅಥವಾ ಸರ್ಕಾರದ ಯಾವುದಾರರು ಇಲಾಖೆಗೆ ಅಪ್ಲಿಕೇಶನ್ ಹಾಕಿ ಡ್ರೈವಿಂಗ್ ಕೆಲಸ ಪಡೆಯೋಣ ಅಂದರೆ ಈ ಡ್ರೈವಿಂಗ್ ಸ್ಕೂಲ್ ನವ್ರು ಒನ್ ಟೂ ಡಬಲ್ ಹಣ ಕೇಳುತ್ತಾರೆ. ಹಾಗಾಗಿ ಬಿಎಂಟಿಸಿಯಿಂದ ನೀಡುತ್ತಿರುವ ಈ ಉಚಿತ ಡ್ರೈವಿಂಗ್ ಕ್ಲಾಸ್ ಎಷ್ಟೋ ಬಡ ಯುವಕ ಯುವತಿಯರಿಗೆ ತುಂಬಾ ಸಹಾಯ ಆಗ್ತಿರೋದಂತೊ ಸುಳ್ಳಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್