ಬೆಂಗಳೂರು, ಅಕ್ಟೋಬರ್ 05: ಆಗಾಗ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರು (Bengaluru) ಮಂದಿಗೆ ಶುಕ್ರವಾರ ಸಂಜೆ ವರುಣರಾಯ ತಂಪೆರೆದಿದ್ದಾನೆ. ಶುಕ್ರವಾರ ಸಂಜೆ ಶುರುವಾದ ಮಳೆ (Rain) ಶನಿವಾರ ಬೆಳಗ್ಗೆ 7:30ರವರೆಗೆ ನಗರದ ವಿವಿಧೆಡೆ ಭರ್ಜರಿಯಾಗಿ ಸುರಿದಿದೆ. ಈ ಮೂಲಕ ವಾರದ ಬಳಿಕ ಮತ್ತೆ ಮಳೆರಾಯನ ಆರ್ಭಟ ಬೆಂಗಳೂರಿನಲ್ಲಿ ಮತ್ತೆ ಶುರುವಾಗಿದೆ.
ನಗರದ ಹಲವಡೆ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿನ ಗಿಡ-ಮರಗಳು ಧರಾಶಾಯಿಯಾಗಿದ್ದವು. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಆಫಿಸ್ನಿಂದ ಮನೆಗಳಿಗೆ ತೆರಳುವವರು ಪರದಾಡುವಂತಾಯಿತು. ಜಯನಗರದ 4th ಬ್ಲಾಕ್ ಸುತ್ತಮುತ್ತ ಧರೆಗುರುಳಿದ ರೆಂಬೆ, ಕೊಂಬೆಗಳು ಧರೆಗೆ ಉರಿಳಿದ್ದವು.
ನವರಾತ್ರಿ ಶುಕ್ರವಾರವಾಗಿದ್ದ ಹಿನ್ನೆಲಯಲ್ಲಿ ದೇವಿ ದೇವಸ್ಥಾನಗಳಿಗೆ ತೆರಳುತ್ತಿದ್ದ ಭಕ್ತಾದಿಗಳಿಗೆ ಮಳೆ ಅಡ್ಡಿಯಾಯಿತು. ಉತ್ಸವಗಳು ತಡವಾಗಿ ಆರಂಭವಾದವು. ಭಕ್ತರು ಮಳೆಯಲ್ಲಿ ನೆಂದು ದೇವಸ್ಥಾನಗಳಿಗೆ ತೆರಳುವಂತಾಯಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣಾರ್ಭಟ: ವಿಕೇಂಡ್ ಮೂಡ್ನಲ್ಲಿರುವ ಬೆಂಗಳೂರಿಗರಿಗೆ ಮಳೆ ಕಾಟ
ಶುಕ್ರವಾರ ಹೆಎಚ್ಎಸ್ಆರ್ ಲೇಔಟ್ನಲ್ಲಿ 35 ಮಿ.ಮೀ ಮಳೆಯಾಗಿದೆ. ಬಾಣಸವಾಡಿ 24 ಮಿ.ಮೀ, ರಾಮಮೂರ್ತಿ ನಗರ 22 ಮಿ.ಮೀ, ಹಂಪಿನಗರ 21 ಮಿ.ಮೀ, ವಿಶ್ವೇಶ್ವರಯ್ಯಪುರಂ 21 ಮಿ.ಮೀ, ಬಿಟಿಎಂ ಲೇಔಟ್ 16 ಮಿ.ಮೀ, ಚಾಮರಾಜಪೇಟೆ 16 ಮಿ.ಮೀ, ಬೊಮ್ಮನಹಳ್ಳಿ 18 ಮಿ.ಮೀ, ಬಸವನಪುರ 17.50 ಮಿ.ಮೀ, ಹೊರಮಾವು 16 ಮಿ.ಮೀ ಮತ್ತು ಕೋರಮಂಗಲದಲ್ಲಿ 16 ಮಿ.ಮೀ ಮಳೆಯಾಗಿದೆ.
ಅಕ್ಟೋಬರ್ 8ವರೆಗು ಬೆಂಗಳೂರಿನ ವಿವಿಧಡೆ ಬೆಳಗ್ಗೆ ಅಥವಾ ಸಂಜೆ ನಂತರ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆ ವೇಳೆ ಮನೆಯಿಂದ ಹೊರಗೆ ಹೋಗುವರು ಮತ್ತು ಕಚೇರಿ ನೌಕರರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಸಮುದ್ರ ಮೇಲ್ಮೈನಲ್ಲಿ ಉಂಟಾದ ಸ್ಟ್ರಫ್ ಕಾರಣದಿಂದ ಹಾಗೂ ಹಿಂಗಾರು ಮಳೆ ಸುರಿಸುವ ಮಾರುತಗಳು ನಿಗದಿತ ಸಮಯದಲ್ಲಿ ಸಕ್ರಿಯಗೊಂಡ ಪರಿಣಾಮ ಮಳೆಆಯಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Sat, 5 October 24